ಬೆಂಗಳೂರು: ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯನ್ನು 5 ವರ್ಷ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ ಕರ್ನಾಟಕ ಸೇರಿ 6 ಜಿಲ್ಲೆಗಳಿಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ರೆಡ್ ಅಲರ್ಟ್ ಸೂಚನೆ ನೀಡಲಾಗಿದೆ.
Advertisement
ಪಿಎಫ್‍ಐ ಪ್ರಬಲವಾಗಿರುವ ರಾಜ್ಯಗಳಿಗೆ ಕೇಂದ್ರ ಗುಪ್ತಚರ ಇಲಾಖೆ ಅಲರ್ಟ್ ಮೆಸೇಜ್ ನೀಡಿದ್ದು, ಕೇರಳ (Kerala), ಕರ್ನಾಟಕ (Karanataka), ತಮಿಳುನಾಡು (Tamilnadu), ಆಂದ್ರಪ್ರದೇಶ (Andhra Pradesh), ಮಹಾರಾಷ್ಟ್ರ (Maharashtra), ತೆಲಂಗಾಣಕ್ಕೆ (Telangana) ರೆಡ್ ಅಲರ್ಟ್ ನೀಡಿದೆ. ಪ್ರತಿಭಟನೆಗೆ ಅವಕಾಶ ನೀಡಬೇಡಿ, ಗುಂಪು ಸೇರಲು ಅವಕಾಶ ನೀಡದಂತೆ, ಯಾವುದೇ ರೀತಿಯ ಗಲಭೆ ಸೃಷ್ಟಿ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ಲಿಂಕ್ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್
Advertisement
Advertisement
ಪಿಎಫ್‍ಐ ಸಂಘಟನೆ ಬ್ಯಾನ್ ಹಿನ್ನೆಲೆ ಕರ್ನಾಟಕ (Karanataka) ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬೆಂಗಳೂರಿನ (Bengaluru) ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಮಾಡಿಕೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಗಸ್ತು, ಅನುಮಾನಸ್ಪದ ಚಟುವಟಿಕೆಗಳ ಬಗ್ಗೆ ನಿಗಾ ಇಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ. ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ನಿಗಾವಹಿಸಲಿದ್ದಾರೆ. ಸದ್ಯಕ್ಕೆ ಯಾವುದೇ ಪ್ರತಿಭಟನೆ, ರ್‍ಯಾಲಿ ಸಂಬಂಧ ಮಾಹಿತಿ ಲಭ್ಯವಾಗಿಲ್ಲ ಎಂದು ಪಬ್ಲಿಕ್ ಟಿವಿ ಜೊತೆ ನಗರ ಪೊಲೀಸ್ ಅಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಾಂತಿ ಭಂಗ, ಅಕ್ರಮಕೂಟ ಆರೋಪದಡಿ 7 ಮಂದಿ PFI ಮುಖಂಡರು ಅರೆಸ್ಟ್ – 14 ದಿನ ನ್ಯಾಯಾಂಗ ಬಂಧನ
Advertisement
ಪಿಎಫ್‍ಐ ಬ್ಯಾನ್ ಕುರಿತಾಗಿ ಎರಡು ದಿನದ ಹಿಂದೆಯೇ ರಾಜ್ಯಗಳಿಗೆ ಸೂಚನೆ ಬಂದಿತ್ತು. ಕೇಂದ್ರ ಗೃಹ ಇಲಾಖೆ ದಕ್ಷಿಣ ಭಾರತದ ರಾಜ್ಯಗಳಿಗೆ ಸಂದೇಶ ರವಾನೆ ಮಾಡಿತ್ತು. ಪಿಎಫ್‍ಐ ಸಂಘಟನೆಯ ನಿಯಂತ್ರಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಇಲಾಖೆ ನೀಡಿತ್ತು. ಅದರಂತೆ ನಿನ್ನೆಯೇ ಮುಂಜಾಗ್ರತಾ ಕ್ರಮವಾಗಿ ಹಲವು ಪಿಎಫ್‍ಐ ನಾಯಕರನ್ನು ಅರೆಸ್ಟ್ ಮಾಡಲಾಗಿತ್ತು. 100ಕ್ಕೂ ಹೆಚ್ಚು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.