ಬಳ್ಳಾರಿ: ದೀಪಾವಳಿಯಲ್ಲಿಯೇ ಮತ್ತೊಂದು ಸಂಕಷ್ಟವನ್ನು ಮಾಜಿ ಸಚಿವ ಹಾಗೂ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಎದುರಿಸುತ್ತಿದ್ದಾರೆ. ಅವರು ಮತ್ತೆ ಜೈಲಿಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ.
ಜನಾರ್ದನ ರೆಡ್ಡಿ ಅವರು ರದ್ದಾದ ನೋಟುಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ವಿಚಾರಣೆಗೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಬೆಂಗಳೂರು ಸಿಸಿಬಿ ವಿಶೇಷ ತಂಡವು ಜನಾರ್ದನ ರೆಡ್ಡಿ ಅವರನ್ನು ಭೇಟಿ ಆಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಸಾರ್ವಜನಿಕರಿಗೆ ವಂಚಿಸಿದ್ದ ಕಂಪೆನಿ ಜೊತೆಗೂಡಿ ಜನಾರ್ದನ ರೆಡ್ಡಿ ಅಮಾನೀಕರಣಗೊಂಡ ನೋಟುಗಳನ್ನು ವರ್ಗಾವಣೆ ಮಾಡಿಕೊಂಡಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಜನಾರ್ದನ ರೆಡ್ಡಿ ಪಿಎಗಾಗಿ ಸಿಸಿಬಿ ತಂಡ ತೀವ್ರ ಶೋಧ ನಡೆಸುತ್ತಿದೆ. ದೇವನಹಳ್ಳಿ ರೇಸಾರ್ಟ್ ಬಳಿಯೂ ಸಿಸಿಬಿ ತಂಡ ತೆರಳಿದೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಅಲಿಖಾನ್ ಪತ್ತೆಗಾಗಿ ಸಿಸಿಬಿ ತಂಡ ಚುರುಕು ಕಾರ್ಯಾಚರಣೆ ನಡೆಸಿದೆ. ಇತ್ತ ಜನಾರ್ದನ ರೆಡ್ಡಿ ಮೊಬೈಲ್ ಕೂಡ ಸ್ವೀಚ್ ಆಫ್ ಆಗಿದೆ. ಹೀಗಾಗಿ ಅವರು ಪತ್ತೆ ಆಗುತ್ತಿದ್ದಂತೆ ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv