ಬೆಂಗಳೂರು: ಇಂದು ರಾಜ್ಯ ಸಿಇಟಿ ಫಲಿತಾಂಶ ಪ್ರಕಟಗೊಂಡಿದೆ. ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ, ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ.
ಎಲ್ಲಾ ವಿಭಾಗಗಳ ಟಾಪರ್‍ಗಳ ಪಟ್ಟಿ ಇಲ್ಲಿದೆ
ಎಂಜಿನಿಯರಿಂಗ್ ವಿಭಾಗ:
1. ಪ್ರತೀಕ್ ಎಸ್. ನಾಯಕ್- ಎಕ್ಸ್ ಪರ್ಟ್ ಪಿಯು ಕಾಲೇಜ್, ಮಂಗಳೂರು
2. ಸುಮಂತ್ ಆರ್. ಹೆಗಡೆ- ವಿವಿಎಸ್ ಸರ್ದಾರ್ ಪಿಯು ಕಾಲೇಜ್, ಬೆಂಗಳೂರು
3. ಅನಿರುದ್ಧ್- ಆರ್.ವಿ. ಪಿಯು ಕಾಲೇಜ್, ಜಯನಗರ
Advertisement
ಐಎಸ್‍ಎಂಎಚ್ ಕೋರ್ಸ್:
1. ರಕ್ಷಿತಾ ರಮೇಶ್- ಭಗವಾನ್ ಮಹಾವೀರ್ ಜೈನ್ ಕಾಲೇಜ್, ಬೆಂಗಳೂರು
2. ವಿಕ್ಟರ್ ಥಾಮಸ್ – ವೈಷ್ಣವಿ ಪಿಯು ಕಾಲೇಜ್, ದಾವಣಗೆರೆ
3. ನಾಸಿರ್ ಹುಸೇನ್ – ಇಂಡಿಪೆಂಡೆಂಟ್ ಪಿಯು ಕಾಲೇಜ್
Advertisement
ಬಿವಿಎಸ್ ಕೋರ್ಸ್:
1. ವಿಕ್ಟೋರಿ ಥಾಮಸ್- ವೈಷ್ಣವಿ ಚೇತನ ಪಿಯು ಕಾಲೇಜ್, ದಾವಣಗೆರೆ
2. ರಕ್ಷಿತಾ ರಮೇಶ್- ಮಹಾವೀರ್ ಜೈನ್ ಕಾಲೇಜ್, ಬೆಂಗಳೂರು
3. ಭರತ್ ಕುಮಾರ್- ಆಳ್ವಾಸ್ ಪಿಯು ಕಾಲೇಜ್, ಮಂಗಳೂರು
Advertisement
ಬಿಎಸ್ಸಿ ಕೋರ್ಸ್:
1. ರಕ್ಷಿತಾ ರಮೇಶ್- ಮಹಾವೀರ ಜೈನ್ ಕಾಲೇಜ್, ಬೆಂಗಳೂರು
2. ಸಂಕೀರ್ಥ ಸದಾನಂದ- ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು
3. ಅನನ್ಯಾ- ಮಹಾವೀರ್ ಜೈನ್ ಕಾಲೇಜ್, ಬೆಂಗಳೂರು
Advertisement
ಬಿ ಫಾರ್ಮ್ ಕೋರ್ಸ್:
1. ಪ್ರತೀಕ್ ಎಸ್ ನಾಯಕ್- ಎಕ್ಸ್ ಪರ್ಟ್ ಪಿಯು ಕಾಲೇಜ್, ಮಂಗಳೂರು
2. ಸುಮನ್ ಆರ್ ಹೆಗಡೆ- ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜ್, ಬೆಂಗಳೂರು
3. ಧ್ರುವ ಶ್ರೀರಾಮ್- ದೀಕ್ಷಾ ಪಿಯು ಕಾಲೇಜ್, ಬೆಂಗಳೂರು
ಪರೀಕ್ಷೆಗಳು ಇದೇ ತಿಂಗಳು ಮೇ 2, 3 ಮತ್ತು 4ರಂದು ನಡೆದಿದ್ದವು. ಒಟ್ಟು 1,80,508 ವಿದ್ಯಾರ್ಥಿಗಳು ಎಕ್ಸಾಂ ಬರೆದಿದ್ರು. ಭಾರತೀಯ ವೈದ್ಯ ಪದ್ಧತಿಗೆ 96,643 ವಿದ್ಯಾರ್ಥಿಗಳಿಗೆ ಶ್ರೇಯಾಂಕ ನೀಡಲಾಗಿದೆ. ಎಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 1,25,860 ವಿದ್ಯಾರ್ಥಿಗಳಿಗೆ ಕ್ರಮಾಂಕ ನೀಡಲಾಗಿದೆ. ಕೃಷಿ ಕೋರ್ಸ್ ಗೆ 95,767, ಪಶುಸಂಗೋಪನೆ ಕೋರ್ಸ್‍ಗೆ 94,478 ಮತ್ತು ಬಿ ಫಾರ್ಮ್ ಗೆ 1,26,839 ವಿದ್ಯಾರ್ಥಿಗಳಿಗೆ ಕ್ರಮಾಂಕಗಳನ್ನು ನೀಡಲಾಗಿದೆ.
ಈ ಬಾರಿ ನೀಟ್ ಕಡ್ಡಾಯ ಹಿನ್ನಲೆಯಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳಿಗೆ ಹೊರತುಪಡಿಸಿ ಎಂಜಿನಿಯರಿಂಗ್ ಕೋರ್ಸ್ ಸೇರಿದಂತೆ ಉಳಿದ ವೃತ್ತಿಪರ ಕೋರ್ಸ್ ಗಳಿಗೆ ಮಾತ್ರ ಸಿಇಟಿ ನಡೆದಿತ್ತು.