ಬೆಂಗಳೂರು: 10 ರಾಜ್ಯಗಳ ಚೈತನ್ಯ ಸ್ಕೂಲ್‌ನ 73 ಶಾಖೆಗಳಿಂದ 400 ಜೂಮ್ ಲಿಂಕ್ಸ್ ಮೂಲಕ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು 100 ನಿಮಿಷಗಳಲ್ಲಿ ಮಗ್ಗಿ ಪಠಿಸುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ – ಲಂಡನ್ (World Book of Records London) ದಾಖಲೆ ಮಾಡಿದ್ದಾರೆ.
ಬೆಂಗಳೂರಿನ (Bengaluru) ಜಯನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 1 ರಿಂದ 100ರವರೆಗೆ ಮ್ಯಾಥ್ ಟೇಬಲ್ಸ್‌ಗಳನ್ನು (ಮಗ್ಗಿ) 100 ನಿಮಿಷಗಳಲ್ಲಿ ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ಮೂಲಕ ಶ್ರೀ ಚೈತನ್ಯ ಟೆಕ್ನೋ ಶಾಲೆಗಳ (Chaitanya Techno School) ಮಕ್ಕಳು ಹ್ಯಾಟ್ರಿಕ್ ವಿಶ್ವ ದಾಖಲೆ ನಿರ್ಮಿಸಿದರು. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕ್‌ನಲ್ಲಿ ಅಗತ್ಯ ವಸ್ತುಗಳ ಕೊರತೆ, ಚಿಕನ್ ಬೆಲೆಯೂ ಗಗನಕ್ಕೆ
Advertisement
Advertisement
ಈ ಕಾರ್ಯಕ್ರಮದಲ್ಲಿ ಚೈತನ್ಯ ಟೆಕ್ನೋ ಶಾಲೆಯ ಮ್ಯಾವರಿಕ್ಸ್ ವಿಭಾಗದ 5 ರಿಂದ 9ನೇ ವಯಸ್ಸಿನ ಮಕ್ಕಳು ಭಾಗವಹಿಸಿದ್ದರು. ಈ ಶಾಲೆಯೂ ಸತತವಾಗಿ ಮೂರು ವರ್ಷಗಳಿಂದ ಈ ದಾಖಲೆ ನಿರ್ಮಿಸಿದ್ದಾರೆ. ಚೈತನ್ಯ ಟೆಕ್ನೋ ಸ್ಕೂಲ್ ಪ್ರತೀ ವರ್ಷವೂ ಮಕ್ಕಳಿಗೆ ಬೇರೆ ಬೇರೆ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿ ತಮ್ಮ ಸಂಸ್ಥೆಯ ಮಕ್ಕಳ ಹೆಸರನ್ನು ವರ್ಲ್ಡ್ ರೆಕಾರ್ಡ್‌ನಲ್ಲಿ ನೊಂದಾಯಿಸುವಲ್ಲಿ ಸಹಕರಿಸುತ್ತಾ ಬಂದಿದೆ. ಇದನ್ನೂ ಓದಿ: ಇಂದು ಕೂಡಲಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀ ಅಸ್ಥಿ ವಿಸರ್ಜನೆ
Advertisement
ಚೈತನ್ಯ ಶಾಲೆಗಳ ಶೈಕ್ಷಣಿಕ ನಿರ್ದೇಶಕಿ ಮಾತನಾಡಿ, ಈ ದಾಖಲೆಯನ್ನು ʼವರ್ಲ್ಡ್ ಆಫ್ ರೆಕಾರ್ಡ್ ಲಂಡನ್ʼ ಮೇಲ್ವಿಚಾರಣೆ ನಡೆಸಿತು. ಮಕ್ಕಳ ಮಾನಸಿಕ ಬುದ್ಧಿಮತೆಯನ್ನು ಹೆಚ್ಚಿಸಲು ಇಂತಹ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಸಾ ಹಮ್ಮಿಕೊಳ್ಳುವ ವಿಶ್ವ ಸ್ಪೇಸ್ ಸೆಟಲ್ಮೆಂಟ್ ಸ್ಪರ್ಧೆಯಲ್ಲಿ ಚೈತನ್ಯ ಟೆಕ್ನೋ ಶಾಲೆ ಭಾಗವಹಿಸಿ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದು ತಿಳಿಸಿದರು.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k