ಜ.22ರಂದು ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ

Public TV
2 Min Read
ayodhya ram mandir

ನವದೆಹಲಿ: ಇದೇ 22ಕ್ಕೆ ಇಡೀ ದೇಶವೇ ಕಾತುರತೆಯಿಂದ ಎದುರು ನೋಡುತ್ತಿರೋ ಐತಿಹಾಸಿಕ ಸಂಭ್ರಮಕ್ಕೆ, ಕೇಂದ್ರ ಸರ್ಕಾರ ತನ್ನ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಜನವರಿ 22 ರ ಸಂಭ್ರವನ್ನ ಮನೆಯಲ್ಲೇ ಕುಳಿತು ರಾಮನ ಪ್ರಾರ್ಥನೆ ಮೂಲಕ ಕಣ್ತುಂಬಿಕೊಳ್ಳಲು ಮನವಿ ಮಾಡಿದ್ದ ಬೆನ್ನಲ್ಲೆ ಕೇಂದ್ರ ಸರ್ಕಾರ ಪ್ರಾರ್ಥನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅರ್ಧ ದಿನ ರಜೆ ಘೋಷಣೆ ಮಾಡಿದೆ.

ಹೌದು. ಕೇಂದ್ರ ಸರ್ಕಾರದ ಸಿಬ್ಬಂದಿ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ನೌಕರರ ಭಾವನೆ ಮತ್ತು ಅವರ ಕೋರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾ (Pran Prathistha Ceremony) ಸಮಾರಂಭದ ಸಂದರ್ಭದಲ್ಲಿ ಭಾರತದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಹಾಗೂ ಸಂಸ್ಥೆಗಳಿಗೆ ಮಧ್ಯಾಹ್ನ 2.30 ರವರೆಗೆ ಅರ್ಧ ದಿನ ಕ್ಲೋಸ್ ಮಾಡಲು ಕೇಂದ್ರ ಸರ್ಕಾರ ಘೋಷಿಸಿದೆ. ಇನ್ನೂ ಕೇವಲ ಕಛೇರಿಗಳಿಗಷ್ಟೇ ಅಲ್ಲದೆ ಕೇಂದ್ರದ ಶಾಲಾ- ಕಾಲೇಜುಗಳು ಮತ್ತು ಕೇಂದ್ರ ಕೈಗಾರಿಕಾ ವಲಯಗಳಿಗೂ ಅರ್ಧದಿನ ರಜೆ ಘೋಷಣೆ ಮಾಡಿದೆ. ಮಧ್ಯಾಹ್ನದವರೆಗೆ ಎಲ್ಲಾ ಕೇಂದ್ರ ದಡಿಯ ಸಂಸ್ಥೆಗಳ ನೌಕಕರು ರಜೆಯಲ್ಲಿರಲಿದ್ದು, ಮಧ್ಯಾಹ್ನ 2.30ರ ನಂತರ ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಕೇಂದ್ರ ಸರ್ಕಾರಿ (Central Govt) ಸಿಬ್ಬಂದಿ ಸಚಿವಾಲಯ ತಿಳಿಸಿದೆ.

ಇನ್ನೂ ಇತ್ತ ಬೆಂಗಳೂರಿನಲ್ಲಿ ಜ.22 ರಂದು ಮಾಂಸದ ಅಂಗಡಿಗಳು, ಬಾರ್ ಗಳನ್ನು ಬಂದ್ ಮಾಡುವಂತೆ ಮಾಲೀಕರಲ್ಲಿ ಶ್ರೀರಾಮ ಸೇನೆ ಮನವಿ ಮಾಡಿದೆ. ಈ ಸಂಬಂಧ ಜಾಲಹಳ್ಳಿ, ದಾಸರಹಳ್ಳಿ ಭಾಗದಲ್ಲಿ ಶ್ರೀರಾಮಸೇನೆ (Srirama Sena) ಕಾರ್ಯಕರ್ತರು ಕರಪತ್ರಗಳ ಹಂಚಿ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ, ರಾಜ್ಯಾದ್ಯಂತ ಮಾಂಸದ ಅಂಗಡಿಗಳು, ಬಾರ್ ಗಳನ್ನು ಬಂದ್ ಮಾಡಿಸುವಂತೆ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಾಳೆ ಮನವಿ ಸಲ್ಲಿಸಲು ಹಿಂದೂ ಸಂಘಟನೆಗಳು ಸಿದ್ಧತೆ ನಡೆಸಿದ್ದು, ಈ ಮೂಲಕ ಸರ್ಕಾರವನ್ನ ಗಮನಸೆಳೆಯಲು ಮುಂದಾಗಿವೆ. ಇದನ್ನೂ ಓದಿ: ಬೆಂಗಳೂರು-ಅಯೋಧ್ಯೆ ಏರ್ ಇಂಡಿಯಾ ವಿಮಾನದಲ್ಲಿ ರಾಮಜಪ, ಭಜನೆ

ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಈ ದಿನವನ್ನು ಹಬ್ಬದಂತೆ ಆಚರಣೆ ಮಾಡಲೆಂದು ಈಗಾಗಲೇ ಆಯಾ ಜಿಲ್ಲೆಯ ಮುಖ್ಯಮಂತ್ರಿಗಳು ರಜೆಯನ್ನು ಘೋಷಣೆ ಮಾಡಿದ್ದಾರೆ. ಇತ್ತ ಗೋವಾ ಸರ್ಕಾರ, ಛತ್ತೀಸ್ ಗಢ ಸರ್ಕಾರ ಕೂಡ ಜನವರಿ 22 ರಂದು ಸರ್ಕಾರಿ ನೌಕರರು ಮತ್ತು ಶಾಲೆಗಳಿಗೆ ರಜೆ ಘೋಷಿಸಿದೆ.

Share This Article