ಬೆಂಗಳೂರು: ಭಾರತ್ (Bharath Brand Rice) ಅಕ್ಕಿಯನ್ನು ಕೇಂದ್ರ ಸರ್ಕಾರ ಪ್ರಚಾರಕ್ಕೋಸ್ಕರ ನೀಡುತ್ತಿದೆ ಎಂದು ಆಹಾರ ಮತ್ತು ನಾಗರೀಕ ಸಚಿವ ಮುನಿಯಪ್ಪ (Muniyappa) ಕಿಡಿಕಾರಿದ್ದಾರೆ.
ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಬಿಜೆಪಿಯ ರವಿಕುಮಾರ್ (Ravikumar) ಅವರು ಜನರು ಹಸಿವಿನಿಂದ ಬಳಲುತ್ತಿದ್ದಾರೆ ಅಂತ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಮುನಿಯಪ್ಪನವರು ಉತ್ತರಿಸಿ, ನಾವು ಅಕ್ಕಿ ಕೇಳಿದ್ದಾಗ ಕೇಂದ್ರ ಸರ್ಕಾರ ಕೊಡಲಿಲ್ಲ. ಈಗ ಭಾರತ್ ಅಕ್ಕಿ ಹೆಸರಿನಲ್ಲಿ 1 ಕೆಜಿಗೆ 29 ರೂ.ಗೆ ನಷ್ಟ ಮಾಡಿಕೊಂಡು ಅಕ್ಕಿ ಕೊಡ್ತಿದೆ. ಪ್ರಚಾರಕ್ಕಾಗಿ ಕೇಂದ್ರ ಅಕ್ಕಿ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆ ವೇಳೆ ಲೋಡ್ ಶೆಡ್ಡಿಂಗ್ – ಸೋಲಾರ್ ಬೀದಿ ದೀಪದ ಕೆಳಗೆ ಓದುತ್ತಿದ್ದಾರೆ ವಿದ್ಯಾರ್ಥಿನಿಯರು
Advertisement
Advertisement
ನಾವು ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಿ ಎಂದು ಕೇಳಿದಾಗ ನಮಗೆ ಅಕ್ಕಿ ಕೊಡಲಿಲ್ಲ. ನಾವು 34 ರೂಪಾಯಿಗೆ ಕೊಡ್ತೀವಿ ಅಂದರೂ ಕೊಡಲಿಲ್ಲ. ನಾವು ಬೇರೆ ರಾಜ್ಯದಿಂದ ಅಕ್ಕಿ ತರುವ ಪ್ರಯತ್ನ ಮಾಡಿದ್ರು ಆಗಲಿಲ್ಲ. ಹಾಗಾಗಿ ನಾವು 34 ರೂಪಾಯಿ ಹಣವನ್ನು ಫಲಾನುಭವಿಗಳಿಗೆ ನೀಡುತಿದ್ದೇವೆ. ಕೇಂದ್ರ ಸರ್ಕಾರ ಭಾರತ್ ರೈಸ್ ಅಂತ ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿ ನಷ್ಟ ಮಾಡಿಕೊಂಡು ಅಕ್ಕಿ ಕೊಡುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲೇ ಬಡಿದಾಡಿಕೊಂಡ ಕಾರ್ಯಕರ್ತರು
Advertisement
Advertisement
ನಮಗೆ ಅಕ್ಕಿ ಕೊಟ್ಟಿದ್ರೆ 34 ರೂ.ಗೆ ಕೊಡುತ್ತಿದ್ದೆವು. ರಾಜಕೀಯಕ್ಕಾಗಿ ಅವರು ನಮಗೆ ಅಕ್ಕಿ ಕೊಡಲಿಲ್ಲ. ಈಗ ನಷ್ಟ ಮಾಡಿಕೊಂಡು ಆರ್ಥಿಕ ವ್ಯವಸ್ಥೆ ಹಾಳು ಮಾಡುತ್ತಿದೆ ಎಂದು ಮುನಿಯಪ್ಪ ಕಿಡಿಕಾರಿದರು. ಇದನ್ನೂ ಓದಿ: ಸ್ಕೈವಾಕ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ – ಡಿಕೆಶಿಗೆ ಸೂರ್ಯ ಪತ್ರ