ನವದೆಹಲಿ: ನಮ್ಮ ಬೆಂಗಳೂರು ಮೆಟ್ರೋ (Namma Metro) ರೈಲು ಯೋಜನೆ 3ನೇ ಹಂತದ 2 ಕಾರಿಡಾರ್‌ಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.
A boost for Namma Bengaluru’s infrastructure…
The Metro network of the city expands with the Cabinet approving 2 new corridors, consisting 30 more stations. This will enhance the commuter experience and boost ‘Ease of Living.’ https://t.co/JZv1pAGj4r pic.twitter.com/AJsyFVfyVL
— Narendra Modi (@narendramodi) August 16, 2024
Advertisement
ಬೆಂಗಳೂರಿನ ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 21 ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಕಾರಿಡಾರ್-1ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅನುಮೋದಿಸಿದೆ. ಇದರ ಜೊತೆಗೆ ಹೊಸಹಳ್ಳಿಯಿಂದ ಕಡಬಗೆರೆವರೆಗಿನ 9 ನಿಲ್ದಾಣಗಳೊಂದಿಗೆ ಕಾರಿಡಾರ್-2ಕ್ಕೂ ಕೇಂದ್ರದಿಂದ ಅನುಮೋದನೆ ನೀಡಲಾಗಿದೆ ಎಂದು ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: TB Dam| ಮೊದಲ ಎಲಿಮೆಂಟ್ ಅಳವಡಿಸುವ ಕಾರ್ಯ ಯಶಸ್ವಿ
Advertisement
Advertisement
ಈ ಮೆಟ್ರೋ ರೈಲು ಯೋಜನೆ ಕಾರಿಡಾರ್ ಅನುಮೋದಿಸುವ ಮೂಲಕ ಕೇಂದ್ರ ಸರ್ಕಾರ ಕರ್ನಾಟಕದ ರಾಜಧಾನಿಗೆ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಳೆದ ಹತ್ತು ವರ್ಷಗಳಿಂದಲೂ ಸಮರ್ಥ ಆಡಳಿತ ನಡೆಸುವ ಜೊತೆಗೆ ರಾಷ್ಟ್ರದ ಸಂಪೂರ್ಣ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಈ ಕಾರ್ಯತತ್ಪರತೆ ರಾಜ್ಯ ರಾಜಧಾನಿಯಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ವೈದ್ಯಕೀಯ ಕೋರ್ಸುಗಳ ನೋಂದಣಿಗೆ ಅಂತಿಮ ಅವಕಾಶ: ಕೆಇಎ
Advertisement