ರಾಯಚೂರಿನ ಮಾನ್ವಿ ಪೊಲೀಸ್ ಠಾಣೆಗೆ 5ನೇ ರ‍್ಯಾಂಕ್ ಕೊಟ್ಟ ಕೇಂದ್ರ

Public TV
1 Min Read
Manvi Police Station

ರಾಯಚೂರು: ಕರ್ನಾಟಕ ಪೊಲೀಸ್ ಇಲಾಖೆಗೆ ಮತ್ತೊಂದು ಗರಿಮೆ ಸಿಕ್ಕಿದೆ. ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆಗೆ ಕೇಂದ್ರ ಸರ್ಕಾರ ಮನಸೋತು 5ನೇ ರ‍್ಯಾಂಕ್ ನೀಡಿದೆ.

Manvi Police Station 1

ದೇಶದ ಟಾಪ್ 10 ಮಾದರಿ ಠಾಣೆಗಳಲ್ಲಿ ರಾಯಚೂರಿನ ಮಾನ್ವಿ ಪೊಲೀಸ್ ಠಾಣೆಗೆ 5ನೇ ಸ್ಥಾನ ದೊರೆತಿದೆ. ವಿವಿಧ ಮಾನದಂಡಗಳ ಆಧಾರದ ಮೇಲೆ ಕೇಂದ್ರ ಗೃಹ ಇಲಾಖೆ ಈ ಠಾಣೆಗೆ 5ನೇ ರ‍್ಯಾಂಕ್ ನೀಡಿದೆ. ಇದನ್ನೂ ಓದಿ:  70 ವರ್ಷದ ದೇಶದ ಸಾಧನೆಯನ್ನು ಪ್ರಶ್ನಿಸುತ್ತಿರುವುದು ದುರದೃಷ್ಟಕರ: ಭೂಪೇಶ್ ಬಘೇಲ್

Manvi Police Station 2

ಜನ ಸಂಪರ್ಕ, ಪೊಲೀಸ್ ಠಾಣಾ ಕಟ್ಟಡದ ಸುವ್ಯವಸ್ಥೆ, ಸಿಬ್ಬಂದಿ ಶಿಸ್ತು ಮತ್ತು ಕಾರ್ಯದಕ್ಷತೆ, ಕಡತಗಳ ವಿಲೇವಾರಿ, ಮೂಲಭೂತ ಸೌಕರ್ಯಗಳು, ಅಪರಾಧ ತಡೆಗಟ್ಟುವಲ್ಲಿ ಕೈಗೊಂಡ ಮುಂಜಾಗೃತಾ ಕ್ರಮಗಳು, ಸಂಚಾರ ಸುರಕ್ಷತೆಗಾಗಿ, ರಸ್ತೆಯಲ್ಲಿ ಸಂಭವಿಸುವ ಅಪಘಾತಗಳನ್ನ ತಡೆಗಟ್ಟುವಲ್ಲಿ ಪೊಲೀಸರ ಕಾರ್ಯ, ಈ ಎಲ್ಲ ಅಂಶಗಳನ್ನ ಗಣನೆಗೆ ತೆಗೆದುಕೊಂಡು ಟಾಪ್ 10 ಪಟ್ಟಿಯಲ್ಲಿ ರ‍್ಯಾಂಕಿಂಗ್ ನೀಡಲಾಗುತ್ತದೆ. ಈ ಹಿನ್ನೆಲೆ ಮಾನ್ವಿ ಪೊಲೀಸ್ ಠಾಣೆ ದೇಶದಲ್ಲಿಯೇ 5ನೇ ರ‍್ಯಾಂಕ್ ಪಡೆದಿದೆ.

Manvi Police Station 3

ಟಾಪ್ 10 ನಲ್ಲಿ ಆಯ್ಕೆಯಾಗಿರುವುದರಿಂದ ಮಾನವಿ ಠಾಣೆ ಈಗ ಕೇಂದ್ರ ಸರ್ಕಾರದ ಬಿಪಿ ಆರ್ ಡಿ ಯಿಂದ ವಿಶೇಷ ಸೌಲಭ್ಯಗಳು ದೊರೆಯಲಿವೆ. ಪೊಲೀಸ್ ಠಾಣೆಯ ಪೀಠೋಪಕರಣ, ಲ್ಯಾಪ್ ಟಾಪ್ ಸೇರಿದಂತೆ ಕೇಂದ್ರ ಸರ್ಕಾರದ ವಿಶೇಷ ಸೌಲಭ್ಯಗಳನ್ನ ಮಾನವಿ ಠಾಣೆ ಪಡೆಯಲಿದೆ. ಇಡೀ ದೇಶದಲ್ಲೇ ಐದನೇ ಸ್ಥಾನ ಪಡೆದಿರುವುದಕ್ಕೆ ಠಾಣೆಯ ಸಿಬ್ಬಂದಿ, ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಬೇರೆಯವರ ವ್ಯಾಕ್ಸಿನೇಷನ್ ಮಾಹಿತಿಯನ್ನೂ CoWIN ವೆಬ್‍ಸೈಟ್‍ನಲ್ಲಿ ಚೆಕ್ ಮಾಡಿ

Manvi Police Station 4

Share This Article
Leave a Comment

Leave a Reply

Your email address will not be published. Required fields are marked *