ಚಿಕ್ಕಬಳ್ಳಾಪುರ: ಬುರ್ಖಾ ಧರಿಸಿಕೊಂಡು ಬಸ್‌ಗೆ ಹತ್ತಿದ್ರೆ ಸಾಕು ಆ ಮೂರ್ನಾಲ್ಕು ಮಂದಿ ಮಹಿಳೆಯರು (Womens) ಬಸ್‌ನಲ್ಲಿ ಮಹಿಳೆಯರ ಕತ್ತಲ್ಲಿರೋ ಚಿನ್ನದ ಸರ ಹಾಗೂ ಬ್ಯಾಗ್‌ಗಳಲ್ಲಿರೋ ಕ್ಯಾಷ್ ಎಗರಿಸದೇ ಬಸ್‌ನಿಂದ ಕೆಳಗೆ ಇಳಿಯುತ್ತಿರಲಿಲ್ಲ… ಇಂತಹ ಖತರ್ನಾಕ್ ಬುರ್ಖಾಧಾರಿ ಮೂವರು ಕಿಲಾಡಿ ಕಳ್ಳಿಯರನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪೊಲೀಸರು (Gauribidanur Police) ಬಂಧಿಸಿದ್ದಾರೆ.
Advertisement
ಅಂದಹಾಗೆ ಕಲಬುರಗಿ (Kalaburagi) ಮೂಲದ ರೇಖಾ ಬಾಯಿ, ಕರೀನಾ, ರೋಜಾ ಬಂಧಿತರಾಗಿದ್ದು ಪುಷ್ಪಾ ತಲೆಮರೆಸಿಕೊಂಡಿದ್ದಾಳೆ. ಅಂದಹಾಗೆ ಈ ನಾಲ್ವರಲ್ಲಿ ಪುಷ್ಪಾ ಹಾಗೂ ರೇಖಾ ಅಕ್ಕ ತಂಗಿಯರಾಗಿದ್ದು, ರೋಜಾ ಹಾಗೂ ಕರೀನಾ ಸಹ ಸಹೋದರಿಯರಾಗಿದ್ದಾರೆ. ನಾಲ್ವರು ಒಂದೇ ಕುಟುಂಬದವರಾಗಿದ್ದು ಬಸ್ ನಿಲ್ದಾಣ ಜನಸಂದಣಿ ಪ್ರದೇಶಗಳಲ್ಲಿ ಕಳವು ಮಾಡೋದೆ ಇವರ ಕಾಯಕವಾಗಿತ್ತು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ – `ಮುದ್ದುಲಕ್ಷ್ಮಿ’ ಸೀರಿಯಲ್ ನಟ ಚರಿತ್ ಬಾಳಪ್ಪ ಬಂಧನ
Advertisement
Advertisement
ಕಳೆದ ನವೆಂಬರ್ 16 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಬಸ್ ನಿಲ್ದಾಣದಲ್ಲಿ ಶಾಂತಕುಮಾರಿ ಎಂಬಾಕೆ ಬೆಂಗಳೂರು ಬಸ್ ಹತ್ತುವ ಸಮಯದಲ್ಲಿ ಆಕೆಯ ಕತ್ತಿನಲ್ಲಿದ್ದ 50 ಗ್ರಾಂ ತೂಕದ 2 ಎಳೆ ಚಿನ್ನದ ಸರ ಕಳವು ಮಾಡಿದ್ರು. ಅದೇ ದಿನ ರತ್ನಮ್ಮ ಎಂಬಾಕೆಯ ಬ್ಯಾಗ್ ನಲ್ಲಿದ್ದ 1 ಲಕ್ಷ ಹಣ ಸಹ ಎಗರಿಸಿ ಎಸ್ಕೇಪ್ ಆಗಿದ್ರು. ಈ ಸಂಬಂಧ ಎರಡು ಪ್ರಕರಣಗಳ ದೂರು ಪಡೆದ ಪೊಲೀಸರು ಸಿಸಿಟಿವಿಗಳನ್ನ ಪರಿಶೀಲನೆ ಮಾಡಿದಾಗ ನಾಲ್ವರು ಬುರ್ಖಾಧಾರಿ ಮಹಿಳೆಯರ ಮೇಲೆ ಅನುಮಾನ ಮೂಡಿತ್ತು.
Advertisement
ನಂತರ ಇದೇ ಗೌರಿಬಿನದೂರು ಬಸ್ ನಿಲ್ದಾಣದಲ್ಲಿ ಕಳೆದ 3 ದಿನಗಳ ಹಿಂದೆ ಮತ್ತೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದಾಗ ರೆಡ್ ಹ್ಯಾಂಡಾಗಿ ಪೊಲೀಸರು ಮಹಿಳೆಯರನ್ನ ಬಂಧಿಸಿದ್ದಾರೆ. ಇನ್ನೂ ಸಿಸಿಟಿವಿ ಪರಿಶೀಲನೆ ವೇಳೆ ಮಹಿಳೆ ಬುರ್ಖಾ ಮೇಲೆ ಹಾಕಿದ್ದ ವೇಲ್ ಗಮನಿಸಿದ್ದ ಪೊಲೀಸರು ಮತ್ತೆ ಅದೇ ವೇಲ್ ಧರಿಸಿ ಮಹಿಳೆ ಇರೋದನ್ನ ಕಂಡು ಅನುಮಾನಗೊಂಡು ಬಂಧಿಸಿದ್ರು. ಬಳಿಕ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ – ಮೂವರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು
ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಈ ಕಳ್ಳಿಯರು ರಾಜ್ಯದ ನಾನಾ ಕಡೆ ಕಳ್ಳತನ ಮಾಡಿದ್ದಾರೆ. ಇನ್ನೂ ಬಂಧಿತರಿಂದ ಕಳವು ಮಾಡಿದ್ದ ಚಿನ್ನ ಹಾಗೂ ನಗದು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಸೋಷಿಯಲ್ ಮೀಡಿಯಾ ಸ್ಟಾರ್ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ