ನವದೆಹಲಿ: ರಾಷ್ಟ್ರೀಯ ಹೆದ್ದಾರಿ (National Highway) ಗಳ ಅಭಿವೃದ್ಧಿ ಮತ್ತು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ (Central Government) ರಾಜ್ಯವಾರು ಅನುದಾನ ಹಂಚಿಕೆ ಮಾಡಿದ್ದು, ಈ ಪೈಕಿ ರಾಜ್ಯದ ಮೂರು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ 832 ಕೋಟಿ ರೂ. ಮೀಸಲಿಟ್ಟಿದೆ.
Advertisement
ಫೆಬ್ರವರಿಯಲ್ಲಿ ಮಂಡನೆಯಾದ ಬಜೆಟ್ (Budget) ನ ಅನುದಾನವನ್ನು ಈಗ ರಾಜ್ಯವಾರು ಹಂಚಿಕೆ ಮಾಡಲಾಗುತ್ತಿದೆ. ಶಿವಮೊಗ್ಗ-ಮಂಗಳೂರು ವಿಭಾಗದಲ್ಲಿ ಮಾಲಾ ಗೇಟ್‍ನಿಂದ ಕಾರ್ಕಳದವರೆಗಿರುವ ದ್ವಿಪಥದಿಂದ ಚರ್ತುಪಥಕ್ಕೆ ಅಗಲಿಕರಣಕ್ಕೆ 177.94 ಕೋಟಿ ಹಣ ಬಜೆಟ್‍ನಿಂದ ಮಂಜೂರು ಮಾಡಿದೆ. ಇದನ್ನೂ ಓದಿ: ರಾಜ್ಯದಲ್ಲಿರೋದು ಬಿಜೆಪಿ ಸರ್ಕಾರ, RSS, VHP, ಬಜರಂಗದಳವಲ್ಲ: ಹೆಚ್.ವಿಶ್ವನಾಥ್ ಕಿಡಿ
Advertisement
Advertisement
ಜೇವರ್ಗಿ – ಚಾಮರಾಜನಗರ ವಿಭಾಗದಲ್ಲಿ ಲಿಂಗಸುಗೂರಿನಿಂದ ಮುಡಬಾಲ್ ಕ್ರಾಸ್ ಮತ್ತು ಮಸ್ಕಿ ನಗರ ಮಿತಿಯವರೆಗೆ ಮಧ್ಯಂತರ ದ್ವಿಪಥ ರಸ್ತೆ ಅಭಿವೃದ್ಧಿಗೆ 255.88 ಕೋಟಿ ಬಜೆಟ್‍ನಲ್ಲಿ ಮಂಜೂರು ಮಾಡಿದ್ದು, ಮಧುಗಿರಿಯಿಂದ ಚಿಕ್ಕಬಳ್ಳಾಪುರಕ್ಕೆ ಸಂಪರ್ಕಿಸುವ NH-69 ಅಭಿವೃದ್ಧಿ, ದ್ವಿಪಥ, ಚರ್ತುಪಥ ರಸ್ತೆಗಳ ಪುನರ್ವಸತಿ, ಮೇಲ್ದರ್ಜೆಗೇರಿಸುವಿಕೆ ಮತ್ತು ಸಮತೋಲನ ಕಾಮಗಾರಿಗೆ 398.48 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.