ಪ್ರಚಲಿತ ವಿದ್ಯಮಾನಗಳಿಗೆ ತನ್ನದೇ ಧಾಟಿಯಲ್ಲಿ ಪ್ರತಿಕ್ರಿಯಿಸಿ ವಿವಾದಕ್ಕೆ ಸಿಲುಕಿರುವ ನಟ ಚೇತನ್ (Chetan Ahimsa), ಈಗ ಸಲಿಂಗ ವಿವಾಹ ಕುರಿತು ಮಾತನಾಡಿ ಸುದ್ದಿಯಲ್ಲಿದ್ದಾರೆ. ಸಲಿಂಗ ವಿವಾಹ (Same-Sex Marriage) ಕುರಿತು ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ದೋಷಪೂರಿತ ಎಂದಿದ್ದಾರೆ. ಆ ಮೂಲಕ ಸಲಿಂಗ ವಿವಾಹಕ್ಕೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ.
Advertisement
ಪೋಸ್ಟ್‌ನಲ್ಲೇನಿದೆ?
ಸಲಿಂಗ ವಿವಾಹ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸಲಿಂಗ ವಿವಾಹದ ಬೇಡಿಕೆಯು ‘ನಗರದ ಗಣ್ಯರ ದೃಷ್ಟಿಕೋನ’ ಎಂದು ಕೇಂದ್ರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದು ದೋಷಪೂರಿತ ತಿಳುವಳಿಕೆಯಾಗಿದೆ. ಇದನ್ನೂ ಓದಿ: ಸಲಿಂಗ ವಿವಾಹ ವಿಚಾರದಲ್ಲಿ ಸುಪ್ರೀಂ ಮಧ್ಯಪ್ರವೇಶ ಮಾಡಬಾರದು – ಕೇಂದ್ರದ ಪರ ವಾದ
Advertisement
Advertisement
ಹೆಟೆರೊ-ನಿಯಮಿತ (Herero-normative) ಸಮಾಜವು ಅದರ ಅಂತರ್ಗತ ಸವಲತ್ತುಗಳೊಂದಿಗೆ ಮದುವೆಯನ್ನು ಪುರುಷ ಮತ್ತು ಮಹಿಳೆಯ ನಡುವೆ ಎಂದು ವ್ಯಾಖ್ಯಾನಿಸಿದೆ. ಬದಲಾಗಿ ಇದು, ಮದುವೆಯು 2 ಒಪ್ಪಿಗೆಯ ವಯಸ್ಕರ ನಡುವೆ ಇರಬೇಕು.
Advertisement
ನಮ್ಮ LGBTQ+ ಭಾರತೀಯರಿಗೆ ಸುಪ್ರೀಂ ಕೋರ್ಟ್ ನ್ಯಾಯ ನೀಡುತ್ತದೆ ಎಂದು ನಾವು ನಂಬುತ್ತೇವೆ ಎಂದು ಚೇತನ್ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸಲಿಂಗ ವಿವಾಹ ಭಾರತದ ಸಾಮಾಜಿಕ ನೀತಿಗೆ ವಿರುದ್ಧ, ಎಲ್ಲಾ ಅರ್ಜಿ ವಜಾಗೊಳಿಸಿ – ಕೇಂದ್ರ ಸರ್ಕಾರ
ಏನಿದು ಪ್ರಕರಣ?
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಇಬ್ಬರು ಸಲಿಂಗಿ ದಂಪತಿಗಳು ತಮ್ಮ ವಿವಾಹದ ಹಕ್ಕನ್ನು ಜಾರಿಗೊಳಿಸಲು ಮತ್ತು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹಗಳನ್ನು ನೋಂದಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಪ್ರತ್ಯೇಕ ಮನವಿಗಳಿಗೆ ಸುಪ್ರೀಂ ಕೋರ್ಟ್, ಕೇಂದ್ರದಿಂದ ಪ್ರತಿಕ್ರಿಯೆ ಕೋರಿತ್ತು.
ಸಲಿಂಗ ವಿವಾಹವು ‘ನಗರ ಗಣ್ಯರ ಸಂಸ್ಕೃತಿ‘ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ (Supreme Court) ಹೇಳಿದೆ. ಅಲ್ಲದೇ ಮದುವೆಗೆ ಅಂಗೀಕಾರ ನೀಡುವುದು ಶಾಸಕಾಂಗದ ಕೆಲಸವಾಗಿದ್ದು, ಕೋರ್ಟ್ ಇದರಿಂದ ಹಿಂದೆ ಸರಿಯಬೇಕು ಎಂದು ಹೇಳಿದೆ. ಸಿಜೆಐ ಡಿ.ವೈ ಚಂದ್ರಚೂಡ್ ಅವರ ನೇತೃತ್ವದಲ್ಲಿ ನ್ಯಾಯಮೂರ್ತಿ ಎಸ್.ಕೆ ಕೌಲ್, ನ್ಯಾ. ಎಸ್. ರವೀಂದ್ರ ಭಟ್, ನ್ಯಾ. ಪಿ.ಎಸ್ ನರಸಿಂಹ ಹಾಗೂ ನ್ಯಾ. ಹಿಮಾ ಕೊಹ್ಲಿ ಅವರಿರುವ ಪೀಠ ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಕೇಂದ್ರ ಸರ್ಕಾರದ ವಿರೋಧ