ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಬಳ್ಳಾರಿ ನಿವಾಸ ಅಹಂಬಾವಿ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಳ ಮೇಲೆ ರೆಡ್ಡಿ ಅತ್ತೆ ನಾಗಲಕ್ಷ್ಮಮ್ಮ ಕೂಗಾಟ ನಡೆಸಿದ್ದಾರೆ ಎನ್ನಲಾಗಿದೆ.
ಇಂದು ಬೆಳಂಬೆಳಗ್ಗೆ ಅಹಂಬಾವಿ ನಿವಾಸ ಮೇಲೆ ಸಿಸಿಬಿ ಪೊಲೀಸರ 8 ಜನರ ತಂಡ ದಾಳಿ ನಡೆಸಿ ಪರಿಶೀಲನೆ ಆರಂಭಿಸಿತ್ತು. ಆದರೆ ಈ ವೇಳೆ ಮನೆಯಲ್ಲಿ ನಾಗಕ್ಷ್ಮಮ್ಮ ಅವರು ಅಧಿಕಾರಿಗಳ ಕಂಡು ಕೂಗಾಟ ನಡೆಸಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ತನ್ನ ಮಗಳು ಹಾಗೂ ಅಳಿಯ ಇಲ್ಲದ ವೇಳೆ ಏಕೆ ಆಗಮಿಸಿದ್ದೀರಿ. ನಿಮಗೆ ಏನು ಬೇಕು? ನನ್ನ ಮಗಳು, ಅಳಿಯ ಬಂದ ಮೇಲೆ ಬನ್ನಿ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭಿಸಿದೆ.
Advertisement
Advertisement
ನಾಗಲಕ್ಷ್ಮಮ್ಮ ಅವರ ಈ ಮಾತಿಗೆ ಉತ್ತರ ನೀಡಿದ ಅಧಿಕಾರಿಗಳು ಮಾಹಿತಿ ನೀಡಿ ಮಹಿಳಾ ಪೊಲೀಸರನ್ನು ಕರೆಸಿಕೊಂಡಿದ್ದಾರೆ. ಸದ್ಯ ಪರಿಶೀಲನೆ ನಡೆಯುವವರೆಗೂ ನಾಗಕ್ಷ್ಮಮ್ಮ ಅವರು ಮಹಿಳಾ ಅಧಿಕಾರಿಯ ವಶದಲ್ಲಿ ಇರಲಿದ್ದಾರೆ. ಕಳೆದ ಬಾರಿ ಮಗಳ ಮದುವೆ ವೇಳೆಯೂ ಇದೆ ರೀತಿ ದಾಳಿ ನಡೆಸಿ ಮನೆಯಲ್ಲಿದ್ದ ಸಂಭ್ರಮವನ್ನು ಹಾಳು ಮಾಡಿದ್ದರು. ಇಂದು ದೀಪಾಳಿಯ ಹಬ್ಬದ ಸಂಭ್ರಮದ ವೇಳೆಯೂ ಇದೇ ರೀತಿ ಮಾಡಿದ್ದಾರೆ ಎಂಬ ಅಂಶದ ಮೇಲೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಪೊಲೀಸರ ದಾಳಿ ವೇಳೆ ಜನಾರ್ದನ ರೆಡ್ಡಿ ಮನೆಯಲ್ಲಿ ಯಾರು ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು. ಮನೆಯಲ್ಲಿ ಕೆಲಸ ಮಾಡುವ ಮಂದಿ ಇದ್ದರು ಅಷ್ಟೇ. ಆದರೆ ಶಾಸಕ ಶ್ರೀರಾಮುಲು ಅವರು ಸ್ಥಳಕ್ಕೆ ಆಗಮಿಸಿ ಪೊಲೀಸರ ಪರಿಶೀಲನೆಗೆ ಬೇಕಾದ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆಯೇ ರೆಡ್ಡಿ ಅವರ ಅತ್ತೆಯೂ ಸ್ಥಳಕ್ಕೆ ಆಗಮಿಸಿದ್ದಾರೆ.
ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿಗೆ ತಲುಪಿದೆ ಎನ್ನಲಾದ 57 ಕೆಜಿ ಚಿನ್ನಕ್ಕಾಗಿ ಪೊಲೀಸರು ಬೆಳಗ್ಗೆಯಿಂದಲೂ ಶೋಧಕಾರ್ಯ ನಡೆಸಿದ್ದು, ಮನೆಯ ಎಲ್ಲ ಭಾಗಗಳಲ್ಲಿ ಪರಿಶೀಲನೆಯ ಕಾರ್ಯ ನಡೆಸಿದ್ದಾರೆ. ಇನ್ನು ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv