ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರ ದಾಳಿ ಎರಡನೇ ದಿನವೂ ಮುಂದುವರಿದಿದ್ದು, ಜೂಜು ಅಡ್ಡೆಯ ಮೇಲೆ ಸಿಸಿಬಿ ದಾಳಿ ಮಾಡಿದ್ದಾರೆ.
ಶುಕ್ರವಾರ ಅಕ್ರಮ ಹುಕ್ಕಾ ಬಾರ್ ಗಳ ಮೇಲೆ ನಡೆಸಿದ ಪೊಲೀಸ್ರು ಶನಿವಾರ ರಾತ್ರಿ ಯಶವಂತಪುರದಲ್ಲಿರುವ ಪತ್ರಿಷ್ಠಿತ ಆರ್ ಜೆ ಹೋಟೆಲಿನಲ್ಲಿ ನಡೆಯುತ್ತಿದ್ದ ಜೂಜಾಟದ ಅಡ್ಡೆ ಮೇಲೆ ಸಿಸಿಬಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 9 ಲಕ್ಷ ನಗದು ಮದ್ಯ ಬಾಟಲ್, ನಕಲಿ ಐಡಿಗಳು, 3.5 ಕೋಟಿ ಮೌಲ್ಯದ ಗ್ಯಾಮ್ ಬ್ಲಿಂಗ್ ಟೋಕನ್ ಗಳ ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
Advertisement
ದಾಳಿ ವೇಳೆ ಹೊರ ರಾಜ್ಯ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಜೂಜಾಟ ಆಡುವರನ್ನು ವಿಮಾನದ ಮೂಲಕ ಕರೆತರಲಾಗುತ್ತಿತ್ತು ಎನ್ನಲಾಗಿದೆ. ವಿಮಾನಯಾನಕ್ಕೆ ಶುಲ್ಕವನ್ನು ಆಯೋಜಕರೇ ಪಾವತಿ ಮಾಡಿರುವುದು ದಾಳಿ ವೇಳೆ ಪತ್ತೆಯಾಗಿದೆ. ಆರ್ ಜೆ ಹೋಟೆಲಿನಲ್ಲಿ ಜೂಜಾಟ ಆಯೋಜನೆ ಮಾಡಿರುವುದು ಕನ್ನಡ ಚಿತ್ರಗಳಿಗೆ ಫೈನಾನ್ಸ್ ಮಾಡುತ್ತಿದ್ದ ಫೈನಾನ್ಶಿಯರ್ ಕಪಾಲಿ ಮೋಹನ್ ಎಂದು ತಿಳಿದು ಬಂದಿದೆ.
Advertisement
ದಾಳಿ ಬಳಿಕ ಕಪಾಲಿ ಮೋಹನ್ ನಾಪತ್ತೆಯಾಗಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 50 ಬಾರ್ ಗಳನ್ನ ಕಪಾಲಿ ಮೋಹನ್ ಹೊಂದಿದ್ದಾರೆ. ಸಿಸಿಬಿ ದಾಳಿಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಆಯೋಜಕರೇ ಜೂಜಾಟ ಆಡುವರನ್ನು ವಿಮಾನದ ಮೂಲಕ ನಗರಕ್ಕೆ ಕರೆತಂದು ಜೂಜಾಟ ಆಡಿಸುತ್ತೀರುವುದು ಪತ್ತೆ ಮಾಡಿದ್ದಾರೆ.
Advertisement
ಸೂಸೈಟಿ ಆಕ್ಟ್ ಪ್ರಕಾರ ನೋಂದಣಿಯಾಗಿರಬೇಕು. ಆದರೆ ಲೈಸನ್ಸ್ ನ ಅವಧಿ ಮುಗಿದು ಎರಡು ವರ್ಷ ಆಗಿದೆ. ಆದರೂ ರಿನಿವಲ್ ಮಾಡಿಕೊಂಡಿಲ್ಲ. ಜೂಜಾಟ ಆಡಲು ಬಂದಿರುವರಿಗೆ ಸ್ಥಳದಲ್ಲೇ ಯಾವ ರೀತಿ ಐಡಿ ಕಾರ್ಡ್ ಗಳನ್ನು ತಯಾರು ಮಾಡಿಕೊಡುತ್ತಿರುವುದು ಪತ್ತೆಯಾಗಿದೆ. ಸದ್ಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 47 ಜನರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv