– ಹೆಚ್‌ಡಿಕೆ ಮನವಿಗೆ ಸ್ಪಂದಿಸಿದ ಅಶ್ವಿನಿ ವೈಷ್ಣವ್
ನವದೆಹಲಿ: ರಾಜ್ಯದ ಪ್ರಾದೇಶಿಕ ರೈಲು ಸಂಪರ್ಕಕ್ಕೆ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ಮೈಸೂರು-ಕೆಎಸ್‌ಆರ್ ಬೆಂಗಳೂರು ನಡುವೆ ನಿತ್ಯವು ಸಂಚರಿಸಲಿರುವ ಒಡೆಯರ್ ಎಕ್ಸ್‌ಪ್ರೆಸ್ ರೈಲು (Wodeyar Express) ರಾಮನಗರದಲ್ಲಿ (Ramanagara) ನಿಲುಗಡೆಗೆ ಅನುಮೋದನೆ ನೀಡಿದೆ.
ಈ ಬಗ್ಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnaw) ಅವರಿಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಮಾಡಿದ್ದ ಮನವಿ ಫಲಪ್ರದವಾಗಿದೆ. ಇದನ್ನೂ ಓದಿ: ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಕೇಸಲ್ಲಿ ಟ್ವಿಸ್ಟ್ – ಚಾಲಕನ ಹೇಳಿಕೆಯಲ್ಲಿ ಸಂದೇಹ
ಮಾರ್ಚ್ 24ರ ಮಂಗಳವಾರದಂದು ರೈಲ್ವೆ ಸಚಿವಾಲಯ ಈ ಬಗ್ಗೆ ಆದೇಶ ಹೊರಡಿಸಿದೆ. ಈ ಮೂಲಕ ರಾಮನಗರದಿಂದ ನಿತ್ಯವೂ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಆಗಲಿದೆ. ಈ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 2026ರ ಫೆಬ್ರವರಿ 4ರಂದು ಹೆಚ್.ಡಿ ಕುಮಾರಸ್ವಾಮಿ ಅವರು ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ IPL 2026 ಉದ್ಘಾಟನೆ – ಮಾ.28 ರಂದು ಮಧ್ಯರಾತ್ರಿವರೆಗೂ ಮೆಟ್ರೋ ಸೇವೆ ವಿಸ್ತರಣೆ
ಪ್ರತಿನಿತ್ಯವೂ ರಾಮನಗರದಿಂದ ಸಾವಿರಾರು ಪ್ರಯಾಣಿಕರು ಬೆಂಗಳೂರಿಗೆ ಉದ್ಯೋಗ, ಶಿಕ್ಷಣ, ವ್ಯಾಪರ ಇತ್ಯಾದಿ ಉದ್ದೇಶಗಳಿಗೆ ಹೋಗಿ ಬರುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಗಾರ್ಮೆಂಟ್ ಉದ್ಯಮದಲ್ಲಿ ಸಾವಿರಾರು ಮಹಿಳೆಯರು ಕೆಲಸಕ್ಕಾಗಿ ರಾಜಧಾನಿಗೆ ದಿನನಿತ್ಯವೂ ಹೋಗಿ ಬರುತ್ತಾರೆ. ಅಲ್ಲದೇ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಹೋಗಿ ಬರುತ್ತಾರೆ. ಕೂಲಿ ಕಾರ್ಮಿಕರಿಗೆ ಕೂಡ ಈ ರೈಲು ನಿಲುಗಡೆಯಿಂದ ಹೆಚ್ಚು ಪ್ರಯೋಜನ ಆಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್, ಎಲ್‌ಪಿಜಿ ಸಿಲಿಂಡರ್‌ಗೆ ತೀವ್ರ ಅಭಾವನಾ? – ಕಲಬುರಗಿಯಲ್ಲಿ ರಾತ್ರಿಯಿಡೀ ಕ್ಯೂ ಕೂತ ಜನ
ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆ ನೀಡಬೇಕು ಎಂಬುದು ಈ ಭಾಗದ ದೀರ್ಘಕಾಲದ ಸಾರ್ವಜನಿಕ ಬೇಡಿಕೆ ಆಗಿತ್ತು. ಜನರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಇದನ್ನೂ ಓದಿ: 2ನೇ ಮದ್ವೆಯಾಗ್ತಿದ್ದ ಗಂಡ – ತಾಳಿ ಕಟ್ಟೋ ವೇಳೆ ಮೊದಲ ಹೆಂಡ್ತಿ ಎಂಟ್ರಿ; ಮದುವೆ ರದ್ದು, ಪತಿ ಪೊಲೀಸರ ಅತಿಥಿ
ರಾಜ್ಯದಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ದೊಡ್ಡ ಪ್ರಮಾಣದಷ್ಟು ಜನರು ಪ್ರಯಾಣ ಮಾಡುತ್ತಾರೆ. ರಾಜ್ಯದಲ್ಲಿಯೇ ಅತಿಹೆಚ್ಚು ಜನರು ಸಂಚರಿಸುವ ಕಾರಿಡಾರ್‌ಗಳಲ್ಲಿ ಇದೂ ಒಂದಾಗಿದ್ದು, ಈ ಉಪಕ್ರಮದಿಂದ ರಾಮನಗರ ಜಿಲ್ಲೆಯ ಜನರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಂದು ʻಮನಿ ಬ್ಯಾಗ್ʼ ಕೇಸ್ – 6 ಲಕ್ಷ ಹಣದೊಂದಿಗೆ ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿ

