ಮೈಸೂರು: ಪೂರ್ವ ಕರಾವಳಿ ರಾಜ್ಯಗಳಲ್ಲಿ ಫೋನಿ ಚಂಡಮಾರುತ ಎಫೆಕ್ಟ್ ಹಿನ್ನಲೆಯಲ್ಲಿ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ(ಸಿಎಫ್‌ಟಿಆರ್‌ಐ) ತುರ್ತು ಆಹಾರವನ್ನು ರವಾನಿಸಿದೆ.
ಒಡಿಶಾದ 1 ಲಕ್ಷ ಮಂದಿಗೆ ಆಗುವಷ್ಟು ಆಹಾರ ಪೂರೈಕೆ ಮಾಡಲಾಗಿದ್ದು, ತಕ್ಷಣ ತಿನ್ನುವ ಹಾಗೂ ಬೇಯಿಸಿ ತಿನ್ನುವ ಆಹಾರ ಪೊಟ್ಟಣಗಳನ್ನು ಕಳುಹಿಸಲಾಗಿದೆ. ಕಳೆದ ಎರಡು ದಿನಗಳಿಂದ ಹಗಲಿರುಳು ದುಡಿದ ಸಿಎಫ್‌ಟಿಆರ್‌ಐ ಸಿಬ್ಬಂದಿ ಭಾನುವಾರ ರಾತ್ರಿ ಒಂದು ಕಂಟೈನರ್, ಇಂದು ಮತ್ತೊಂದು ಕಂಟೈನರ್ ನಲ್ಲಿ ಒಟ್ಟು 2.5 ಟನ್ ತೂಕದ ಆಹಾರವನ್ನು ಸಾಗಿಸಿದ್ದಾರೆ.
Advertisement
Advertisement
ಏರ್ ಇಂಡಿಯಾದ ಮೂಲಕ ಸಿಎಫ್‌ಟಿಆರ್‌ಐ ಆಹಾರವನ್ನು ಒಡಿಶಾಕ್ಕೆ ತಲುಪಿಸಲಾಗಿದೆ. ತಕ್ಷಣ ತಯಾರಿಸಿ ತಿನ್ನುವ ಅವಲಕ್ಕಿ, ಉಪ್ಪಿಟ್ಟು, ರೇಡಿ ಟು ಈಟ್ ಉಪ್ಮ, ದೀರ್ಘಕಾಲ ಇಡಬಹುದಾದ ಚಪಾತಿ, ಟೋಮ್ಯಾಟೋ ಚಟ್ನಿ ಹಾಗೂ ಹೈಪ್ರೋಟಿನ್ ಒಂದು ಹೊತ್ತಿನ ಆಹಾರ ಸಮಾನದ ಬಿಸ್ಕೆಟ್ ಪ್ಯಾಕ್‍ಗಳನ್ನು ರವಾನಿಸಲಾಗಿದೆ.