ನವದೆಹಲಿ: ದೇಶದ ಜನ ಸಂಖ್ಯೆಯ ಅಧಿಕೃತ ಸಮೀಕ್ಷೆಯಾದ ಜನಗಣತಿಯನ್ನು (Census) ಸರ್ಕಾರ 2025ರಲ್ಲಿ ಆರಂಭಿಸುವ ನಿರೀಕ್ಷೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ಪ್ರಕ್ರಿಯೆಯು 2025 ರಲ್ಲಿ ಆರಂಭಗೊಂಡು 2026 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಜನಗಣತಿಯ ನಂತರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ (Lok Sabha Delimitation Process) ಕೆಲಸ ಆರಂಭಗೊಂಡು 2028ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: Women’s Reservation Bill: ಹಾಲಿ ಮಹಿಳಾ ಸದಸ್ಯರ ಸಂಖ್ಯೆ 82, ಜಾರಿಯಾದ್ರೆ 181ಕ್ಕೆ ಏರಿಕೆ – ಜಾರಿ ಯಾವಾಗ?
Advertisement
Advertisement
ಜನಗಣತಿಯ ನಂತರ ಲೋಕಸಭಾ ಸ್ಥಾನಗಳ ಪುನರ್ ವಿಂಗಡನೆ ಪ್ರಾರಂಭವಾಗುತ್ತದೆ ಮತ್ತು ಈ ಕಸರತ್ತು 2028 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಜಾತಿ ಗಣತಿಗೆ ಹಲವು ವಿರೋಧ ಪಕ್ಷಗಳ ಬೇಡಿಕೆಗಳ ನಡುವೆ ಈ ಬೆಳವಣಿಗೆ ನಡೆದಿದೆ. ಆದರೆ, ಸರ್ಕಾರ ಇನ್ನೂ ಅಧಿಕೃತ ನಿರ್ಧಾರ ಕೈಗೊಂಡಿಲ್ಲ, ಜನಗಣತಿ ಪ್ರಕ್ರಿಯೆಯ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಿದೆ.
Advertisement
ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ನವೀಕರಿಸಲು ಸಾಮಾನ್ಯವಾಗಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುವ ಜನಗಣತಿಯನ್ನು 2021 ಕ್ಕೆ ನಿಗದಿಪಡಿಸಲಾಗಿತ್ತು ಆದರೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಬೇಕಾಯಿತು. ಈಗ ಜನಗಣತಿ ಚಕ್ರವು ಬದಲಾಗುವ ನಿರೀಕ್ಷೆಯಿದೆ.
Advertisement
ಮುಂಬರುವ ಜನಗಣತಿ ಸುತ್ತಿನಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಎಣಿಕೆಗಳೊಂದಿಗೆ ಧರ್ಮ ಮತ್ತು ಸಾಮಾಜಿಕ ವರ್ಗದ ಸಾಮಾನ್ಯ ಸಮೀಕ್ಷೆಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಮುಂದಿನ ವರ್ಷದ ಜನಗಣತಿಯು ಸಾಮಾನ್ಯ ಮತ್ತು ಎಸ್‌ಸಿ-ಎಸ್‌ಟಿ ವರ್ಗಗಳೊಳಗಿನ ಉಪ-ಪಂಗಡಗಳನ್ನೂ ಸಮೀಕ್ಷೆ ಮಾಡಬಹುದು ಎಂದು ಮೂಲಗಳು ಹೇಳಿವೆ.
ಹೆಚ್ಚು ವಿಳಂಬವಾಗಿರುವ ಜನಗಣತಿ ಪ್ರಕ್ರಿಯೆಗಳ ತಕ್ಷಣದ ಆರಂಭದ ಸುಳಿವು ನೀಡಿರುವ ಸರ್ಕಾರ ಪ್ರಸ್ತುತ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿರುವ ಮೃತುಂಜಯ್ ಕುಮಾರ್ ನಾರಾಯಣ್ ಅವರ ಕೇಂದ್ರ ನಿಯೋಜನೆಯನ್ನು ಇತ್ತೀಚೆಗೆ ಆಗಸ್ಟ್ 2026 ರವರೆಗೆ ವಿಸ್ತರಿಸಲಾಗಿದೆ.