ಬೆಂಗಳೂರು: ನಮ್ಮ ಯಜಮಾನ್ರು ಇಲ್ಲದನ್ನು ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಬದುಕಿದ್ದು ಸತ್ತಂತೆ ಇದ್ದೇವೆ, ನಾವು ಬದುಕಿರೋವರೆಗೆ ಯಜಮಾನರ ನೆನಪಲ್ಲೇ ಇರುತ್ತೇವೆ ಎಂದು ನಟ ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಅವರ ಬಾಡಿಗಾರ್ಡ್ ಆಗಿದ್ದ ಛಲಪತಿ ದುಃಖದಿಂದ ಹೇಳಿಕೊಂಡಿದ್ದಾರೆ.
Advertisement
ಪುನೀತ್ ಅಗಲಿ ಇಂದಿಗೆ ಮೂರು ತಿಂಗಳಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ತಮ್ಮ ನೋವನ್ನು ಹಂಚಿಕೊಂಡ ಅವರು, ಮೂರು ತಿಂಗಳು ಸತ್ತು ಬದುಕಿರುವಂತಿದೆ. ನಾವು ಇರಬೇಕು ಇದ್ದೀವಿ ಹಾಗೆ ಇದ್ದೇವೆ. ಯಜಮಾನರು ಇಲ್ಲದೆ ಯಾವುದು ನಡೀತಿಲ್ಲ. ಯಾವುದೇ ಊರುಗಳಿಗೆ ಹೋದರೂ ಯಜಮಾನರನ್ನು ನೋಡುತ್ತಿದ್ದೇನೆ ಅಭಿಮಾನಿಗಳ ಪ್ರೀತಿ ಕಾಣುತ್ತಿದ್ದೇನೆ. ನಾನು ಇನ್ನೂ ಅವರ ನೆನಪಿನಲ್ಲೇ ಇದ್ದೇನೆ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ಪುನೀತ್ ಅಗಲಿ ಇಂದಿಗೆ 3 ತಿಂಗಳು – ಅಪ್ಪು ನೆನಪಲ್ಲಿ ಅಶ್ವಿನಿಯಿಂದ 500 ಗಿಡಗಳ ದಾನ
Advertisement
Advertisement
ಯಜಮಾನರ ಜೊತೆ ಎಲ್ಲೇ ಹೊದ್ರು ಅವರ ಮಾತು ಹೊಸತು ಅನಿಸುತ್ತಿತ್ತು. ಪುನೀತ್ ರಾಜ್‍ಕುಮಾರ್ ಅವರನ್ನು ಮಾತನಾಡಿಸಬೇಕು, ಮುಟ್ಟಬೇಕೆಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ನನಗೆ ಯಜಮಾನರ ಸೇವೆ ಮಾಡೋಕೆ ಅವಕಾಶ ಸಿಕ್ಕಿದ್ದೆ ಅದೃಷ್ಟ ಅಷ್ಟೇ ದುರಾದೃಷ್ಟ ಇಷ್ಟು ಬೇಗ ಕಳೆದುಕೊಂಡಿದ್ದೇವೆ. ಅವರೊಂದಿಗಿದ್ದ ಪ್ರೀತಿ ನೆನಪು ಯಾವತ್ತು ಅಮರ ಎಂದರು. ಇದನ್ನೂ ಓದಿ: ಸಲಾಂ ಸೋಲ್ಜರ್, ದೇಶಕ್ಕೆ ನೀನೇ ಪವರ್ – ಪುನೀತ್ ಖದರ್
Advertisement
ಜೇಮ್ಸ್ ಪೋಸ್ಟರ್ ನೋಡಿ ತುಂಬಾ ಖುಷಿ ಆಯ್ತು. ಜೇಮ್ಸ್ ಸಿನಿಮಾದಲ್ಲಿ ಯಜಮಾನರ ಜೊತೆ ನಟಿಸಿದ್ದೇನೆ. ನಾನು ಯಜಮಾನರ ಜೊತೆ ಕಾಶ್ಮೀರಕ್ಕೆ ಈ ಚಿತ್ರದ ಶೂಟಿಂಗ್ ಹೋಗಿದ್ದೆ. ಅದೀಗ ನೆನಪು. ಎಲ್ಲಾ ಕಡೆ ಮೌನ ಆವರಿಸಿದೆ. ಅವರಿದ್ದರೆ ಎಲ್ಲ ಮುಂದೆ ಗೊತ್ತಿಲ್ಲ ಎಂದು ಗದ್ಗದಿತರಾದರು.