ಬೆಂಗಳೂರು: ಸ್ಯಾಂಡಲ್‍ವುಡ್ ಡೈನಾಮಿಕ ಸ್ಟಾರ್ ದೇವರಾಜ್ ಅವರು ಗುರುವಾರ ತಮ್ಮ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ದೇವರಾಜ್ ಅವರ ಹುಟ್ಟುಹಬ್ಬವನ್ನು ಅವರ ಮಗ ಹಾಗೂ ನಟ ಪ್ರಜ್ವಲ್ ಒಂದು ಕಡೆ ಆಚರಿಸಿದರೆ, ಮತ್ತೊಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ಆಚರಿಸಿದರು.
ಪ್ರಜ್ವಲ್ ದೇವರಾಜ್ ತನ್ನ ತಂದೆಯ ಹುಟ್ಟುಹಬ್ಬವನ್ನು ಅವರ ಅಭಿಮಾನಿಯಂತೆ ಕೇಕ್ ತಿನ್ನಿಸಿ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ತಮ್ಮ ಟ್ವಿಟ್ಟರಿನಲ್ಲಿ ಕೂಡ ತಮ್ಮ ತಂದೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
https://twitter.com/PrajwalDevaraj/status/1042732319059140609
ಪ್ರಜ್ವಲ್ ತನ್ನ ಟ್ವಿಟ್ಟರಿನಲ್ಲಿ, “ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನಿಮ್ಮನ್ನು ಹೊಗಳಲು ಯಾವುದೇ ಪದಗಳಿಲ್ಲ. ನಿಮ್ಮ ಮೇಲೆ ಅಭಿಮಾನವಿದೆ. ನೀವು ನನ್ನ ದೇವರು, ನನ್ನ ಶಕ್ತಿ, ನನ್ನ ಎಲ್ಲವೂ ನೀವೇ. ನಾನು ಯಾವಾಗಲೂ ನಿಮ್ಮ ಮುಖದಲ್ಲಿ ನಗು ಮೂಡಿಸಲು ಪ್ರಯತ್ನಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದರು.
ಮತ್ತೊಂದೆಡೆ ‘ಯಜಮಾನ’ ಚಿತ್ರದ ಸೆಟ್‍ನಲ್ಲಿ ಭಾಗಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದೇವರಾಜ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ದರ್ಶನ್ ಹಾಗೂ ಚಿತ್ರತಂಡದ ಸಮ್ಮುಖದಲ್ಲಿ ದೇವರಾಜ್ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ದರ್ಶನ್ ಹಾಗೂ ದೇವರಾಜ್ ಈ ಹಿಂದೆ ‘ತಾರಕ್’ ಚಿತ್ರದಲ್ಲಿ ನಟಿಸಿದ್ದರು. ಈಗ ದೇವರಾಜ್ ಅವರು ‘ಯಜಮಾನ’ ಚಿತ್ರದಲ್ಲೂ ದರ್ಶನ್ ಅವರ ಜೊತೆ ನಟಿಸುತ್ತಿದ್ದಾರೆ. ಅಲ್ಲದೇ ದರ್ಶನ್ ಅವರ ಮುಂದಿನ ‘ಒಡೆಯ’ ಚಿತ್ರದಲ್ಲೂ ದೇವರಾಜ್ ನಟಿಸಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv