ಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah) ಅವರು ಆಪರೇಷನ್ ಓಲ್ಡ್ ಮೈಸೂರು (Operation Old Mysuru) ಬಗ್ಗೆ ಸುಳಿವು ನೀಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಗುರುವಾರ ರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದ ಅಮಿತ್ ಶಾ, ಮಂಡ್ಯ (mandya) ಕ್ಕೆ ತೆರಳುವ ಮುನ್ನ ಓಲ್ಡ್ ಮೈಸೂರು ಬಗ್ಗೆ ಡೀಟೇಲ್ ರಿಪೋರ್ಟ್ ಕೊಡಿ ಎಂದು ಕೇಳಿದ್ದರು. ಈ ಮೂಲಕ ಓಲ್ಡ್ ಮೈಸೂರು ಜಾತಿ ಸಮೀಕರಣದ ಫಸ್ಟ್ ರಿಪೋರ್ಟ್ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಪಂಚರತ್ನ ಯಾತ್ರೆಯ 500 ಬಗೆಯ ಹಾರಗಳು
Advertisement
Advertisement
ಖಾಸಗಿ ಹೋಟೆಲ್‍ನಿಂದ ಮಂಡ್ಯಕ್ಕೆ ಹೊರಡುವ ಮುನ್ನ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಳಿ ಮಾಹಿತಿ ಪಡೆದಿದ್ದಾರೆ. ಎಸ್‍ಎಂ ಕೃಷ್ಣ, ದೇವೇಗೌಡರು, ಜೆಡಿಎಸ್ ಪ್ರಭಾವದ ಬಗ್ಗೆ ಹಾಗೂ ಸಿದ್ದರಾಮಯ್ಯ, ಡಿಕೆಶಿ ಬಗ್ಗೆ, ಓಲ್ಡ್ ಮೈಸೂರು ಭಾಗದಲ್ಲಿ ಹಲವು ನಾಯಕರ ಪ್ಲಸ್, ಮೈನಸ್ ಮಾಹಿತಿ ಕೇಳಿದ್ದಾರೆ. ಜಾತಿ ರಾಜಕಾರಣ, ಹಿಂದುತ್ವ ಅಜೆಂಡಾ ರೇಟಿಂಗ್ ಬಗ್ಗೆಯೂ ಶಾ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
Advertisement
Advertisement
ಒಕ್ಕಲಿಗ ಸಮುದಾಯದ ಪ್ರಾಬಲ್ಯ, ಹಳೇ ಮೈಸೂರು ಭಾಗದ ಜಾತಿ ರಾಜಕಾರಣ ಹಾಗೂ ಬಿಜೆಪಿಗೆ ಯಶಸ್ಸು ಸಿಗದಿರಲು ಕಾರಣಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ ಇಂದು ರಾತ್ರಿ ನಡೆಯುವ ಸಭೆಯಲ್ಲಿ ಡಿಟೇಲ್ ಆಗಿ ಚರ್ಚೆ ಮಾಡೋಣ ಎಂದಿದ್ದಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ದೊರೆತಿದೆ.