ನವದೆಹಲಿ: ದೇಶಭಕ್ತಿಯ ಕಾರಣಕ್ಕೆ ಸೂಲಿಬೆಲೆ (Chakravarti Sulibele) ಪ್ರಖ್ಯಾತರಾಗಿದ್ದಾರೆ. ಅವರ ಪ್ರಖ್ಯಾತಿ ಕುಗ್ಗಿಸಲು ಸಾಧ್ಯವಿಲ್ಲ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ (New Delhi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೂಲಿಬೆಲೆ ಬೆಂಬಲಿಗರು ತುಂಬಾ ಜನರಿದ್ದಾರೆ. ಕಾಂಗ್ರೆಸ್‌ನವರು (Congress) ದ್ವೇಷ, ಮತ್ಸರ ಹೊರ ಹಾಕುತ್ತಿದ್ದಾರೆ. ಅವರ ಅಧಿಕಾರದ ಮದವನ್ನು ಜನರು ಇಳಿಸುತ್ತಾರೆ ಎಂದರು. ಇದನ್ನೂ ಓದಿ: ಬೆಲೆ ಏರಿಕೆ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ – ಕಾಂಗ್ರೆಸ್ ಗ್ಯಾರಂಟಿ ಸೈಡ್ ಎಫೆಕ್ಟ್ ಎಂದು ಟೀಕೆ
Advertisement
Advertisement
ಪಠ್ಯದಿಂದ ಹೆಗಡೆವಾರು ಪಾಠ ತೆಗೆಯಲು ಕಾಂಗ್ರೆಸ್ ನಿರ್ಧಾರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೆಗಡೆವಾರು ಅವರನ್ನು ಪಠ್ಯದಿಂದ ಹೊರಹಾಕಬಹುದು, ಹೃದಯದಿಂದ ಹೊರಹಾಕಲು ಸಾಧ್ಯವಿಲ್ಲ. ಅವರು ಅಧಿಕಾರದಲ್ಲಿ ಇದ್ದಾರೆ, ಏನು ಬೇಕಾದರೂ ಮಾಡಬಹುದು. ಆದರೆ ಅವರ ಸಿದ್ಧಾಂತ ಜನರ ಮನಸ್ಸಿನಲ್ಲಿದೆ. ಅದನ್ನು ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಗಂಡ ತೆರಿಗೆ ಪಾವತಿ ಮಾಡಿದ್ರೆ ಮಾತ್ರ ಗೃಹಲಕ್ಷ್ಮಿ ಭಾಗ್ಯ ಇಲ್ಲ – ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ
Advertisement
ನೆಹರು, ಇಂದಿರಾ ಇದನ್ನು ಮಾಡಲು ಹೋಗಿ ಸೋತಿದ್ದಾರೆ. ಕಾರ್ಲ್ ಮಾರ್ಕ್ಸ್ ಪಠ್ಯ ಓದಬಹುದು. ಆರ್‌ಎಸ್‌ಎಸ್ (RSS) ನಾಯಕರದ್ದು ಬೇಡವೇ? ಇವರ ನೆರವು ಇಲ್ಲದೆ ಸಂಘದ ಶಾಖೆಯ ಮೂಲಕವೇ ವಿಚಾರ ಬೆಳೆಯಲಿದೆ. ಸುಳ್ಳು ಮತ್ತು ಕಾಂಗ್ರೆಸ್ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ನಾಯಕರು ಕುರ್ಚಿಗೆ ಅಂಗಲಾಚಿದ್ದರು. ಕಾಂಗ್ರೆಸ್‌ನವರನ್ನು ಯಾಕೆ ಅಂಡಮಾನ್ ಜೈಲಿಗೆ ಹಾಕಲಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ: ಪ್ರಿಯಾಂಕ್ ಖರ್ಗೆ
Advertisement
ಅತ್ತೆ ಆಸ್ತಿಯನ್ನು ಅಳಿಯ ದಾನ ಮಾಡಿದಂತೆ ಸದ್ದಿಲ್ಲದೆ ವಿದ್ಯುತ್ ಬಿಲ್ ಏರಿಸುತ್ತಿದ್ದಾರೆ. ಹಾಲಿನ ದರವನ್ನೂ ಏರಿಸುತ್ತಿದ್ದಾರೆ. ಕೆಕೆಆರ್‌ಡಿಬಿ (KKRDB) ಅಕ್ರಮ ಆಗಿದ್ದರೆ ಕ್ರಮ ತೆಗೆದುಕೊಳ್ಳಿ. ಅರ್ಕಾವತಿ ಹಣವನ್ನು ತನಿಖೆ ಮಾಡಿ. 8,000 ಕೋಟಿ ನಷ್ಟದ ಬಗ್ಗೆಯೂ ತನಿಖೆ ಮಾಡಲಿ. ತೆರಿಗೆ ಕಟ್ಟುವವರ ಮೇಲೆ ಯಾಕೆ ಬರೆ ಹಾಕುತ್ತೀರಿ? ಸೋಲಾರ್ ಪವರ್ ಪ್ಲಾಂಟ್‌ನಲ್ಲಿರುವ ಅಕ್ರಮದ ಬಗ್ಗೆಯೂ ತನಿಖೆ ನಡೆಯಲಿ. ಇದರ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿಲ್ವಾ? ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಭಯವೇ ಎಂದು ಕೇಳಿದರು. ಇದನ್ನೂ ಓದಿ: ಸಿದ್ದು ಪ್ರಮಾಣವಚನ ವೇಳೆ ವೇದಿಕೆಯಲ್ಲಿ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿ – ತನಿಖೆಗೆ ರಾಜ್ಯಪಾಲರ ಪತ್ರ
ಸೋಲಿಗೆ ಕಾರಣವಾದ ಹತ್ತಾರು ಅಂಶಗಳ ಬಗ್ಗೆ ಚರ್ಚೆಯಾಗಿದೆ. ಹೊರಗಡೆ ಏನು ಹೇಳಬೇಕು ಅದನ್ನು ಹೇಳಿದ್ದೇವೆ. ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ. ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿತು. ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ ಸೋತಿದೆ. ಇವತ್ತು ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಮ್ಮ ಪಕ್ಷದ ನಾಯಕರ ವಿರುದ್ಧವೇ ಬಹಿರಂಗ ಅಸಮಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಅತ್ತೆ, ಸೊಸೆ ಇಬ್ಬರಿಗೂ ಎರಡು ಸಾವಿರ ಹಣ ನೀಡಿ: ರೇಣುಕಾಚಾರ್ಯ