ಬೆಂಗಳೂರು: ನರೇಂದ್ರ ಮೋದಿ 2.0 ಸರ್ಕಾರದ ಬಹು ನಿರೀಕ್ಷೆಯ ಬಜೆಟ್ ಮಂಡನೆಯಾಗಿದ್ದು ಯಾವ ವಸ್ತುಗಳ ಬೆಲೆ ಏರಿಕೆ ಮತ್ತು ಇಳಿಕೆಯಾಗಲಿದೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ.
ಯಾವುದು ದುಬಾರಿ?
ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೆಚ್ಚುವರಿ ಮೂಲ ಸೌಕರ್ಯ ಸೆಸ್ ಅಡಿಯಲ್ಲಿ ಒಂದು ರೂ. ಸೆಸ್ ವಿಧಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್‍ನಲ್ಲಿ ಸಂಗ್ರಹಗೊಂಡ ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
ಚಿನ್ನದ ಸೆಸ್ ಹೆಚ್ಚಿಸಿ ಮಹಿಳೆಯರಿಗೆ ಶಾಕ್ ಕೊಟ್ಟ ಸೀತಾರಾಮನ್https://t.co/r7a8nkx6uF#Gold #Women #NirmalaSitharaman #Budget2019 #BudgetForNewIndia #Budget
— PublicTV (@publictvnews) July 5, 2019
Advertisement
ಶೇ.2.5 ರಷ್ಟು ಸುಂಕ ಹೆಚ್ಚಳ: ಸ್ಟೇನ್ ಲೇಸ್ ಸ್ಟೀಲ್, ವೈರ್, ಗೋಡಂಬಿ ದುಬಾರಿ, ತಾಳೆ ಎಣ್ಣೆ, ಇಂಡಸ್ಟ್ರಿಯಲ್ ಆ್ಯಸಿಡ್, ಬೆಳ್ಳಿ ಆಭರಣಗಳು, ಬೆಳ್ಳಿ ಬಿಸ್ಕತ್, ಎಂಜಿನ್ ಕಂಬಸ್ಟನ್ ಫಿಲ್ಟರ್‍ಗಳ ಮೇಲಿನ ಸುಂಕ ಹೆಚ್ಚಾಗಿದೆ.
Advertisement
ಶೇ. 5 ರಷ್ಟು ಸುಂಕ ಹೆಚ್ಚಳ: ವಾಹನಗಳ ವೈಪರ್, ಪ್ಲಾಸ್ಟಿಕ್, ಸೀಲಿಂಗ್ ಕವರ್, ಫ್ಲೋರ್ ಕವರ್, ಪ್ಲಾಸ್ಟಿಕ್, ರಬ್ಬರ್, ಪೀಠೋಪಕರಣ, ಬಾಗಿಲು, ಆಟೋಮೊಬೈಲ್ಸ್ ಲೋಹಗಳು, ಸೆರಾಮಿಕ್ ಟೈಲ್ಸ್, ಆಟೋಫ್ರಿಕ್ಶನ್ ಮೆಟಿರಿಯಲ್, ಗ್ಲಾಸ್, ವಾಹನಗಳ ಲಾಕ್, ಫೈಬರ್, ದ್ವಿಚಕ್ರ ವಾಹನಗಳ ಸಿಗ್ನಲಿಂಗ್ ಮೇಲೆ ಶೇ.5 ರಷ್ಟು ಸುಂಕ ಹೆಚ್ಚಳವಾಗಿದೆ.
Advertisement
ಉಳಿದಂತೆ ಸ್ಟೋನ್ ಕ್ರಷರ್, ಗೋಡಂಬಿ, ತಾಳೆ ಎಣ್ಣೆ ಮೇಲೆ ಶೇ.7.5 ರಷ್ಟು ಸುಂಕ ಏರಿಕೆ ಮಾಡಲಾಗಿದೆ. ನ್ಯೂಸ್ ಪ್ರಿಂಟ್, ಮುದ್ರಣ ಕಾಗದಗಳ ಮೇಲಿನ ಸುಂಕ ಶೇ.10 ರಷ್ಟು ಹೆಚ್ಚಳವಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂ. ಸೆಸ್https://t.co/hYaRzFohy1#Minister #NirmalaSitharaman #Budget2019 #UnionBudget2019 #NarendraModi #BudgetForNewIndia #NDA #Petrol #Diesel @nsitharaman @PMOIndia
— PublicTV (@publictvnews) July 5, 2019
ಸಿಸಿಟಿವಿ, ಚಾರ್ಜರ್, ಅಡಾಪ್ಟರ್, ಡಿವಿಆರ್, ಐಪಿ ಕ್ಯಾಮೆರಾ ಮೇಲೆ ಶೇ. 15 ರಷ್ಟು ಸುಂಕ ಏರಿಕೆ ಮಾಡಿದ್ದರೆ, ಸ್ಪೀಕರ್ ಮೇಲೆ ಶೇ.8 ರಷ್ಟು ಸುಂಕ ಹೆಚ್ಚಳ ಮಾಡಲಾಗಿದೆ.
ಚಿನ್ನದ ಅಭರಣಗಳ ಮೇಲಿನ ಆಮದು ಸುಂಕವನ್ನು ಶೇ. 10 ರಿಂದ ಶೇ. 12.5 ಕ್ಕೆ ಹೆಚ್ಚಳ ಮಾಡಲಾಗಿದೆ. ವಾಟರ್ ಬ್ಲಾಕಿಂಗ್ ಟೇಪ್ಸ್, ಮಾರ್ಬಲ್ ಸ್ಲ್ಯಾಬ್ಸ್ ಮೇಲೆ ಶೇ.20 ರಷ್ಟು ಆಮದು ಸುಂಕವನ್ನು ಹೆಚ್ಚಳ ಮಾಡಲಾಗಿದೆ.
ಯಾವುದು ಅಗ್ಗ?
ಪಾಮ್ ಆಯಿಲ್, ಫ್ಯಾಟಿ ಆಯಿಲ್, ಇಥಲಿನ್, ಕೋಬಾಲ್ಟ್, ಡಯಾಲಿಸಿಸ್ ಯಂತ್ರ ಮತ್ತು ಪರಿಕರಗಳು, ಕೃತಕ ಕಿಡ್ನಿ, ಶಸ್ತ್ರ ಚಿಕಿತ್ಸೆ ಉಪಕರಣಗಳು, ಚರ್ಮೋತ್ಪನ್ನ.
ಸೂಟ್‍ಕೇಸ್ ಸಂಸ್ಕೃತಿಗೆ ಬ್ರೇಕ್ – ಕೆಂಪು ಬಣ್ಣದ ಬಟ್ಟೆಯ ಬ್ಯಾಗಿನಲ್ಲಿ ಬಜೆಟ್ ಪ್ರತಿ https://t.co/tTtIvdWzYR#Minister #NiramalaSitaraman #Budget2019 #UnionBudget2019 #NarendraModi @narendramodi @PMOIndia @nsitharaman @BJP4Karnataka @INCKarnataka #BudgetForNewIndia
— PublicTV (@publictvnews) July 5, 2019