ನವದೆಹಲಿ: ತೂಕ ಇಳಿಸಿಕೊಳ್ಳಿ ಹಾಗೂ 10 ಲಕ್ಷ ರೂ. ಯನ್ನು ಬಹುಮಾನವಾಗಿ ಗೆಲ್ಲಿ! ಹೀಗೊಂದು ಫಿಟ್ನೆಸ್ ಚ್ಯಾಲೆಂಜ್ (Fitness Challenge) ಅನ್ನು ಕಂಪನಿಯೊಂದರ ಸಿಇಒ (CEO) ತನ್ನ ಉದ್ಯೋಗಿಗಳಿಗೆ (Employees) ನೀಡಿದ್ದಾರೆ.
ಹೌದು, ಆನ್ಲೈನ್ ಬ್ರೋಕರೇಜ್ ಕಂಪನಿ Zerodha ತನ್ನ ಉದ್ಯೋಗಿಗಳಿಗೆ ಹೊಸ ಫಿಟ್ನೆಸ್ ಸವಾಲನ್ನು ನೀಡಿದೆ. ಕಂಪನಿಯ ಸಿಇಒ ನಿತಿನ್ ಕಾಮತ್ (Nithin Kamath), ಈ ಸವಾಲನ್ನು ಪೂರ್ಣಗೊಳಿಸುವುದರಿಂದ ಉದ್ಯೋಗಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಮಾತ್ರವಲ್ಲದೇ ಒಬ್ಬ ಅದೃಷ್ಟಶಾಲಿ ಉದ್ಯೋಗಿ 10 ಲಕ್ಷ ರೂ. ಬಹುಮಾನವನ್ನು (Reward) ಗೆಲ್ಲಬಹುದು ಎಂದಿದ್ದಾರೆ.
Advertisement
Advertisement
ತಮ್ಮ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ಸಂದರ್ಭದಲ್ಲಿ ಹೆಚ್ಚು ಸಕ್ರಿಯರಾಗಿರುವಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯ ಹೆಚ್ಚಿನ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದು, ಇದರಿಂದ ಅವರು ಹೆಚ್ಚು ಸಕ್ರಿಯರಾಗದೇ ಇರಲು ಕಾರಣವಾಗಿದೆ. ಇದೀಗ ನಾವು ನಮ್ಮ ಉದ್ಯೋಗಿಗಳನ್ನು ಆಶಾದಾಯಕವಾದ ಮಾರ್ಗದಿಂದ ಸಕ್ರಿಯರನ್ನಾಗಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ನಿತಿನ್ ಕಾಮತ್ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ದುರಾಡಳಿತದಿಂದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆಯಾಗಿದೆ: ಕಾಂಗ್ರೆಸ್
Advertisement
Advertisement
ಕೋವಿಡ್ ಪ್ರಾರಂಭವಾದಾಗಿನಿಂದ ನನ್ನ ತೂಕ ದಿನೇ ದಿನೆ ಹೆಚ್ಚಾಗಲಾರಂಭಿಸಿತು. ಬಳಿಕ ನಾನು ಫಿಟ್ನೆಸ್ ಟ್ರ್ಯಾಕರ್ ಆಪ್ ಬಳಸಿ ಹಲವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡೆ. ಡಯಟ್ ಬಗೆಗೂ ಹೆಚ್ಚಿನ ಕಾಳಜಿ ವಹಿಸಿದೆ. ನಿಧಾನವಾಗಿ ಪ್ರತಿ ದಿನ ಕಡಿತಗೊಳಿಸಬೇಕಾದ ಕ್ಯಾಲರಿಯನ್ನು 1,000ಕ್ಕೆ ಏರಿಸಿದೆ. ನನ್ನ ಫಿಟ್ನೆಸ್ ಪ್ರಯಾಣ ಹೀಗಿತ್ತು. ಇದೀಗ ಈ ಚಟುವಟಿಕೆಯ ಟ್ರ್ಯಾಕರ್ಗಳನ್ನು ಬಳಸುವ ನನ್ನ ಉದ್ಯೋಗಿಗಳ ಫಲಿತಾಂಶವನ್ನು ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು ಕಾಮತ್ ಹೇಳಿದ್ದಾರೆ. ಇದನ್ನೂ ಓದಿ: 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಹೀಗಾಗಿತ್ತು, ಇದೀಗ ಮತ್ತೆ? – ಏನಿದು ಧೋನಿ ಲಾಜಿಕ್