ಚಿಕ್ಕಮಗಳೂರು: ಬಿಗಿ ಪೊಲೀಸ್ ಭದ್ರತೆ ಮಧ್ಯೆ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ (Chakravarty Sulibele) ನಮೋ ಭಾರತ್ ಕಾರ್ಯಕ್ರಮ ಆಲ್ದೂರು (Aldur) ಪಟ್ಟಣದಲ್ಲಿ ಯಶಸ್ವಿಯಾಗಿ ಮುಕ್ತಾಯವಾಗಿದೆ.
ಚಿಕ್ಕಮಗಳೂರು ನಗರದಲ್ಲಿ ನಮೋ ಭಾರತ್ (Namo Bharat) ಕಾರ್ಯಕ್ರಮ ನಡೆದಾಗ ಯೂತ್ ಕಾಂಗ್ರೆಸ್ (Youth Congress) ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಆಲ್ದೂರು ಚಿಕ್ಕಮಗಳೂರು ಜಿಲ್ಲೆಯ ಸೂಕ್ಷ್ಮ ಪಟ್ಟಣವಾಗಿದ್ದ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದನ್ನೂ ಓದಿ: 70 ವರ್ಷಗಳ ಕಾಂಗ್ರೆಸ್ ದುರಾಡಳಿತದಿಂದ ಭಾರತ ಪ್ರಗತಿ ಕಂಡಿಲ್ಲ: ಜಗದೀಶ್ ಶೆಟ್ಟರ್
Advertisement
Advertisement
ಒಬ್ಬರು ಎಸ್‌ಪಿ, ಐದು ಪಿಎಸ್‌ಐ, ಇಬ್ಬರು ಇನ್ಸ್‌ಪೆಕ್ಟರ್, 200ಕ್ಕೂ ಅಧಿಕ ಪೊಲೀಸರ ಭದ್ರತೆಯಲ್ಲಿ ನಮೋ ಭಾರತ್ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು. ಇದನ್ನೂ ಓದಿ: ವಿರುಷ್ಕಾ ದಂಪತಿ ಪುತ್ರ ‘ಅಕಾಯ್’ ಹೆಸರಿನ ಅರ್ಥವೇನು ಗೊತ್ತಾ?
Advertisement
ಚಿಕ್ಕಮಗಳೂರಿನಲ್ಲಿ ಕಾರ್ಯಕ್ರಮ ನಡೆದಾಗ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿ, ಚಕ್ರವರ್ತಿ ಸೂಲೆಬೆಲೆ ವಿರುದ್ಧ ಅವಹೇಳನಕಾರಿ ಬ್ಯಾನರ್ ಹಾಕಿದ್ದರು. ಸೂಲಿಬೆಲೆ ಭಾಷಣದ ಹಿಂಭಾಗದಲ್ಲಿ ಬ್ಯಾನರ್ ಹಾಕಿದ್ದರಿಂದ ನೋಡ ನೋಡುತ್ತಿದ್ದಂತೆಯೇ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರು ಉದ್ರಿಕ್ತರಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
Advertisement
ಈ ಘಟನೆಯಿಂದ ಎಚ್ಚೆತ್ತ ಜಿಲ್ಲಾ ಪೊಲೀಸ್ ಒಬ್ಬರು ಎಎಸ್‌ಪಿ, ಪಿಎಸ್ಐ, ಸಿಪಿಐ, ಡಿವೈಎಸ್‌ಪಿ ಸೇರಿ 200ಕ್ಕೂ ಅಧಿಕ ಪೊಲೀಸರನ್ನು ಕಾರ್ಯಕ್ರಮಕ್ಕೆ ನಿಯೋಜನೆ ಮಾಡಿತ್ತು.