ಸಲಿಂಗ ವಿವಾಹಕ್ಕೆ ಕೇಂದ್ರ ಸರ್ಕಾರದ ವಿರೋಧ

Public TV
2 Min Read
supreme court same sex marriages

ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಕೋರಿ ಸಲಿಂಗಕಾಮಿ ದಂಪತಿ ಸುಪ್ರೀಂಕೋರ್ಟ್‌ಗೆ (Supreme Court) ಸಲ್ಲಿಸಿರುವ ಅರ್ಜಿಯನ್ನು ಕೇಂದ್ರ ಸರ್ಕಾರ ವಿರೋಧಿಸಿದೆ. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಅಫಿಡೆವಿಟ್ ಸಲ್ಲಿಸಿರುವ ಸರ್ಕಾರ (Central Government) ಇದನ್ನು ಭಾರತೀಯ ಕುಟುಂಬ ಘಟಕದ ಪರಿಕಲ್ಪನೆಗೆ ಹೋಲಿಸಲಾಗುವುದಿಲ್ಲ ಎಂದು ಹೇಳಿದೆ.

ಸಲಿಂಗ ಸಂಬಂಧಗಳು ಕಾನೂನುಬಾಹಿರವಲ್ಲದಿದ್ದರೂ, ಭಾರತೀಯ ವ್ಯವಸ್ಥೆಯಲ್ಲಿ ಪುರುಷ ಮತ್ತು ಮಹಿಳೆಯ ನಡುವೆ ಮದುವೆ (Marriage) ವ್ಯವಸ್ಥೆ ಹೊಂದಿದೆ. ಸಲಿಂಗ ವ್ಯಕ್ತಿಗಳು ಪಾಲುದಾರರಾಗಿ ಒಟ್ಟಿಗೆ ವಾಸಿಸುವುದು ಮತ್ತು ಒಂದೇ ಲಿಂಗದ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದುವುದನ್ನು ಭಾರತೀಯ ಕುಟುಂಬ ಘಟಕದ ಪರಿಕಲ್ಪನೆ ವಿರುದ್ಧವಾಗಿದೆ ಎಂದು ಅಫಿಡೆವಿಟ್‌ನಲ್ಲಿ ಅಭಿಪ್ರಾಯಪಟ್ಟಿದೆ.

same sex marriages

ಒಂದೇ ಲಿಂಗಕ್ಕೆ ಸೇರಿದ ವ್ಯಕ್ತಿಗಳ ನಡುವಿನ ಮದುವೆಯ ಗುರುತಿಸುವಿಕೆ ನೋಂದಣಿಗಿಂತ ದೂರವಿದೆ. ಮದುವೆ ತನ್ನದೆಯಾದ ಸಾರ್ವಜನಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ವ್ಯವಸ್ಥೆಯನ್ನು ರಚಿಸುತ್ತವೆ. ಅಲ್ಲದೆ ಹಲವಾರು ಹಕ್ಕುಗಳು ಮತ್ತು ಹೊಣೆಗಾರಿಕೆಗಳನ್ನು ಹೊಂದುವ ಸಾಮಾಜಿಕ ವ್ಯವಸ್ಥೆಯಾಗಿದೆ. ಈ ಕಾರಣದಿಂದಲೇ ನೊಂದಣಿಗಿಂತ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಗುತ್ತದೆ.

ಸಾಮಾಜಿಕ ಸಂಬಂಧದ ನಿರ್ದಿಷ್ಟ ರೂಪವನ್ನು ಗುರುತಿಸಲು ಯಾವುದೇ ಮೂಲಭೂತ ಹಕ್ಕು ಇಲ್ಲ, ನಾಗರಿಕರು ಆರ್ಟಿಕಲ್ 19ರ ಅಡಿಯಲ್ಲಿ ಹಕ್ಕನ್ನು ಹೊಂದಿದ್ದಾರೆ ಎಂಬುದು ನಿಜವಾಗಿದ್ದರೂ, ಇಂತಹ ವ್ಯವಸ್ಥೆಗೆ ರಾಜ್ಯವು ಅಗತ್ಯವಾಗಿ ಕಾನೂನು ಮಾನ್ಯತೆ ನೀಡಬೇಕು ಎಂಬುದಿಲ್ಲ. ಅಥವಾ ಆರ್ಟಿಕಲ್ 21ರ ಅಡಿಯಲ್ಲಿ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು ಇಲ್ಲಿ ಸೇರಿಸಲು ಸಾಧ್ಯವಿಲ್ಲ.

SUPREME COURT

ನಿಷೇಧಿತ ಸಂಬಂಧದ ಮದುವೆ ʼಮದುವೆಯ ಷರತ್ತುಗಳುʼ ಮತ್ತು ಧಾರ್ಮಿಕ ಅವಶ್ಯಕತೆಗಳ ಉಲ್ಲಂಘನೆಗೆ ಕಾರಣವಾಗುತ್ತದೆ. ಭಾರತದ ಶಾಸಕಾಂಗ ವ್ಯವಸ್ಥೆಯು ಪುರುಷ ಮತ್ತು ಮಹಿಳೆಯ ನಡುವಿನ ವಿವಾಹದ ಕಾನೂನು ಸಂಬಂಧದ ಗುರುತಿಸುವಿಕೆಗೆ ಮಾತ್ರ ಸೀಮಿತವಾಗಿದೆ. ಸಲಿಂಗ ವಿವಾಹದಲ್ಲಿ ಮೇಲಿನ ಉಲ್ಲೇಖಿಸಿದ ಮತ್ತು ಇತರ ಶಾಸನಬದ್ಧ ನಿಬಂಧನೆಗಳನ್ನು ಕಾರ್ಯಗತಗೊಳಿಸುವುದು ಅಸಾಧ್ಯ. ಇದನ್ನೂ ಓದಿ: ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ದರ್ಪ ಮೆರೆದ ವ್ಯಕ್ತಿ!

ತಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು LGBTQIA+ ನಾಗರಿಕರಿಗೂ ವಿಸ್ತರಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರ ಪೀಠ ವಿಚಾರಣೆ ನಡೆಸುತ್ತಿದ್ದು, ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಸಲಿಂಗ ವಿವಾಹವನ್ನು ಗುರುತಿಸುವ ಎಲ್ಲಾ ಅರ್ಜಿಗಳನ್ನು ವರ್ಗಾಯಿಸಿಕೊಂಡಿದೆ.

LGBTQIA

ಹೈದರಾಬಾದ್‌ ಮೂಲದ ಸಲಿಂಗಕಾಮಿಗಳಾದ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ಡ್ಯಾಂಗ್ ಅವರು ಅರ್ಜಿ ಸಲ್ಲಿಸಿದ್ದಾರೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ LGBTQIA+ ವ್ಯಕ್ತಿಗಳು ಸಮಾನತೆ, ಘನತೆ ಮತ್ತು ಗೌಪ್ಯತೆಯ ಹಕ್ಕನ್ನು ಇತರ ಎಲ್ಲಾ ನಾಗರಿಕರಂತೆಯೇ ಸಂವಿಧಾನವು ಖಾತರಿಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ ಎಂದು ವಾದಿಸಲಾಯಿತು.

ಮತ್ತೊಂದು ಸಲಿಂಗಕಾಮಿ ದಂಪತಿ ಪಾರ್ಥ್ ಫಿರೋಜ್ ಮೆಹ್ರೋತ್ರಾ ಮತ್ತು ಉದಯ್ ರಾಜ್ ಅವರು ಸಲ್ಲಿಸಿದ ಮತ್ತೊಂದು ಅರ್ಜಿಯಲ್ಲಿ ಸಲಿಂಗ ವಿವಾಹಗಳನ್ನು ಗುರುತಿಸದಿರುವುದು ಸಂವಿಧಾನದ 14 ನೇ ವಿಧಿಯ ಅಡಿಯಲ್ಲಿ ಗುಣಮಟ್ಟದ ಹಕ್ಕು ಮತ್ತು ಸಂವಿಧಾನದ 21 ನೇ ವಿಧಿ ಅಡಿಯಲ್ಲಿ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದರು. ಇದನ್ನೂ ಓದಿ: ನನ್ನ ಪತ್ನಿಯನ್ನು ಹುಡುಕಿಕೊಡಿ- ಬೆಂಗಳೂರು ಪೊಲೀಸರಿಗೆ ಛತ್ತಿಸ್‌ಗಢ ವ್ಯಕ್ತಿ ದೂರು

Share This Article
Leave a Comment

Leave a Reply

Your email address will not be published. Required fields are marked *