ಚಿಕ್ಕಬಳ್ಳಾಪುರ: 36 ಟನ್ ಸಿಮೆಂಟ್ ತುಂಬಿದ್ದ ಬೃಹತ್ ಟ್ಯಾಂಕರ್ ಲಾರಿಯನ್ನ ಕದ್ದಿದ್ದ ಕಳ್ಳರು ಒಂದು ಕಡೆ ಸಿಮೆಂಟ್ ಮತ್ತೊಂದು ಕಡೆ ಲಾರಿ ಬಿಟ್ಟು ಪರಾರಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಿಂದ ಸಿಮೆಂಟ್ ಟ್ಯಾಂಕರ್ ಕಳವು ಮಾಡಿದ್ದ ಖದೀಮರು, 36 ಟನ್ ಸಿಮೆಂಟ್ ಅನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ-ಹೊಸಕೋಟೆ ಮಾರ್ಗದ ವೈಜಕೂರು ಗ್ರಾಮದ ಬಳಿಯ ಬಡಾವಣೆಯಲ್ಲಿ ಡಂಪ್ ಮಾಡಿ, ಲಾರಿಯನ್ನ ಎಚ್ ಕ್ರಾಸ್ ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
Advertisement
ಎಂಎಸ್‍ಕೆ ಲಾಜಿಸ್ಟಿಕ್ಸ್ ಕಂಪನಿಗೆ ಸೇರಿದ ಟಿಎನ್28 ಎಎಲ್ 9110 ನಂಬರಿನ ಟ್ಯಾಂಕರ್ ಇದಾಗಿದ್ದು, ದಾಲ್ಮಿಯಾ ಕಂಪನಿಗೆ ಸೇರಿದ ಸಿಮೆಂಟ್ ನ್ನ ಜಮ್ಮಲಮಡುಗು ವಿನಿಂದ ಹೊಸಕೋಟೆ ಗೆ ತುಂಬಿಕೊಂಡು ಬರಲಾಗಿತ್ತು. ಆದ್ರೆ ನಿಂತಿದ್ದ ಲಾರಿಯನ್ನ ಖದೀಮರು ಕದ್ದು ಈ ಕೃತ್ಯ ಎಸಗಿದ್ದು, ಸದ್ಯ ಕಳ್ಳ ಖದೀಮರಿಗಾಗಿ ಹೊಸಕೋಟೆ ಪೊಲೀಸರು ಬಲೆ ಬೀಸಿದ್ದಾರೆ.
Advertisement