ನವದೆಹಲಿ: ಬಿಜೆಪಿ (BJP) ಪಕ್ಷದಲ್ಲಿ ಟಿಕೆಟ್ ಮಾರಾಟಕ್ಕಿಲ್ಲ ಎನ್ನವುದು ಚೈತ್ರಾ ಕುಂದಾಪುರ (Chaitra Kundapur) ಪ್ರಕರಣದಲ್ಲಿ ಸಾಬೀತಾಗಿದೆ. ಸಮಯದ ದುರ್ಬಳಕೆ ಮಾಡಿಕೊಂಡು ಗೋವಿಂದ್ ಬಾಬು ಪೂಜಾರಿಗೆ ವಂಚಿಸುವ ಕೆಲಸ ಮಾಡಿದೆ. ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರ್ತಾರೆ ಎನ್ನುವುದು ಮರೆಯಬಾರದು ಎಂದು ಮಾಜಿ ಶಾಸಕ ಸಿಟಿ ರವಿ (CT Ravi) ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಣ ಕೊಟ್ಟು ಟಿಕೆಟ್ ಖರೀದಿ ಸಾಧ್ಯವಿಲ್ಲ. ಹಣದ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ಮುಂದೆ ಯಾರು ಮಾಡಬಾರದು. ಒಂದು ವೇಳೆ ಮಾಡಿದರೆ ಮತ್ತೊಬ್ಬ ಗೋವಿಂದ ಪೂಜಾರಿ ಆಗುತ್ತೀರಿ ಎಂದು ಎಚ್ಚರಿಕೆ ನೀಡಿದರು.
Advertisement
Advertisement
ಬಿಜೆಪಿ ದೊಡ್ಡ ಪಕ್ಷವಾಗಿದೆ. ಇಲ್ಲಿ ಎಲ್ಲ ತರದ ಜನರು ಇದ್ದಾರೆ. ಸಿದ್ಧಾಂತಕ್ಕಾಗಿ, ಸೇವೆಗಾಗಿ, ಜನಪ್ರತಿನಿಧಿಯಾಗಲು ಜನರು ಪಕ್ಷಕ್ಕೆ ಬರುತ್ತಾರೆ. ಕೆಲವರು ಸಮಯದ ದುರ್ಬಳಕೆ ಮಾಡಿಕೊಳ್ಳಲು ಪಕ್ಷಕ್ಕೆ ಬರುತ್ತಾರೆ. ಮೋಸ ಮಾಡಲೆಂದು ದೊಡ್ಡವರ ಹೆಸರು ಬಳಕೆ ಮಾಡಲಾಗುತ್ತದೆ. ಬಿಜೆಪಿ ಚುನಾವಣಾ ಸಮಿತಿಯಲ್ಲಿದ್ದವರಿಗೆ ತಮಗೆ ಬೇಕಾದ ಅಭ್ಯರ್ಥಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ಒಮ್ಮತ ನಿರ್ಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ. ಹಣದ ಮೂಲಕ ಟಿಕೆಟ್ ಸಿಗುವ ಪ್ರಶ್ನೆಯೇ ಇಲ್ಲ ಎಂದರು. ಇದನ್ನೂ ಓದಿ: ನಾವು ಯಾರು ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿಲ್ಲ: ಶೋಭಾ ಕರಂದ್ಲಾಜೆ
Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದ್ದಾರೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಹೀಗೆ ಎಲ್ಲ ಪ್ರಮುಖ ನಾಯಕರಿದ್ದಾರೆ. ಟಿಕೆಟ್ಗಾಗಿ ಅವರನ್ನು ಸಂಪರ್ಕಿಸಬೇಕು. ಕನಿಷ್ಠ ದುಡ್ಡು ಕೊಡುವ ಮುನ್ನವಾದರೂ ಗಮನಕ್ಕೆ ತರಬಹುದಿತ್ತು. ಯಾರಿಗೂ ಹೇಳದೇ ಹಣ ನೀಡುವ ಕೆಲಸ ಮಾಡಿದ್ದಾರೆ. ಬಿಜೆಪಿ ಕಾಲಲ್ಲಿ ಚಪ್ಪಲಿ ಹಾಕದವರಿಗೆ ಟಿಕೆಟ್ ನೀಡಿದೆ ಎನ್ನುವುದು ಯಾರು ಮರೆಯಬಾರದು ಎಂದರು.
Advertisement
ಇಡೀ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿಲ್ಲ. ಘಟನೆಯ ಒಂದು ಭಾಗ ಚಿಕ್ಕಮಗಳೂರು ಅಷ್ಟೇ. ಇದು ಬೆಳಕಿಗೆ ಬರುವ ಮುನ್ನ ನನಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: 8 ಎಕರೆ ಜಮೀನು ಖರೀದಿ, ಪೆಟ್ರೋಲ್ ಬಂಕ್ ನಿರ್ಮಾಣ – ಅಭಿನವ ಹಾಲಾಶ್ರೀ ಈಗ ನಾಪತ್ತೆ
Web Stories