ನವದೆಹಲಿ: ಆಪ್ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ ಅವರ ಭದ್ರತೆಯನ್ನು ಗೃಹ ಸಚಿವಾಲಯವು ವೈನಿಂದ ಇದೀಗ ವೈ ಪ್ಲಸ್‍ಗೆ ಹೆಚ್ಚಳ ಮಾಡಿದೆ.
ಭದ್ರತೆ ಮತ್ತು ಗುಪ್ತಚರದ ವರದಿಯನ್ನು ಆಧರಿಸಿ ಎಂಎಚ್‍ಎ ಕುಮಾರ್ ವಿಶ್ವಾಸ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮೂಲಗಳ ಪ್ರಕಾರ, ಈ ವೈ ಪ್ಲಸ್ ಭದ್ರತೆಯನ್ನು ಅವರಿಗೆ ದೇಶಾದ್ಯಂತ ನೀಡಲಾಗುವುದು.
Advertisement
Advertisement
ಈ ಹಿಂದೆ ಕುಮಾರ್ ವಿಶ್ವಾಸ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರತ್ಯೇಕತಾವಾದಿ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಮ್ ಆದ್ಮಿ ಪಕ್ಷದ (ಎಎಪಿ) ಕುಮಾರ್ ವಿಶ್ವಾಸ್ ಅವರಿಗೆ ವೈ ಶ್ರೇಣಿ ಭದ್ರತೆ ನೀಡಿತ್ತು. ಇದನ್ನೂ ಓದಿ: ನೇಪಾಳದಲ್ಲಿ ಮೊದಲ ಪೌರತ್ವ ತಿದ್ದುಪಡಿ ಅಂಗೀಕಾರ
Advertisement
ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಿಶ್ವಾಸ್ ಅವರಿಗೆ ಬೆದರಿಕೆ ಇದೆ ಎಂದು ಭದ್ರತೆ ಮತ್ತು ಗುಪ್ತಚರ ಮಾಹಿತಿ ಆಧರಿಸಿ ಭದ್ರತೆ ಒದಗಿಸುತ್ತಿದ್ದೇವೆ ಎಂದು ತಿಳಿಸಿತ್ತು.
Advertisement
ವೈ ಪ್ಲಸ್ ಭದ್ರತೆಯಲ್ಲಿ 11 ಸಶಸ್ತ್ರ ಪೊಲೀಸ್ ಕಮಾಂಡೋಗಳನ್ನು ನಿಯೋಜಿಸಲಾಗಿದೆ. 11 ಮಂದಿಯಲ್ಲಿ ಐವರು ಸ್ಟ್ಯಾಟಿಕ್ ಪೊಲೀಸ್ ಸಿಬ್ಬಂದಿ, ಭದ್ರತೆಗಾಗಿ ವಿಐಪಿ ಮನೆ ಮತ್ತು ಸುತ್ತಮುತ್ತ ವಾಸಿಸಲಿದ್ದಾರೆ. ಅಲ್ಲದೆ, ಮೂರು ಪಾಳಿಗಳಲ್ಲಿ 6 ರಕ್ಷಣಾ ಸೇವಾ ಅಧಿಕಾರಿಗಳು (ಪಿಎಸ್‍ಒ) ಸಿಬ್ಬಂದಿ ಇರುತ್ತಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಷಣಕ್ಷಣಕ್ಕೂ ವಿಷಮ ಸ್ಥಿತಿ – ಓರ್ವ ನಾಗರಿಕ ಸಾವು, 35 ಮಂದಿಗೆ ಗಾಯ