ನಾನಿ ಚಿತ್ರಕ್ಕೆ ಸೆನ್ಸಾರ್ : ಸಿಕ್ಕ ಸರ್ಟಿಫಿಕೇಟ್ ಯಾವುದು?

Public TV
1 Min Read
Saripodha Sanivaram 1

ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ `ಸರಿಪೋಧಾ ಸನಿವಾರಂ’ (Saripodha Sanivaram) ಸಿನಿಮಾ ಇದೇ ಆಗಸ್ಟ್ 29ಕ್ಕೆ ಭಾರತಾದ್ಯಂತ ತೆರೆಗೆ ಬರೋಕೆ ಸಿದ್ಧವಾಗಿದೆ. `ಹಾಯ್ ನಾನ್ನ’ ಸಿನಿಮಾದ ನಂತರ ನಟ ನಾನಿ (Nani) ತುಂಬಾನೇ ವಿಭಿನ್ನವಾಗಿ ಕಾಣಿಸಿಕೊಂಡ ಸಿನಿಮಾ `ಸರಿಪೋಧಾ ಸನಿವಾರಂ’. ಸದ್ಯ ಈ ಸಿನಿಮಾಗೆ ಸೆನ್ಸಾರ್ (Censor) ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ರಿಲೀಸ್‌ಗೆ ಭರ್ಜರಿ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ.

Saripodha Sanivaram 2

ಈ ಮೊದ್ಲು `ಅಂತೆ ಸುಂದರಾನಿಕಿ’ ಸಿನಿಮಾಗೆ ಆ್ಯಕ್ಷನ್‌ಕಟ್ ಹೇಳಿದ್ದ ನಿರ್ದೇಶಕ ವಿವೇಕ್ ಆತ್ರೇಯ, `ಸರಿಪೋಧಾ ಸನಿವಾರಂ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾನಿಗೆ ನಾಯಕಿಯಾಗಿ ಪ್ರಿಯಾಂಕ ಮೋಹನ್ ಕಾಣಿಸಿಕೊಂಡಿದ್ದಾರೆ. ಖಾಕಿ ಹಾಕಿ ಖದರ್ ತೋರಿಸೋಕೆ ಪ್ರಿಯಾಂಕ ಮೋಹನ್ ರೆಡಿಯಾಗಿದ್ದಾರೆ.

ಹಾಯ್ ನಾನ್ನ ಸಿನಿಮಾ ಮೂಲಕ ಪ್ರೀತಿ, ಪ್ರೇಮ ಅಂತಾ ಮರ ಸುತ್ತಿದ್ದ ನಾನಿಯ ಮಾಸ್ ಎಲಿಮೆಂಟ್ ಚಿತ್ರ ಥಿಯೇಟರ್ ಅಂಗಳಕ್ಕೆ ಬರೋಕೆ ಸಿದ್ಧವಾಗಿದೆ. ಸೆನ್ಸಾರ್‌ನಿಂದ ಯು/ಎ ಸರ್ಟಿಫಿಕೇಟ್ ಕೂಡಾ ಸಿಕ್ಕಾಗಿದೆ. ಇನ್ನೇನಿದ್ರೂ ಕಟೌಟ್ ನಿಲ್ಲಿಸಿ ಹಬ್ಬ ಸೆಲಬ್ರೇಟ್ ಮಾಡೋದಷ್ಟೇ ಬಾಕಿ.

Share This Article