ಬೀದರ್: ನಮೋ ಭಾರತ್ ಕಾರ್ಯಕ್ರಮವನ್ನು ಅನೇಕ ಕಡೆ ತಡೆಯುವಂತಹ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಪ್ರಿಯಾಂಕ್ ಖರ್ಗೆ (Priyank Kharge) ಕ್ಷೇತ್ರ ಚಿತ್ತಾಪುರದಲ್ಲಿ ಕಾರ್ಯಕ್ರಮ ತಡೆಯುವ ಕೆಲಸ ಆಗಿದ್ದು, ಅವರ ಕ್ಷೇತ್ರದಲ್ಲಿ ಪ್ರಧಾನಿ ಮೋದಿ (Narendra Modi) ಸಾಧನೆ ಬಗ್ಗೆ ಮಾತಾಡೋದನ್ನು ಅವರಿಂದ ಸಹಿಸೋಕೆ ಆಗುತ್ತಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಕಿಡಿಕಾರಿದ್ದಾರೆ.
ಬೀದರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಧಿಕಾರದ ಮದ, ಆತಂಕದಿಂದ ಚಿತ್ತಾಪುರದಲ್ಲಿ ಕಾರ್ಯಕ್ರಮ ನಡೆಯದಂತೆ ಪ್ಲ್ಯಾನ್ ಮಾಡಿದ್ದಾರೆ. ಬುಧವಾರ ತಡರಾತ್ರಿ ತಹಶೀಲ್ದಾರ್ ಕಡೆಯಿಂದ ಪತ್ರಕೊಟ್ಟು, ನಿಮ್ಮ ಕಾರ್ಯಕ್ರಮ ಕ್ಯಾನ್ಸಲ್ ಮಾಡಲಾಗಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಬಳಿಕ ಜಿಲ್ಲೆಯ ಗಡಿಯಲ್ಲಿ ಯಾವ ಆದೇಶ ಇಲ್ಲದೇ ತಡೆಯುವ ಕೆಲಸ ಮಾಡಿದ್ದಾರೆ. ಮಧ್ಯರಾತ್ರಿವರೆಗೂ ಅಲ್ಲೇ ಇದ್ದು, ಆದೇಶ ಪ್ರತಿ ಕೊಡುವ ತನಕ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದೆ. ರಾತ್ರಿ 1 ಗಂಟೆಗೆ ಆದೇಶ ಪ್ರತಿ ಕೊಟ್ಟರು ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: BBMP Budget 2024: ಪಾಲಿಕೆಯ ಶಾಲಾ/ಕಾಲೇಜು ವಿದ್ಯಾರ್ಥಿಗಳು, ಪೋಷಕರಿಗೆ ‘ಆಯುಷ್ಮಾನ್ ಭಾರತ್’ ವಿಮೆ!
Advertisement
Advertisement
ಕಾರ್ಯಕ್ರಮದ ಪರವಾನಿಗೆ, ಮೈಕ್ ಪರವಾನಗಿ ಕ್ಯಾನ್ಸಲ್ ಮಾಡಿ ಕಾಂಗ್ರೆಸ್ (Congress) ನನಗೆ ವಿನಾಕಾರಣ ಕಿರುಕುಳ ನೀಡಿದೆ. ತುರ್ತಾಗಿ ಕಮಿಷನರ್ ಬಳಿ ಆದೇಶ ಪ್ರತಿ ತಂದು ಕಾರ್ಯಕ್ರಮ ಕ್ಯಾನ್ಸಲ್ ಮಾಡಿದ್ದಾರೆ. ಸರ್ಕಾರದ ಸೂತ್ರ ಹಿಡಿದ ಈ ಜನ ಪ್ರಜಾಪ್ರಭುತ್ವದ ಬಗ್ಗೆ ಮಾತಾಡಿ, ಸಂವಿಧಾನ ಉಳಿಸಿ ಎಂದು ಹೇಳುತ್ತಾರೆ. ಮತ್ತೊಂದೆಡೆ ವ್ಯಕ್ತಿಯೊಬ್ಬನ ಹಕ್ಕು ತಡೆಯುವ ಈ ಪ್ರಯತ್ನ ಮಾಡುತ್ತಾರೆ. ಈ ನಡೆ ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
Advertisement
Advertisement
ಕರ್ನಾಟಕದಲ್ಲಿ ನಾವು ಹಾಕಿದ ಒಂದು ಮತ ರಾಜ್ಯದಲ್ಲಿ ಇಂತಹ ಸರ್ಕಾರವನ್ನು ತಂದಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ‘ಜೈ ಸೀತಾರಾಮ್’ ಎಂದು ಘೋಷಣೆ ಕೂಗಿದ ಸಿದ್ದರಾಮಯ್ಯ; ಬಿಜೆಪಿಗೆ ಠಕ್ಕರ್