ರಾಯಚೂರು: ಪ್ರಜ್ವಲ್ (Prajwal Revanna) ದೇಶ ಬಿಟ್ಟು ಹೋಗಲು ಕೇಂದ್ರದ ಸಪೋರ್ಟ್ ಇದೆ ಎಂದು ಯುವ ಕಾಂಗ್ರೆಸ್ (Congress) ಅಧ್ಯಕ್ಷ ಬಿ.ವಿ.ಶ್ರೀನಿವಾಸ್ (BV Srinivas) ಆರೋಪಿಸಿದ್ದಾರೆ.
ಈ ಕುರಿತು ರಾಯಚೂರಿನಲ್ಲಿ (Raichur) ಮಾತನಾಡಿದ ಅವರು, ಪ್ರಜ್ವಲ್ ವಿಚಾರದಲ್ಲಿ ಬಿಜೆಪಿ (BJP) ಡಬಲ್ ಸ್ಟ್ಯಾಂಡ್ ತೆಗೆದುಕೊಂಡಿದೆ. ಬಿಜೆಪಿ ಸತ್ತ ಹೆಣದ ಮೇಲೆ ರಾಜಕೀಯ ಮಾಡೋದನ್ನ ನೋಡಿದ್ದೇವೆ. ದೇವರಾಜೇಗೌಡ 6 ತಿಂಗಳ ಮುಂಚೆಯೇ ಪತ್ರ ಬರೆದಿದ್ದರು. ಆದರೆ ಮೋದಿ, ವಿಜಯೇಂದ್ರ, ಅಮಿತ್ ಶಾ ಇವರೆಲ್ಲರೂ ಸೇರಿ ಟಿಕೆಟ್ ನೀಡಿದರು. ಕರ್ನಾಟಕದ ಮಾನ-ಮರ್ಯಾದೆ ರಸ್ತೆ ರಸ್ತೆಗಳಲ್ಲಿ ಪೆನ್‌ಡ್ರೈವ್ ಮೂಲಕ ಹರಾಜಾಗುತ್ತಿದೆ. ಇದು ಒಂದಲ್ಲ ಎರಡಲ್ಲ ಮಾಸ್ ರೇಪಿಸ್ಟ್ ಪ್ರಕರಣ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಾಸನದಿಂದ ಪ್ರಜ್ವಲ್ ಈಗ ಗೆದ್ದರೆ ಅಮಾನತು ಮಾಡ್ತೀವಿ: ಆರ್.ಅಶೋಕ್
Advertisement
ಬಿಜೆಪಿಯವರು ಬೇಟಿ ಬಚಾವೋ ಬೇಟಿ ಪಡಾವೋ ಎಂದು ಹೇಳುತ್ತಾರೆ. ಆದರೆ ನಾವು ಬೇಟಿನಾ ಬಿಜೆಪಿ ನಾಯಕರಿಂದ ಬಚಾವ್ ಮಾಡ್ಬೇಕಾ? ಅವರ ಮೈತ್ರಿ ಪಕ್ಷದಿಂದ ಬಚಾವ್ ಮಾಡಬೇಕಾ? ಇಡೀ ದೇಶದ ಜನರ ಬಳಿ ಮೋದಿ ಮತ್ತು ಅಮಿತ್ ಶಾ ಕ್ಷಮೆಯಾಚಿಸಲಿ. ಪ್ರಜ್ವಲ್ ರೇವಣ್ಣನಿಗೆ ವೋಟ್ ಕೊಟ್ಟರೆ ನನಗೆ ಬಲಪಡಿಸಿದ ಹಾಗೆ ಎಂದರು. ನೇಹಾ ಹತ್ಯೆ ಬಗ್ಗೆ ನಿಮಗೆಷ್ಟು ಕಾಳಜಿ ಇತ್ತಲ್ವಾ? ಈಗ ಈ 400 ಮಹಿಳೆಯರ ಬಗ್ಗೆ ಯಾಕೆ ಕಾಳಜಿ ಇಲ್ಲಾ? ಯಾಕೆ ಈವರೆಗೂ ನೀವು ಮೈತ್ರಿಯನ್ನು ರದ್ದು ಮಾಡ್ತಿಲ್ಲಾ? ಅಮಿತ್ ಶಾ ಮತ್ತು ನಡ್ಡಾನ ನೇಹಾ ಮನೆಗೆ ಕರೆದುಕೊಂಡು ಹೋಗುತ್ತೀರಾ. ಈ ಸಂತ್ರಸ್ತರ ಮನೆಗೆ ಯಾವಾಗ ನಿಮ್ಮ ನಾಯಕರನ್ನು ಕರೆದುಕೊಂಡು ಹೋಗುತ್ತೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜೆಪಿ ನಡ್ಡಾ ವಿರುದ್ಧ ದೂರು-ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು
Advertisement
Advertisement
ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡಿ ಡೈವರ್ಟ್ ಮಾಡುತ್ತಿದ್ದಾರೆ. ಪರಿಶೀಲನೆ ನಡೆಸುವ ಮುಂಚೆ ಕೇಂದ್ರ ಸರ್ಕಾರ ವೀಸಾ ಕೊಟ್ಟು ಜರ್ಮನಿಗೆ ಕಳುಹಿಸಿದೆ. ಇದರಲ್ಲಿ ಬಿಜೆಪಿ ಕೇಂದ್ರ ಸರ್ಕಾರದ ಕೈವಾಡವಿದೆ. ಬಿಜೆಪಿ, ಮೋದಿಯವರ ಸಪೋರ್ಟ್ ಪ್ರಜ್ವಲ್ ರೇವಣ್ಣ ಮೇಲಿದೆ. ಬಿಜೆಪಿಯವರು ಮತಕ್ಕಾಗಿ ಮೈತ್ರಿ ಮುಂದುವರಿಕೆ ಮಾಡುತ್ತೀರಾ? ಕುಮಾರಸ್ವಾಮಿ ಹಿಟ್ ಅಂಡ್ ರನ್ ಹೇಳಿಕೆ ಕೊಡುತ್ತಿದ್ದಾರೆ. ಪೆನ್‌ಡ್ರೈವ್ ಬಿಡುತ್ತೇನೆ, ಪೆನ್‌ಡ್ರೈವ್ ಬಿಡುತ್ತೇನೆ ಎಂದು ಹೇಳಿದವರು ಯಾರು? ಎಲ್ಲೋ ಕನ್ಫ್ಯೂಸ್ ಆಗಿ ಮನೆಯ ಪೆನ್‌ಡ್ರೈವ್ ಬಿಟ್ಟಿದ್ದಾರಾ? ಬಿಜೆಪಿ ಅವರಿಗಿಂತ ಜಾಸ್ತಿ ಸುಳ್ಳು ಹೇಳೋದನ್ನ ಕುಮಾರಸ್ವಾಮಿ ಮಾಡುತ್ತಿದ್ದಾರೆ. ನಮ್ಮ ಜೊತೆ ಮೈತ್ರಿ ಇದ್ದಾಗ ತಪ್ಪು ಬಂದಿದ್ದರೆ ಸ್ಟ್ಯಾಂಡ್ ತೆಗೆದುಕೊಳುತ್ತಿದ್ದೆವು. ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡೋದು ಕೇಂದ್ರದ ಕೈಯಲ್ಲಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಬೆಂಕಿಯೊಂದಿಗೆ ಆಟವಾಡುತ್ತಿದೆ: ರಾಜನಾಥ್ ಸಿಂಗ್
Advertisement