ನವದೆಹಲಿ: ಕೇಂದ್ರ ಸರ್ಕಾರ 21 ರಾಜ್ಯಗಳಿಗೆ ಸರಕು ಮತ್ತು ಸೇವಾ ತೆರಿಗೆ (GST) ಪರಿಹಾರ ಹಣ ಬಿಡುಗಡೆ ಮಾಡಿದೆ.
ಕರ್ನಾಟಕ ಸೇರಿದಂತೆ ಒಟ್ಟು 21 ರಾಜ್ಯಗಳಿಗೆ ಹಣಕಾಸು ಸಚಿವಾಲಯ 86,912 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೂ ಭಾರೀ ಪರಿಹಾರ ಬಿಡುಗಡೆ ಮಾಡಲಾಗಿದೆ. 86,912 ಕೋಟಿ ರೂ.ಗಳಲ್ಲಿ 8,633 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ತಾಯಿ ಹೀರಾಬೆನ್ ಸ್ಕೆಚ್‍ನ್ನು ಮೋದಿಗೆ ಉಡುಗೊರೆಯಾಗಿ ನೀಡಿದ ಮಹಿಳಾ ಅಭಿಮಾನಿ
Advertisement
Advertisement
ಭಾರತದ ಜಿಡಿಪಿ ದರ ಏರಿಕೆಯಾಗಿದ್ದು, 2021-22 ಆರ್ಥಿಕ ವರ್ಷದ ಜಿಡಿಪಿ ದರ ಶೇ.8.7 ರಷ್ಟಿದೆ. ಕ್ವಾರ್ಟರ್ 4ರ ಜಿಡಿಪಿ ದರ ಶೇ.4 ರಷ್ಟಿದೆ ಎಂದು ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್
Advertisement
ಮಹಾರಾಷ್ಟಕ್ಕೆ ಹೆಚ್ಚಿನ ಪರಿಹಾರ: ಒಟ್ಟಾರೆ ಜಿಎಸ್‌ಟಿ ಹಣದಲ್ಲಿ ಮಹಾರಾಷ್ಟ್ರಕ್ಕೆ 14,145 ಕೋಟಿ ರೂ. ಹೆಚ್ಚಿನ ಪರಿಹಾರ ನೀಡಲಾಗಿದೆ. ಇನ್ನುಳಿದಂತೆ ತಮಿಳುನಾಡಿಗೆ 9,602 ಕೋಟಿ, ಉತ್ತರ ಪ್ರದೇಶಕ್ಕೆ 8,874 ಕೋಟಿ ಹೊರತುಪಡಿಸಿದರೆ 3ನೇ ಸ್ಥಾನದಲ್ಲಿ ಕರ್ನಾಟಕ ಇದ್ದು 8,633 ಕೋಟಿ ರೂ. ಪರಿಹಾರ ನೀಡಲಾಗಿದೆ.