DistrictsKarnatakaKolarLatestMain Post

ಶಾಂತಿ ಭಂಗ, ಅಕ್ರಮಕೂಟ ಆರೋಪದಡಿ 7 ಮಂದಿ PFI ಮುಖಂಡರು ಅರೆಸ್ಟ್ – 14 ದಿನ ನ್ಯಾಯಾಂಗ ಬಂಧನ

ಕೋಲಾರ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಪಿಎಫ್‍ಐ (PFI) ಮುಖಂಡರನ್ನು ಬಂಧಿಸಿದ್ದಾರೆ.

ಕೋಲಾರದ (Kolar) ಶಾಹಿನ್ ಷಾ ನಗರ (Shaheen Shah Nagar) ಸೇರಿದಂತೆ ವಿವಿಧೆಡೆಯಲ್ಲಿ ಪಿಎಫ್‍ಐ ಮುಖಂಡರ ಮನೆ ಮೇಲೆ, ಗಲಭೆ ಸೃಷ್ಟಿಗೆ ಯತ್ನ, ಅಕ್ರಮ ಕೂಟ, ಗಲಭೆಗೆ ಪ್ರಚೋದನೆ ಮಾಡಿದ ಆರೋಪದಡಿ ದಾಳಿ ನಡೆಸಿ ಏಳು ಜನರನ್ನು ಅರೆಸ್ಟ್‌ ಮಾಡಿದ್ದಾರೆ. ಇನ್ನೂ ಕೋಲಾರ ನಗರದ ನವಾಜ್ ಪಾಷಾ, ವಸೀಂ ಪಾಷಾ, ಸಿದ್ದಿಕ್ ಪಾಷಾ, ಇಂತಿಯಾಜ್ ಪಾಷಾ, ಶಾಬಾಜ್ ಪಾಷಾ ಹಾಗೂ ಅಲ್ಲಾಬಕಾಶ್ ಎಂಬವರನ್ನು ]ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ದಸರಾ ಉದ್ಘಾಟನೆಯಲ್ಲಿ ಕಪ್ಪು ಬಾವುಟ ಪ್ರದರ್ಶನ: ವಿ. ಸೋಮಣ್ಣ ಕೆಂಡಾಮಂಡಲ

ಕೋಲಾರ ನಗರ ಠಾಣೆ ಹಾಗೂ ಗಲ್ ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಏಳು ಮಂದಿ ಪಿಎಫ್‍ಐ ಮುಖಂಡರನ್ನು ಬಂಧಿಸಿ ಡಿವೈಎಸ್‍ಪಿ ನೇತೃತ್ವದಲ್ಲಿ ವಿಚಾರಣೆ ಮಾಡಲಾಗಿದೆ. ಇನ್ನು ಏಳು ಮಂದಿಗೆ ಕೋಲಾರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿದ್ದು, CRPC 107, 151, ಸೆಕ್ಷನ್ ಅಡಿ ತಹಶಿಲ್ದಾರ್ ಎದುರು ಪೊಲೀಸರು ಹಾಜರು ಹಾಜರುಪಡಿಸಿದ್ದಾರೆ. ಇದನ್ನೂ ಓದಿ: ಮಠದ ಹಣಕಾಸಿನ ವ್ಯವಹಾರಗಳಿಗೆ ಸಹಿ ಹಾಕಲು ಅವಕಾಶ ಕೊಡಿ – ಹೈಕೋರ್ಟ್‌ಗೆ ಮುರುಘಾ ಶ್ರೀ ಅರ್ಜಿ

Live Tv

Leave a Reply

Your email address will not be published. Required fields are marked *

Back to top button