ನವದೆಹಲಿ: ಯುಗಾದಿ ಹಬ್ಬದ ನಂತರ ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಕೊಟ್ಟಿದೆ. ತುಟ್ಟಿ ಭತ್ಯೆ (Dearness Allowance) ಶೇ.4ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಮಾಡಿದೆ. ಈ ಹೆಚ್ಚಳವು 7ನೇ ಕೇಂದ್ರ ವೇತನ ಆಯೋಗದ (Central Pay Commission) ಶಿಫಾರಸುಗಳ ಆಧಾರದ ಮೇಲೆ ಅಂಗೀಕರಿಸಲ್ಪಟ್ಟ ಸೂತ್ರಕ್ಕೆ ಅನುಗುಣವಾಗಿದೆ. ಇದನ್ನೂ ಓದಿ: PSI ಅಕ್ರಮ ನೇಮಕಾತಿ ಪ್ರಕರಣ- ವಿಚಾರಣೆ ಎದುರಿಸಿದ್ದ ಮಧ್ಯವರ್ತಿ ಗಣಪತಿ ಭಟ್ ಶವವಾಗಿ ಪತ್ತೆ
Advertisement
????LIVE Now????
Cabinet Briefing by Union Minister @ianuragthakur at National Media Centre, New Delhi https://t.co/4oBBqg1uaj
— Office of Mr. Anurag Thakur (@Anurag_Office) March 24, 2023
Advertisement
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿ ನೀಡಲಾಗಿದ್ದು, ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರವು ತನ್ನ ವ್ಯಾಪ್ತಿಯ 1 ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ತುಟ್ಟಿಭತ್ಯೆ ಶೇ.4.ರಷ್ಟು ಹೆಚ್ಚಿಸಿದೆ. ಒಟ್ಟಾರೆಯಾಗಿ ತುಟ್ಟಿಭತ್ಯೆ ಹೆಚ್ಚಳ ಶೇ.38 ರಿಂದ ಶೇ.42ಕ್ಕೆ ಹೆಚ್ಚಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಅಜ್ಜಿ ಇಂದಿರಾ ಗಾಂಧಿ ಸಹ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು..!
Advertisement
ತುಟ್ಟಿಭತ್ಯೆ ಹೆಚ್ಚಳವನ್ನು 2023ರ ಜನವರಿಯಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ತುಟ್ಟಿಭತ್ಯೆ ಹೆಚ್ಚಳವನ್ನು ಪೂರೈಸಲು ಕೇಂದ್ರವು 12,815.60 ಕೋಟಿ ರೂ.ಗಳನ್ನ ಖರ್ಚು ಮಾಡಲಿದೆ. ಇದರಿಂದ ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
Advertisement
ತುಟ್ಟಿಭತ್ಯೆ ಹೇಗೆ ಲೆಕ್ಕ ಹಾಕಲಾಗುತ್ತದೆ?
ತುಟ್ಟಿಭತ್ಯೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬ ಮಾಹಿತಿಯನ್ನೂ ಅಧಿಸೂಚನೆಯಲ್ಲಿ ನೀಡಲಾಗಿದೆ. ಪರಿಷ್ಕೃತ ಮೂಲ ವೇತನ ಮತ್ತು ಭತ್ಯೆ ರಹಿತರ ಪ್ರಕಾರ ಡಿಎ ಲೆಕ್ಕಾಚಾರ ನಡೆಯಲಿದೆ. ಬೇರೆ ಯಾವುದೇ ಭತ್ಯೆ ಇಲ್ಲದಿದ್ದರೆ ಮೂಲ ವೇತನ ಮತ್ತು ಡಿಎ ಲೆಕ್ಕ ಹಾಕಲಾಗುತ್ತದೆ. ಈ ಹೆಚ್ಚಿದ ಡಿಎ, ಶಿಕ್ಷಕರು ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳ ಇತರ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಅನ್ವಯಿಸುತ್ತದೆ.