– ಅಮೆರಿಕ ಪ್ರಾಯೋಜಿತ ಮತಾಂತರ, ದೇಶ ವಿರೋಧಿ ಷಡ್ಯಂತ್ರಕ್ಕೆ ಹಿಂದೂ ಸಮಾಜ ಬಲಿಯಾಗ್ತಿದೆ
– ಧರ್ಮ ರಕ್ಷಣೆಗಾಗಿ ಸರ್ವಸ್ವದ ತ್ಯಾಗಕ್ಕೂ ಸಿದ್ಧರಾಗಬೇಕು ಎಂದ ಚಿಂತಕ
ಮಂಗಳೂರು: ಅಮೆರಿಕ ಪ್ರಾಯೋಜಿತ ಮತಾಂತರ ಹಾಗೂ ದೇಶ ವಿರೋಧಿ ಷಡ್ಯಂತ್ರಕ್ಕೆ ಹಿಂದೂ ಸಮಾಜ ವ್ಯಾಪಕವಾಗಿ ಬಲಿಯಾಗುತ್ತಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರು (Mangaluru) ಹೊರವಲಯ ಬಂಟ್ವಾಳದಲ್ಲಿ ನಡೆದ ʻಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಗ್ರಹಿಸಿ ಪ್ರಾಂತೀಯ ಹಿಂದೂ ರಾಷ್ಟ್ರʼ ಅಧಿವೇಶನದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ ಗಂಗೆಯ ಸ್ವರೂಪ, ಹಿಂದೂ ಧರ್ಮದ ಮೇಲೆ ಯಾಕಿಷ್ಟು ಕೋಪ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೇದಾರನಾಥಲ್ಲಿ ʻಹಿಂದೂಯೇತರರʼ ಪ್ರವೇಶ ನಿಷೇಧಿಸಿ – ಬಿಜೆಪಿ ಶಾಸಕಿ ವಿವಾದಿತ ಹೇಳಿಕೆ
ಹೋಳಿ, ದೀಪಾವಳಿ ಯಾವುದೇ ಹಿಂದೂ ಹಬ್ಬ ಇರಲಿ ಹಿಂದೂ ಧರ್ಮದ ಮೇಲೆ ನಿರಂತರ ಸಾಂಸ್ಕೃತಿಕ ಆಘಾತ ನಡೆಯುತ್ತಿದೆ. ಹಿಂದೂಗಳ ಆಚರಣೆಗಳನ್ನು ಮಾಧ್ಯಮಗಳ ಮೂಲಕ ಅಪಹಾಸ್ಯ ಮಾಡಲಾಗುತ್ತಿದೆ. ಹಿಂದೂಗಳ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಸಂತರ ಮೇಲೆ ಆರೋಪಗಳನ್ನು ಹಾಕಲಾಗುತ್ತದೆ, ಆಕ್ರಮಣ ಮಾಡಲಾಗುತ್ತದೆ. ಎಡಪಂಥೀಯರು ಹಿಂದೂಗಳನ್ನು ಜಾತಿ, ಮತ, ಪಂಥಗಳ ಹೆಸರಿನಲ್ಲಿ ವಿಭಜಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾಡಾನೆ ಸೆರೆ ಮೊದಲ ದಿನದ ಕಾರ್ಯಾಚರಣೆ ಯಶಸ್ವಿ – ಸತತ 4 ಗಂಟೆಗಳ ನಂತರ ಒಂಟಿಸಲಗ ಸೆರೆ
ಅಮೆರಿಕ ಪ್ರಾಯೋಜಿತ ಮತಾಂತರ ಹಾಗೂ ದೇಶ ವಿರೋಧಿ ಷಡ್ಯಂತ್ರಕ್ಕೆ ಹಿಂದೂ ಸಮಾಜ ವ್ಯಾಪಕವಾಗಿ ಬಲಿಯಾಗುತ್ತಿದೆ. ಇದೆಲ್ಲದಕ್ಕೂ ಪರಿಹಾರವೆಂದರೆ ನಮ್ಮ ಧರ್ಮ ರಕ್ಷಣೆ ನಮ್ಮದೇ ಕರ್ತವ್ಯವಾಗಿದೆ ಎಂಬ ಅರಿವು ಮೂಡಿಸುವುದು. ಧರ್ಮ ರಕ್ಷಣೆಗಾಗಿ ಸರ್ವಸ್ವದ ತ್ಯಾಗ ಮಾಡಲು ನಾವು ಸಿದ್ಧರಾಗಿರಬೇಕು. ಹಿಂದೂ ಸಮಾಜ ಜಾಗೃತವಾದರೆ ಇತರರು ಏನೂ ಮಾಡಲು ಸಾಧ್ಯವಿಲ್ಲ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರದ ನಿರ್ಲಕ್ಷ್ಯಕ್ಕೆ ಸರ್ಕಾರಿ ಶಾಲೆಗಳಿಗೆ ಆಪತ್ತು – ಜಿಲ್ಲೆಯಲ್ಲಿ 579 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ದಾಖಲಾತಿ