ಟೆಹ್ರಾನ್/ನವದೆಹಲಿ: ಇರಾನ್‌ನಲ್ಲಿ (Iran) ನಡೆಯುವ ಹಿಂಸಾತ್ಮಕ ಪ್ರತಿಭಟನೆ ಸದ್ಯಕ್ಕೆ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ಈ ಮಧ್ಯೆ ಅಮೆರಿಕ (USA) ಕೂಡ ದಾಳಿ ಮಾಡುವ ಮುನ್ಸೂಚನೆ ಕೊಟ್ಟಿದೆ. ಹೀಗಾಗಿ ಭಾರತ ಸರ್ಕಾರ (Central Government) ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನ ಸ್ಥಳಾಂತರಿಸಲು ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ, ಭಾರತೀಯರ ಮೊದಲ ಬ್ಯಾಚ್ ನಾಳೆ (ಜ.16) ಇರಾನ್‌ನಿಂದ ಹೊರಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಅಂದಾಜಿನ ಪ್ರಕಾರ ವಿದ್ಯಾರ್ಥಿಗಳು ಸೇರಿದಂತೆ 10,000 ಕ್ಕೂ ಹೆಚ್ಚು ಭಾರತೀಯರು ಇರಾನ್‌ನಲ್ಲಿ ಇದ್ದಾರೆ. ಶುಕ್ರವಾರ ಬೆಳಗ್ಗೆ 8 ಗಂಟೆ ಒಳಗೆ ಮೊದಲ ಬ್ಯಾಚ್ ಹೊರಡುವ ಸಾಧ್ಯತೆಯಿದೆ. ಸಂಜೆ ಹೊತ್ತಿಗೆ ಭಾರತಕ್ಕೆ ಬಂದಿಳಿಯುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳಿಗೆ ವಿದೇಶಾಂಗ ಸಚಿವಾಲಯ (MEA) ದಾಖಲೆಗಳನ್ನ ರೆಡಿಯಾಗಿಟ್ಟುಕೊಳ್ಳಲು ಸೂಚನೆ ನೀಡಿದೆ. ಸ್ಥಳಾಂತರ ಪ್ರಕ್ರಿಯೆಗಳು ಶುರುವಾಗಿದ್ದು, ವಿವಿಧ ಅಧಿಕಾರಿಗಳಿಂದ ಅಗತ್ಯ ಅನುಮೋದನೆ ಪಡೆಯಲಾಗುತ್ತಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನ್ಯೂಜೆರ್ಸಿಯಲ್ಲಿ 5, 7 ವರ್ಷದ ಮಕ್ಕಳನ್ನು ಕೊಂದ ಭಾರತೀಯ ಮೂಲದ ಮಹಿಳೆ ಬಂಧನ

ವಿದ್ಯಾರ್ಥಿಗಳ ವಿವರ ಸಂಗ್ರಹ
ಸ್ಥಳಾಂತರ ಪ್ರಕ್ರಿಯೆಯ ಭಾಗವಾಗಿ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ವಿವರಗಳನ್ನ ಸಂಗ್ರಹಿಸಲು ಶುರು ಮಾಡಿದೆ. ಆದ್ರೆ ಹಲವು ಪ್ರದೇಶಗಳಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತಗೊಂಡಿರುವುದರಿಂದ ಸಂವಹನ ಸಂಪರ್ಕ ಕಷ್ಟಸಾಧ್ಯವಾಗ್ತಿದೆ. ಇದರಿಂದ ವಿವರ ಸಗ್ರಹ ಕೂಡ ನಿಧಾನವಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
1 ದಿನದ ಹಿಂದೆಯಷ್ಟೇ ಇರಾನ್ ವಿದೇಶಾಂಗ ಸಚಿವ ಸೈಯ್ಯದ್ ಅಬ್ಬಾಸ್ ಅರಾಘ್ಚಿ ಅವರು ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರಿಗೆ ದೂರವಾಣಿ ಕರೆ ಮಾಡಿದ್ದು, ಇಬ್ಬರೂ ನಾಯಕರು ಸುದೀರ್ಘವಾಗಿ ಚರ್ಚಿಸಿದ್ದರು. ಇದನ್ನೂ ಓದಿ: ಈ ಬಾರಿ ಬುಲೆಟ್ ಮಿಸ್ ಆಗಲ್ಲ: ಟ್ರಂಪ್‌ಗೆ ಇರಾನ್ ಹತ್ಯೆ ಬೆದರಿಕೆ

ಅಮೆರಿಕ ಭದ್ರತಾ ಸಿಬ್ಬಂದಿ ಸ್ಥಳಾಂತರ
ಇರಾನ್‌ನಲ್ಲಿ ಉದ್ವಿಗ್ನತೆ ಮುಂದುವರಿದಿರುವಂತೆಯೇ ತನ್ನ ಪ್ರಾದೇಶಿಕ ನೆಲೆಗಳಿಂದ ಭದ್ರತಾ ಸಿಬ್ಬಂದಿಯನ್ನ ಸ್ಥಳಾಂತರಗೊಳಿಸುವಂತೆ ಅಮೆರಿಕ ಸೂಚಿಸಿದೆ ಎಂದು ವರದಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ಬೆನ್ನಲ್ಲೇ, ಒಂದು ವೇಳೆ ದಾಳಿ ನಡೆಸಿದರೆ ಅಮೆರಿಕದ ಪ್ರಾದೇಶಿಕ ನೆಲೆಗಳ ಮೇಲೂ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ತನ್ನ ನಾಗರಿಕರ ಭದ್ರತೆ ಹಾಗೂ ಮಿಲಿಟರಿ ಸೌಲಭ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಮೆರಿಕ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಇರಾನ್‌ನಲ್ಲಿ ಮುಂದುವರಿದ ಪ್ರತಿಭಟನೆ; ಸಾವಿನ ಸಂಖ್ಯೆ 3,428 ಕ್ಕೆ ಏರಿಕೆ

