ನವದೆಹಲಿ: ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಜವಾಬ್ದಾರಿಯುತವಾಗಿಸಲು ಕಾನೂನು ಬದಲಾವಣೆಗಳನ್ನು ತರಲು ಯೋಜಿಸಲಾಗಿದೆ ಎಂದು ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚು ಜವಾಬ್ದಾರಿಯುತವಾಗಿಸಬೇಕು ಎಂದು ದೇಶದಲ್ಲಿ ಒಮ್ಮತವಿದೆ. ಮೊಬೈಲ್ ಫೋನ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಇಂಟರ್‌ನೆಟ್ ಪರಿವರ್ತಕ ಬದಲಾವಣೆಗಳನ್ನು ಮಾಡಿದೆ. ಆದರೆ ಅವರೂ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
Advertisement
Advertisement
ಸಾಮಾಜಿಕ ಜಾಲತಾಣಗಳಿಗೆ ಕಾನೂನು ಬದಲಾವಣೆಗಳ ಅಗತ್ಯವಿದೆ, ಅದನ್ನು ನಾವು ಜಾರಿಗೊಳಿಸುತ್ತೇವೆ. ಮಾಧ್ಯಮ ಗುಂಪುಗಳಲ್ಲಿ ಸ್ವಯಂ ನಿಯಂತ್ರಣದ ಅಗತ್ಯವಿದೆ, ಸ್ವಯಂ ನಿಯಂತ್ರಣವನ್ನೂ ಮಾಡಿಸುತ್ತೇವೆ. ಅಗತ್ಯವಿರುವಲ್ಲೆಲ್ಲಾ ನಾವು ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಜವಾಬ್ದಾರಿಯುತವಾಗಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ವರ್ಕ್ ಔಟ್ ಆಯ್ತು ಮೋದಿಯ ಮನ್ ಕೀ ಬಾತ್ ಐಡಿಯಾ – ಎಂ.ಟೆಕ್ ಪದವೀಧರೆಯ ಬಾಳು ಬೆಳಗುತ್ತಿದೆ ಬಾಳೆ ದಿಂಡು
Advertisement
ಬದಲಾವಣೆ ಏನು?
ಕೇಂದ್ರ ಸರ್ಕಾರ ಈ ಹಿಂದಿನ ಸಾಮಾಜಿಕ ಮಾಧ್ಯಮದ ನಿಯಮಗಳನ್ನು ಅಂತಿಮಗೊಳಿಸುವಲ್ಲಿ ಕೆಲಸ ಮಾಡುತ್ತಿದೆ. ಹೊಸದಾಗಿ ಜಾರಿಗೆ ತರಲಿರುವ ನಿಯಮಗಳು ಅನಿಯಂತ್ರಿತ ಕಂಟೆಂಟ್ ಮಾಡರೇಶನ್, ನಿಷ್ಟ್ರಿಯತೆ ಅಥವಾ ಯಾವುದೇ ವಿವರಣೆಯಿಲ್ಲದ ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ನಂತಹ ದೊಡ್ಡ ಟೆಕ್ ಕಂಪನಿಗಳು ಮಾಡಿದ ಪೋಸ್ಟ್‌ಗಳನ್ನು ತೆಗೆದು ಹಾಕುವ ನಿರ್ಧಾರದ ವಿರುದ್ಧವಾಗಿದೆ ಹಾಗೂ ಬಳಕೆದಾರರು ಕುಂದುಕೊರತೆಗಳನ್ನು ಎತ್ತಿ ತೋರಿಸುವ ಅವಕಾಶವನ್ನು ಪಡೆಯುತ್ತಾರೆ ಎನ್ನಲಾಗಿದೆ.
Advertisement
ಈ ತಿಂಗಳ ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಾಮಾಜಿಕ ಮಾಧ್ಯಮ ಬಳಕೆದಾರರು ಕಂಪನಿಗಳಿಗೆ ಮಾಡಿದ ದೂರುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಪಡೆಯುವಂತಹ ಹೊಸ ಕರಡು ನಿಯಮವನ್ನು ಬಿಡುಗಡೆ ಮಾಡಿತು. ಇದರ ಪ್ರಕಾರ ಸಾಮಾಜಿಕ ಮಾಧ್ಯಮಗಳ ನಿರ್ಧಾರಗಳ ವಿರುದ್ಧ ಮೇಲ್ಮನವಿಗೆ ಸಲ್ಲಿಸಲು ಬಳಕೆದಾರರಿಗೆ ಅವಕಾಶ ಒದಗಿಸುತ್ತದೆ. ಪ್ರಸ್ತುತ ಯಾವುದೇ ದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳು ಮೇಲ್ಮನವಿ ಕಾರ್ಯವಿಧಾನವನ್ನು ಹೊಂದಿಲ್ಲ. ಇದನ್ನೂ ಓದಿ: ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲ್ಲ: ಫಾರೂಕ್ ಅಬ್ದುಲ್ಲಾ
ವರದಿಗಳ ಪ್ರಕಾರ ಈ ಹೊಸ ನಿಯಮ ಜುಲೈ ಕೊನೆಯಲ್ಲಿ ಅಂತಿಮಗೊಳಿಸಲು ಸರ್ಕಾರ ಯೋಜಿಸಿದೆ.