ಬೆಂಗಳೂರು: ಸಿದ್ದರಾಮಯ್ಯ ಬಳಿ 8 ವಾಚ್‌ಗಳಿವೆ. ಎಲ್ಲವೂ ಉಡುಗೊರೆ ನೀಡಿರುವುದಾಗಿ ಇದೆ ಎಂದು ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿ(Chalavadi Narayanaswamy) ಆರೋಪಿಸಿದ್ದಾರೆ.
ಸಿದ್ದರಾಮಯ್ಯ(Siddaramaiah) ಅವಧಿಯ ಹಗರಣಗಳನ್ನು ಕೆದಕಲು ಬಿಜೆಪಿ(BJP) ನೋಡುತ್ತಿದೆ. ಇದರ ಮೊದಲ ಭಾಗವಾಗಿ ಇವತ್ತು ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿ ವಾಚ್ ಬಾಂಬ್ ಸಿಡಿಸಿದ್ದಾರೆ. ಸಿದ್ದರಾಮಯ್ಯ ಬಳಿ 8 ವಾಚ್(Watch) ಇವೆ. ಕಲ್ಲಿದ್ದಲು ಡೀಲ್ ಭಾಗವಾಗಿ ಹೈದ್ರಾಬಾದ್ ಮೂಲದ ಉದ್ಯಮಿ ವಿಜಯ್ ಮಂದಾನಿಯಿಂದ ರೋಲೆಕ್ಸ್ ವಾಚ್ ಪಡೆದುಕೊಂಡಿದ್ದಾರೆ ಎಂದು ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಸದ್ಯದಲ್ಲೇ ಎಲ್ಲಾ 8 ವಾಚ್‍ಗಳ ಇತಿಹಾಸ ಬಿಚ್ಚಿಡ್ತೀನಿ ಎಂದು ಎಚ್ಚರಿಸಿದ್ದಾರೆ.
Advertisement
Advertisement
ಈ ಮಧ್ಯೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೊಮ್ಮೆ ಸಮನ್ಸ್ ನೀಡಿದೆ. ಇದಕ್ಕೆ ಡಿಕೆಶಿ ಗರಂ ಆಗಿದ್ದಾರೆ. ಭಾರತ್ ಜೋಡೋ, ಅಧಿವೇಶನ ನಡೆಯುತ್ತಿರುವ ಹೊತ್ತಲ್ಲೇ ನನಗೆ ಮತ್ತೊಮ್ಮೆ ಇಡಿ ಸಮನ್ಸ್ ನೀಡಿದೆ. ನಾನು ತನಿಖೆಗೆ ಸಹಕರಿಸಲು ಸಿದ್ಧ. ಆದರೆ, ಮೇಲಿಂದ ಮೇಲೆ ಸಮನ್ಸ್ ಕೊಟ್ಟು ಕಿರಕುಳ ನೀಡ್ತಿದ್ದಾರೆ. ಇದರಿಂದ ನನ್ನ ಸಾಂವಿಧಾನಿಕ ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ತೊಂದ್ರೆ ಆಗ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಭಾರತವನ್ನು ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರವಾಗಿ ರೂಪಿಸಿ – ಗೆಹ್ಲೋಟ್
Advertisement
Advertisement
ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿ, ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯ ತಯಾರಿಯಲ್ಲಿರುವ ಕಾಂಗ್ರೆಸ್‍ಗೆ ಅಡ್ಡಿ ಮಾಡಲು ಮೋದಿ ಸರ್ಕಾರ ಇಡಿಯನ್ನು ಛೂ ಬಿಟ್ಟಿದೆ. ಡಿಕೆಶಿ ಟಾರ್ಗೆಟ್ ಮಾಡಲು ಬಿಜೆಪಿ ಇಂತಹ ಹೇಡಿತನದ ಕೃತ್ಯಕ್ಕೆ ಮುಂದಾಗಿದೆ ಎಂದು ಟೀಕಿಸಿದ್ದಾರೆ. ಈ ಮಧ್ಯೆ ಮೈಸೂರಲ್ಲಿ ಮಾತಾಡಿದ ಡಿಕೆ ಶಿವಕುಮಾರ್, ದಾಖಲೆ ಒದಗಿಸುವಂತೆ ಸರ್ಕಾರದ ಮಂದಿ ಇಂಧನ ಇಲಾಖೆ ಅಧಿಕಾರಿಗಳನ್ನು ಹೆದರಿಸ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವಿರೋಧದ ಮಧ್ಯೆ ಮತಾಂತರ ನಿಷೇಧ ಮಸೂದೆ ಅಂಗೀಕಾರ