ಹಾಸನ: ಕೊರೊನಾದಂತಹ ಮಹಾಮಾರಿ ಸಂದರ್ಭದಲ್ಲಿ ಜನರ ಜೀವ ರಕ್ಷಣೆಗೆ ಮೋದಿಯವರು ಹಗಲು ರಾತ್ರಿ ಪ್ರಯತ್ನ ಮಾಡಿದ್ದಾರೆ. ಕರ್ನಾಟಕದ ಜನ ಬಿಜೆಪಿ ಜೊತೆಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಾಂಗ್ರೆಸ್ ಸಮೀಕ್ಷೆ ಬಗ್ಗೆ ವ್ಯಂಗ್ಯವಾಡಿದ ಅವರು, ಪೆನ್ನು ಅವರದ್ದೇ, ಪೇಪರ್ ಕೂಡ ಅವರದ್ದೇ. ಅವರು 120 ಬರೆದುಕೊಳ್ಳಬಹುದು. 150, 180 ಕೂಡ ಬರೆದುಕೊಳ್ಳಬಹುದು ಎಂದರು. ಇದನ್ನೂ ಓದಿ: ಕಾಳಿ ಕೈಲಿ ಸಿಗರೇಟು, ಮತ್ತೊಂದು ಕೈಯಲ್ಲಿ ಎಲ್ಜಿಬಿಟಿಕ್ಯೂ ಧ್ವಜ : ಭುಗಿಲೆದ್ದ ಆಕ್ರೋಶ
Advertisement
Advertisement
ಕಾಂಗ್ರೆಸ್‍ಗೆ ಮುಂದಿನ ಚುನಾವಣೆಯಲ್ಲಿ 120+ ಸ್ಥಾನಗಳು ಬರಲಿವೆ ಎಂಬ ಕಾಂಗ್ರೆಸ್ ಸಮೀಕ್ಷೆ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ಅವರು, ಇವತ್ತು ದೇಶ ಮೋದಿ ಕಡೆ ನೊಡುತ್ತಿದೆ. ದೇಶ ಬಿಜೆಪಿ ಕಡೆ ನೋಡುತ್ತಿದೆ. ಈ ದೇಶದಲ್ಲಿ ಅಭಿವೃದ್ಧಿ ಸಾಧನೆ, ದೇಶದ ರಕ್ಷಣೆ ವಿಚಾರ, ಭ್ರಷ್ಟಾಚಾರ ರಹಿತವಾಗಿ ಬಿಜೆಪಿ ಆಡಳಿತ ನೀಡಿದೆ. ಹಾಗಾಗಿ ಜನರು ಮೋದಿ ಕಡೆಗೆ ನೋಡುತ್ತಿದ್ದಾರೆ ಎಂದರು.
Advertisement
Advertisement
ಕೊರೊನಾದಂತಹ ಮಹಾಮಾರಿ ಸಂದರ್ಭದಲ್ಲಿ ಜನರ ಜೀವ ರಕ್ಷಣೆಗೆ ಮೋದಿಯವರು ಹಗಲು ರಾತ್ರಿ ಪ್ರಯತ್ನ ಮಾಡಿದ್ದಾರೆ. ಕರ್ನಾಟಕದ ಜನ ಬಿಜೆಪಿ ಜೊತೆಗಿದ್ದಾರೆ. ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿ ಇದ್ದಾರೆ. ಅವರ ನಾಯಕರ ನಡುವೆಯೇ ಕಾದಟ ಇದೆ. ಹಾಗಾಗಿ ಒಬ್ಬರು 120 ಅಂತಾರೆ, ಇನ್ನೊಬ್ಬರು 150 ಸ್ಥಾನ ಅಂತಾರೆ ಎಂದು ಲೇವಡಿ ಮಾಡಿದ್ರು.
ಅವರಲ್ಲಿ ಇರುವ ಗುಂಪುಗಾರಿಕೆಯನ್ನು ಬೇರೆ ಕಡೆ ತಿರುಗಿಸಲು ರಾಜಕೀಯ ಹೇಳಿಕೆ ಕೊಡುತ್ತಿದ್ದಾರೆ. ಆದರೆ ರಾಜ್ಯದ ಜನರ ಜೊತೆ ನಾವಿದ್ದೇವೆ. ಜನ ಕೂಡ ನಮ್ಮ ಜೊತೆ ಇದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.