– ಮುದ್ರಣದ ಕೆಲಸವನ್ನೇ ಮಾಡದ ಬ್ಲ್ಯಾಕ್‌ಲಿಸ್ಟೆಡ್ ಕಂಪನಿಗೆ ಟೆಂಡರ್
ಬೆಂಗಳೂರು: ರಾಜ್ಯ ಸರ್ಕಾರ ಲೂಟಿಯಲ್ಲಿ ತೊಡಗಿದೆ. ಕಾನೂನುಬಾಹಿರವಾಗಿ ಟೆಂಡರ್‌ಗಳನ್ನು ಮಾಡುತ್ತಿದೆ. ತನಗೆ ಬೇಕಾದವರಿಗೇ ಅವಕಾಶ ನೀಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ(Chalavadi Narayanaswamy) ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪಬ್ಲಿಕ್ ಪ್ರೊಕ್ಯರ‍್ಮೆಂಟ್ ಪೋರ್ಟಲ್‌ನಲ್ಲಿ ಟೆಂಡರ್‌ಗಳನ್ನು ಹಾಕುತ್ತಾರೆ. ಮಾರ್ಕ್ಸ್ ಕಾರ್ಡ್ ಪ್ರಿಂಟ್ ಮಾಡುವ ಕಾರ್ಯದಲ್ಲಿ ನಮ್ಮ ಸರ್ಕಾರ ಇರುವಾಗಲೂ ಟೆಂಡರ್ ನೀಡಿದ್ದು, ಒಂದು ಮಾರ್ಕ್ ಕಾರ್ಡ್ ಮುದ್ರಿಸಲು 9.45 ರೂ.ಗೆ ಟೆಂಡರ್ ಕೊಡಲಾಗಿತ್ತು. ಈ ಸರ್ಕಾರ ಬಂದ ಬಳಿಕ ಪ್ಯಾರಾ ಮೆಡಿಕಲ್ ಬೋರ್ಡ್ನ (Para Medical Board) ಟೆಂಡರ್ ಕರೆದಿದ್ದು, ಒಂದು ಮಾರ್ಕ್ ಕಾರ್ಡ್ ಮುದ್ರಿಸಲು 100 ರೂ. ಕೋರಲಾಗಿತ್ತು. ಮಾತುಕತೆ ಬಳಿಕ 91 ರೂ.ಗೆ ಇಳಿಸಲಾಗಿದೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಜಡ್ಜ್ ನಿವಾಸದಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸಿಜೆಐ ಕೈ ಸೇರಿದ ತನಿಖಾ ವರದಿ
ಕೆಲವೆಡೆ ವಿಷಯ ಹೊರಬಂದುದರಿಂದ ಮತ್ತೆ ಮಾತುಕತೆ ಮಾಡಿ, ಒಂದು ಮಾರ್ಕ್ ಕಾರ್ಡ್ ಮುದ್ರಿಸಲು 44 ರೂ., ಡಿಪ್ಲೊಮಾ ಸರ್ಟಿಫಿಕೇಟ್‌ಗೆ 47 ರೂ. ಎಂದು ಬದಲಿಸಿದ್ದರು. ಇಂಟರ್ನ್ಶಿಪ್ ಸರ್ಟಿಫಿಕೇಟ್‌ಗೆ 44 ರೂ. ನಿಗದಿ ಮಾಡಿ ವರ್ಕ್ ಆರ್ಡರ್ ಕೊಟ್ಟಿದ್ದಾರೆ. ಕಳೆದ ನವೆಂಬರ್ 29ರಂದು ಈ ವರ್ಕ್ ಆರ್ಡರ್ ಕೊಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ವಿಚಾರಣಾಧೀನ ಕೈದಿ ಪೊಲೀಸ್ ವಶಕ್ಕೆ
ನಗರದ ಸಂಜಯನಗರದ ಊರ್ದವ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ಗೆ ಈ ವರ್ಕ್ ಆರ್ಡರ್ ಕೊಡಲಾಗಿದೆ. ಇದು ಗೊತ್ತಾಗಿ ಜನವರಿ 8ರಂದು ನಾನು ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಆಗಿದೆ ಎಂದು ಅವರ ಗಮನ ಸೆಳೆದಿದ್ದೆ. ಇದುವರೆಗೂ ಉತ್ತರ ಕೊಟ್ಟಿಲ್ಲ. ಇದರ ಹಣಕಾಸಿನ ಬಿಡ್ 2024ರ ಏಪ್ರಿಲ್ 12ರಂದು ಅನುಮೋದನೆ ಪಡೆದಿದೆ. ಮೊದಲೇ ವರ್ಕ್ ಆರ್ಡರ್ ಕೊಡಲಾಗಿದೆ ಎಂದು ಆಕ್ಷೇಪಿಸಿ ಪತ್ರಗಳು ಹಾಗೂ ದಾಖಲೆಗಳನ್ನು ಪ್ರದರ್ಶಿಸಿದರು. ಇದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್‌ರ ಖಾತೆಗೆ ಸೇರಿದ್ದು ಎಂದರು. ಇದನ್ನೂ ಓದಿ: ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು
ಈ ಊರ್ದವ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬುದು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ. ಟೆಂಡರ್ ಅನ್ನು ಊರ್ದವ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ವೆಂಕಟರೆಡ್ಡಿ ಡಿ. ಪಾಟೀಲ್‌ರಿಗೆ ಕೊಟ್ಟಿದ್ದು, ಅವರು ಸಚಿವ ಡಾ.ಶರಣಪ್ರಕಾಶ್ ಪಾಟೀಲ್‌ರ (Dr. ShrarnPraksh Patil) ಹತ್ತಿರದ ಸಂಬಂಧಿ ಎಂದು ಆರೋಪಿಸಿದರು.
ಇದಕ್ಕೂ ಪ್ರಿಂಟಿಂಗ್‌ಗೂ ಏನೂ ಸಂಬಂಧ ಇಲ್ಲ. ಅವರು ಯಾವತ್ತೂ ಮುದ್ರಣದ ಕೆಲಸ ಮಾಡಿಲ್ಲ. ಸಚಿವರಿಗೆ ಬೇಕಾದವರಿಗೆ ಕೊಡಲು ಕ್ರಮ ಕೈಗೊಂಡಿದ್ದಾರೆ. ಇದು ಬ್ಲ್ಯಾಕ್ ಲಿಸ್ಟೆಡ್ ಕಂಪನಿ. ಇದರ ಮೇಲೆ ಸುಮಾರು 20ರಿಂದ 25 ಕೇಸ್‌ಗಳಿವೆ. ಇಂಥಾ ಕಂಪೆನಿಗೆ ಟೆಂಡರ್ ಕೊಡಲಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಯುದ್ಧ ಕಾರ್ಮೋಡ; ಭಾರತ ಸಮರಭ್ಯಾಸ – ಪಾಕ್‌ನಿಂದ ಫತಾಹ್ ಕ್ಷಿಪಣಿ ಪರೀಕ್ಷೆ
ಬ್ಲ್ಯಾಕ್ ಲಿಸ್ಟೆಡ್ ಕಂಪೆನಿಗೆ ಟೆಂಡರ್ ಕೊಟ್ಟಿದ್ದಾರೆ. ಹಣಕಾಸಿನ ಬಿಡ್ ಇಲ್ಲದೆ ಟೆಂಡರ್ ನೀಡಿದ್ದಾರೆ. ಈ ಸಂಬಂಧ ನಾನು ಎರಡು-ಮೂರು ಪತ್ರ ಬರೆದರೂ ಮುಖ್ಯ ಕಾರ್ಯದರ್ಶಿ, ಇಲಾಖೆಯಿಂದ ಒಂದೇ ಒಂದು ಉತ್ತರ ಬಂದಿಲ್ಲ. ನಾವು 9 ರೂ. 45 ಪೈಸೆಗೆ ಕೊಟ್ಟಾಗ 2.45 ಲಕ್ಷ ರೂ. ಎಂದು ತಿಳಿಸಿದ್ದೆವು. ಈ ಬಿಡ್‌ನಲ್ಲಿ ಎಷ್ಟು ಸಂಖ್ಯೆಯ ಸರ್ಟಿಫಿಕೇಟ್ ಮುದ್ರಣ ಎಂದು ತಿಳಿಸಿಲ್ಲ. ಅಂದರೆ ಅವರು ಎಷ್ಟು ಬೇಕಿದ್ದರೂ ಸಂಖ್ಯೆ ಹೇಳಿಕೊಳ್ಳಬಹುದು ಎಂದು ಟೀಕಿಸಿದರು.