ನವದೆಹಲಿ: ಈಗಾಗಲೇ ಚೀನಾ ದೇಶದ ಶಾಂಘೈನಗರದಲ್ಲಿ ಕೋವಿಡ್ ಹೆಚ್ಚಳವಾಗಿದ್ದು ಹಿರಿಯ ನಾಗರಿಕರ ಸರಣಿ ಸಾವುಗಳು ಸಂಭವಿಸುತ್ತಿದೆ. ಕೊರೊನಾ ನಿಯಂತ್ರಿಸಲು ಚೀನಾ ಸರ್ಕಾರವೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಇದೀಗ ಭಾರತದಲ್ಲೇ 5 ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿರುವುದು ನಾಲ್ಕನೇ ಅಲೆಯ ಮುನ್ಸೂಚನೆ ನೀಡಿದಂತಾಗಿದೆ.
Advertisement
ಚೀನಾ, ಅಮೆರಿಕ ಮತ್ತು ಯೂರೋಪ್ನ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್ನ ರೂಪಾಂತರ ತಳಿಯಾದ ಓಮೈಕ್ರಾನ್ನ ಉಪ ತಳಿಯಾದ XE ತಳಿಯೂ ಸಹ ಭಾರತದಲ್ಲಿ 2 ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಭಾರತದ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಇದನ್ನೂ ಓದಿ: XE ರೂಪಾಂತರಿ ಮಾರಣಾಂತಿಕವಲ್ಲ: ಮಹಾರಾಷ್ಟ್ರ ಸಚಿವ
Advertisement
ದೇಶದ ಕೇರಳ, ಹರಿಯಾಣ, ಮಹಾರಾಷ್ಟ್ರ ದೆಹಲಿ ಹಾಗೂ ಮಿಜೋರಾಂಗಳಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಿ ಪತ್ರ ಬರೆದಿದೆ. ಕೋವಿಡ್ ಹೆಚ್ಚಳದ ಬಗ್ಗೆ ನಿಗಾ ವಹಿಸಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳಲ್ಲಿ ನಿಯಂತ್ರಣಾ ಕ್ರಮ ಕೈಗೊಳ್ಳಬೇಕು ಎಂದೂ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: 26 ಮಿಲಿಯನ್ ಜನರ ಕೋವಿಡ್ ಪರೀಕ್ಷೆಗೆ ಸಾವಿರಾರು ಮಿಲಿಟರಿ, ವೈದ್ಯರನ್ನು ಶಾಂಘೈಗೆ ಕಳುಹಿಸಿದ ಚೀನಾ
Advertisement
Advertisement
ಭಾರತದಲ್ಲಿ ವರದಿಯಾದ ಒಟ್ಟು ಹೊಸ ಪ್ರಕರಣಗಳಲ್ಲಿ ಶೇ 31.8ರಷ್ಟು. ಕೋವಿಡ್ ಪಾಸಿಟಿವಿಟಿ ದರ ಅಲ್ಲಿ ಶೇ.13.45 ರಿಂದ 15.53ಕ್ಕೆ ಹೆಚ್ಚಾಗಿದೆ. ಅಲ್ಲದೆ ಕಳೆದ ವಾರ ಕೇರಳದಲ್ಲಿ 2321 ಹೊಸ ಪ್ರಕರಣಗಳು ವರದಿಯಾಗಿವೆ. ಏ.1ಕ್ಕೆ ಅಂತ್ಯಗೊAಡ ಒಂದು ವಾರ ದೆಹಲಿಯಲ್ಲಿ 724ಪ್ರಕರಣಗಳು ವರದಿಯಾಗಿದ್ದವು. ಆದರೆ ಏಪ್ರಿಲ್ 8ರ ಹೊತ್ತಿಗೆ 826 ಹೊಸ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರದಲ್ಲಿ ಶೇ 0.51 ರಿಂದ 1.25ರಷ್ಟು ಹೆಚ್ಚಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಭಾನುವಾರವೂ ಸಹ ಭಾರತದಾದ್ಯಂತ 1,054 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 29 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.