ಸೆಕೆಂಡ್ ಹಾಫ್ ಎಲೆಕ್ಷನ್‍ಗೆ ಅಮಿತ್ ಶಾ ಎಂಟ್ರಿ- ಉತ್ತರ ಕರ್ನಾಟಕ ಕ್ಷೇತ್ರಗಳತ್ತ ಚಾಣಕ್ಯ ಫೋಕಸ್

Public TV
1 Min Read
AMITSHAH

ಬೆಂಗಳೂರು: ಮೊದಲ ಹಂತದ ಲೋಕಸಭಾ ಚುನಾವಣೆಗೆ (Loksabha Elections 2024) ನಾಲ್ಕೆ ನಾಲ್ಕು ದಿನಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಬಹಿರಂಗ ಪ್ರಚಾರದ ತೆರೆಗೂ ಮುನ್ನ ದೋಸ್ತಿಗಳು ಹಾಗೂ ಕಾಂಗ್ರೆಸ್ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ 2ನೇ ಹಂತದ ಲೋಕಸಭಾ ಚುನಾವಣಾ ಅಖಾಡಕ್ಕೆ ಕೇಸರಿ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಡಲಿದ್ದಾರೆ.

ಎರಡನೇ ಹಂತದ ಕ್ಷೇತ್ರಗಳತ್ತ ಅಮಿತ್ ಶಾ ಫೋಕಸ್ ಮಾಡಿದ್ದು, ಕಾಂಗ್ರೆಸ್‍ಗೆ ಠಕ್ಕರ್ ಕೊಡಲು ತಂತ್ರಗಾರಿಕೆ ಹೂಡಿದ್ದಾರೆ. 2ನೇ ಹಂತದ ಪ್ರಚಾರಕ್ಕೆ ನೇಹಾ ಹಿರೇಮಠ್ ಪ್ರಕರಣವೇ ಬಿಜೆಪಿಗೆ ಬೂಸ್ಟ್. ಸೆಕೆಂಡ್ ಹಾಫ್ ಎಲೆಕ್ಷನ್‍ಗೆ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದಲೇ ಚಾಣಕ್ಯ ಕ್ಯಾಂಪೇನ್ ಸ್ಟಾರ್ಟ್ ಮಾಡಲಿದ್ದಾರೆ. ಹಳೇ ಮೈಸೂರು ನಂತರ ಈಗ ಉತ್ತರ ಕರ್ನಾಟಕ ಹಾಟ್ ಟಾರ್ಗೆಟ್, ಉತ್ತರ ಕ್ಷೇತ್ರಗಳ ಪಿಚ್ ರಿಪೋರ್ಟ್ ತರಿಸಿಕೊಂಡಿರುವ ಅಮಿತ್ ಶಾ, ಚುನಾವಣಾ ಕಣಕ್ಕೆ ಮತ್ತಷ್ಟು ರಂಗು ತುಂಬಲಿದ್ದಾರೆ.

ಮಂಗಳವಾರ ಇಡೀ ದಿನ ರಾಜಧಾನಿಯಲ್ಲಿ ಅಮಿತ್ ಶಾ (Amitshah) ಭರ್ಜರಿ 4 ರೋಡ್ ಶೋ ನಡೆಸಲಿದ್ದಾರೆ. ನಾಡಿದ್ದು ಉಡುಪಿ-ಚಿಕ್ಕಮಗಳೂರು, ತುಮಕೂರು, ಹುಬ್ಬಳ್ಳಿ ಧಾರವಾಡದಲ್ಲಿ ಅಮಿತ್ ಶಾ ಪ್ರಚಾರ ಮಾಡಲಿದ್ದಾರೆ. ನಾಡಿದ್ದು ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಿ ಉತ್ತರ ಕ್ಷೇತ್ರಗಳತ್ತ ಅಮಿತ್ ಶಾ ಫೋಕಸ್ ಮಾಡಲಿದ್ದಾರೆ. ಹಳೆ ಮೈಸೂರು ಭಾಗ ಟಾರ್ಗೆಟ್ ನಂತರ ಈಗ ಉತ್ತರ ಕರ್ನಾಟಕ ಟಾರ್ಗೆಟ್ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಮುಖಂಡರ ಜೊತೆ ಹುಬ್ಬಳ್ಳಿಯಲ್ಲಿ ಚಾಣಕ್ಯ ಹೈವೋಲ್ಟೇಜ್ ಸಭೆ ನಡೆಸೋ ಸಾಧ್ಯತೆ ಇದೆ. ಇದನ್ನೂ ಓದಿ: ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಎಂದು ಕಾಂಗ್ರೆಸ್‌ ಹೇಳಿತ್ತು: ಮೋದಿ ಕಿಡಿ

Share This Article