ನವದೆಹಲಿ: ಕಾಂಗ್ರೆಸ್ (Congress) ಪಕ್ಷಕ್ಕೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಲೋಕಸಭಾ ಚುನಾವಣೆ (Lok Sabha Election) ಮುಗಿಯುವರೆಗೂ ಬಾಕಿ ಉಳಿಸಿಕೊಂಡಿರುವ ಸುಮಾರು 3,500 ಕೋಟಿ ರೂ. ತೆರಿಗೆ ವಸೂಲಿ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ಭರವಸೆ ನೀಡಿದೆ.
ಆದಾಯ ತೆರಿಗೆ (Income Tax) ಇಲಾಖೆ ಒಟ್ಟು 3,567 ಕೋಟಿ ರೂ. ಬಾಕಿ ತೆರಿಗೆ ಪಾವತಿಸುವಂತೆ ನೀಡಿದ ನೋಟಿಸ್ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾ. ಬಿ.ವಿ.ನಾಗರತ್ನ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತು. ಇದನ್ನೂ ಓದಿ: ಕೇಜ್ರಿವಾಲ್‌ಗೆ 15 ದಿನ ನ್ಯಾಯಾಂಗ ಬಂಧನ – ತಿಹಾರ್ ಜೈಲಿಗೆ ಶಿಫ್ಟ್ ಆಗಲಿದ್ದಾರೆ ದೆಹಲಿ ಸಿಎಂ
Advertisement
Advertisement
ಈ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಚುನಾವಣೆ ನಡೆಯುತ್ತಿರುವುದರಿಂದ ಮತ್ತು ಚುನಾವಣೆಯ ನಂತರದ ವಿಚಾರಣೆಯವರೆಗೆ ಬಾಕಿ ಉಳಿಸಿರುವ ತೆರಿಗೆ ವಸೂಲಿ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ದಯವಿಟ್ಟು ಜೂನ್ ಎರಡನೇ ವಾರದಲ್ಲಿ ಈ ವಿಚಾರವನ್ನು ಪಟ್ಟಿ ಮಾಡಿ ಎಂದು ಮನವಿ ಮಾಡಿದರು.
Advertisement
ಸರ್ಕಾರದ ಈ ಮನವಿಯನ್ನು ಕೇಳಿ ನ್ಯಾ. ನಾಗರತ್ನ ಅವರು, ನೀವು ಯಾರೊಬ್ಬರ ಬಗ್ಗೆ ಯಾವಾಗಲೂ ನಕಾರಾತ್ಮಕವಾಗಿ ಗ್ರಹಿಸಬಾರದು ಎಂದು ಕಾಂಗ್ರೆಸ್ ಪರ ಹಾಜರಾಗಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ ಲಘುವಾಗಿ ಹೇಳಿದರು. ಇದಕ್ಕೆ ಸಿಂಘ್ವಿ, ನಾನು ಮೂಖನಾಗಿದ್ದೇನೆ. ಕೆಲವೇ ಬಾರಿ ನಾನು ಮೂಖನಾಗಿದ್ದೇನೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ಇದನ್ನೂ ಓದಿ: ತಾಯಿ ಪ್ರಮೋದಾ ದೇವಿ ಮುಂದೆ ಬಿ ಫಾರಂ ಪಡೆದ ಯದುವೀರ್
Advertisement
ಕೇಂದ್ರ ಸರ್ಕಾರದ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ ಎರಡನೇ ವಾರಕ್ಕೆ ಮುಂದೂಡಿತು.