– ಡಿಕೆಶಿ ಒಬ್ಬ ಹಿಂದೂವಾದಿ ಅನ್ನೋದು ಸಾಬೀತಾಗಿದೆ ಎಂದ ಎಂಎಲ್‌ಸಿ
ಬೆಂಗಳೂರು: ಡಿಕೆಶಿಯವರನ್ನು ಕಾಂಗ್ರೆಸ್‌ನ (Congress) ಒಳಗೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಾಗ್ದಾಳಿ ನಡೆಸಿದರು.
Advertisement
ಅಮಿತ್ ಶಾ (Amit Shah) ಜೊತೆ ಡಿಕೆಶಿ ವೇದಿಕೆ ಹಂಚಿಕೊಂಡಿದ್ದಕ್ಕೆ ಕಾಂಗ್ರೆಸಿಗರು ಆಕ್ಷೇಪ ವ್ಯಕ್ತಪಡಿಸಿರುವ ವಿಚಾರವಾಗಿ ಮಾತನಾಡಿ, ಡಿಕೆಶಿ ಅಮಿತ್ ಶಾ ಜೊತೆ ರಾಜಕೀಯ ವೇದಿಕೆ ಹಂಚಿಕೊಳ್ಳಲಿಲ್ಲ. ರಾಜಕೀಯೇತರ ವೇದಿಕೆಯಲ್ಲಿ ಅಮಿತ್ ಶಾ ಜೊತೆ ಪಾಲ್ಗೊಂಡಿದ್ದರು. ಸದ್ಗುರು ಆಹ್ವಾನ ಮೇರೆಗೆ ಡಿಕೆಶಿಯವರು ಅಲ್ಲಿಗೆ ಹೋಗಿದ್ದಾರೆ. ಅದಕ್ಕೆ ಕಾಂಗ್ರೆಸ್‌ನಲ್ಲಿ ಆಕ್ಷೇಪ ಬರುತ್ತಿರುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಕಾರ್ಮೋಡ ಕವಿದಿತ್ತು.. ಮುತ್ತಿನ ಹನಿಗಳು ಉದುರಿತು.. ತೂಗುವ ತೊಟ್ಟಿಲು ಕೈತಪ್ಪಿತು.. ನಾನ್ ಇದ್ದೇನಲೇ ಪರಾಕ್!
Advertisement
Advertisement
ಡಿಕೆಶಿ ಕಾಂಗ್ರೆಸ್ ಅಧ್ಯಕ್ಷರು, ಆದರೆ ಅಮಿತ್ ಶಾ ಬಿಜೆಪಿ ಅಧ್ಯಕ್ಷರಲ್ಲ. ಡಿಕೆಶಿಯವರನ್ನು ಕಾಂಗ್ರೆಸ್‌ನ ಒಳಗೇ ಟಾರ್ಗೆಟ್ ಮಾಡಲಾಗುತ್ತಿದೆ. ಅವರನ್ನ ಟಾರ್ಗೆಟ್ ಮಾಡಿ ಮೂಲೆ ಗುಂಪು ಮಾಡುವ ಕೆಲಸ ಕಾಂಗ್ರೆಸ್‌ನಲ್ಲಿ ಆಗುತ್ತಿದೆ ಎಂದು ಹೇಳಿದರು.
Advertisement
ಡಿಕೆಶಿ ಒಬ್ಬ ಹಿಂದೂವಾದಿ ಎನ್ನುವುದು ಸಾಬೀತಾಗಿದೆ. ಆದ್ದರಿಂದ ಪಕ್ಷದಲ್ಲಿ ಅವರನ್ನು ಮೂಲೆಗೆ ಸರಿಸುವ ಕೆಲಸ ಶುರುವಾಗಿದೆ. ಆದರೆ ಅವರು ಅಮಿತ್ ಶಾ ಅವರನ್ನ ಭೇಟಿಯಾದರೂ ಎಂದು ಬಿಜೆಪಿಗೆ ಸೇರುತ್ತಾರೆ ಎನ್ನುವುದಲ್ಲ. ಡಿಕೆಶಿ ಬಿಜೆಪಿಗೆ ಬರ್ತಾರೆ ಅನ್ನೋದು ಊಹಾಪೋಹ ಅಷ್ಟೇ. ಆದರೂ ಆ ವಿಷಯವನ್ನು ತಳ್ಳಿ ಹಾಕಲೂ ಆಗುವುದಿಲ್ಲ. ಈ ಹಿಂದೆಯೂ ಇಂತಹ ಬೆಳವಣಿಗೆ ಆಗಿದೆ. ಬಿಜೆಪಿಗೆ ಬರ್ತಾರಾ ಇಲ್ವಾ ಅನ್ನೋ ಪ್ರಶ್ನೆಗೆ ಡಿಕೆಶಿ ಅವರೇ ಉತ್ತರ ಕೊಡಬೇಕು ಎಂದರು. ಇದನ್ನೂ ಓದಿ: ಏಕತೆಯ ಮಹಾ ಯಜ್ಞ ಪೂರ್ಣಗೊಂಡಿತು: ಐತಿಹಾಸಿಕ ಕುಂಭಮೇಳದ ಬಗ್ಗೆ ಮೋದಿ ಬಣ್ಣನೆ