ಬೆಂಗಳೂರು: ಹೊಸ ವರ್ಷದಲ್ಲಿ ಮೂರು ದಿನಕ್ಕೆ ಮೂರು ನಾಮ ಹಾಕಿದ್ದಾರೆ. ಇನ್ನೂ ಬಾಕಿಯಿದೆ ಎಂದು ಕಾಂಗ್ರೆಸ್ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಆರ್ ಅಶೋಕ್ ನೇತೃತ್ವದಲ್ಲಿ ಮೆಜೆಸ್ಟಿಕ್‌ನಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಹೆಣ್ಮಕ್ಕಳಿಗೆ ಫ್ರೀ ಕೊಟ್ಟು, ಗಂಡಸರಿಗೆ ಬರೆ ಕೊಡುತ್ತಿದ್ದೀರಿ. ಹಾಲು, ವಿದ್ಯುತ್, ನೋಂದಣಿ ದರ ಏರಿಕೆ ಮಾಡಿ ತಲೆ ಬೋಳಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಜ.6 ರಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಶುರುವಾಗಲ್ಲ: BMRCL ಸ್ಪಷ್ಟನೆ
ಕಾಂಗ್ರೆಸ್ ಸರ್ಕಾರದ ಖಾಜನೆ ಖಾಲಿಯಾಗಿದೆ. ದಿನ ದೂಡಲು ಹಣವೂ ಬೇಕು. ಆದ್ದರಿಂದ ಬರೆ ಹಾಕುವ ಕೆಲಸ ಮಾಡುತ್ತಿದೆ. ಬಿಜೆಪಿ ಸಾಲ ಮಾಡಿಲ್ಲ. ಕಾಂಗ್ರೆಸ್‌ನವರು ಸುಳ್ಳು ಹೇಳಬೇಡಿ. ದಿವಾಳಿ ಮಾಡಿರೋದು ಕಾಂಗ್ರೆಸ್ ಎಂದು ಹರಿಹಾಯ್ದರು. ಇದನ್ನೂ ಓದಿ: ಮಟನ್ 100 ರೂಪಾಯಿ ಇದ್ದದ್ದು 500 ರೂಪಾಯಿ ಆದ್ರೆ ತಗೋತೀರ – ಟಿಕೆಟ್ ದರ ಏರಿಕೆ ಬಗ್ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ
ಅಧಿಕಾರಿಗಳು ಸೂಸೈಡ್ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೆ ನೀವು ಸೂಸೈಡ್ ಭಾಗ್ಯ ಕೊಡುತ್ತಿದ್ದೀರಿ. ಈ ದರ್ಬಾರ್ ಜನರಿಗೆ ಸಾಕಾಗಿದೆ ಎಂದು ಗುಡುಗಿದರು. ಇದನ್ನೂ ಓದಿ: ಐಫೋನ್‌ನಿಂದ ಭಾರತದ ಕಾನೂನು ಉಲ್ಲಂಘನೆ – ಆಪಲ್‌ಗೆ ಸಿಸಿಐ ಬಿಸಿ