-40 ಜನರು, 37.41 ಲಕ್ಷ ರೂ. ಹಣ ವಶಕ್ಕೆ ಪಡೆದ ಸಿಸಿಬಿ
ಬೆಂಗಳೂರು: ಗೋವಾ ಮಾದರಿಯಲ್ಲಿ ನಡೆಯುತ್ತಿದ್ದ ಕ್ಯಾಸಿನೊ ಕ್ಲಬ್ ಮೇಲೆ ಸಿಸಿಬಿ ದಾಳಿ ಮಾಡಿದ್ದು, 40 ಜನರನ್ನು ಹಾಗೂ 37.41 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದೆ.
ನಗರದ ಕೆ.ಆರ್.ಪುರಂ ನಲ್ಲಿರುವ ಡಿಲೈಟ್ ರಿಕ್ರಿಯೇಷನ್ ಕ್ಲಬ್ ಮೇಲೆ ಸಿಸಿಬಿಯ ಎಸಿಪಿ ಪಿ.ಟಿ.ಸುಬ್ರಮಣ್ಯ ನೇತೃತ್ವದ ತಂಡವು ಗುರುವಾರ ದಾಳಿ ನಡೆಸಿದೆ. ಮಂಗಳೂರು ಮೂಲದ ಮಣಿಕಂಠ ಡಿಲೈಟ್ ರಿಕ್ರಿಯೇಷನ್ ಕ್ಲಬ್‍ನಲ್ಲಿ ಕ್ಯಾಸಿನೊ ನಡೆಸುತ್ತಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
Advertisement
Advertisement
ಕ್ಯಾಸಿನೊ ಆಡಲು ಇಲ್ಲಿಗೆ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಜನರು ಬರುತ್ತಿದ್ದರು. ಅಷ್ಟೇ ಅಲ್ಲದೆ ಆನ್‍ಲೈನ್ ಮೂಲಕ ಜೂಜು ಆಡಲು ಕೆಲವು ಗ್ರಾಹಕರು ಹಣ ಪಾವತಿ ಮಾಡುತ್ತಿದ್ದರು.
Advertisement
ಕ್ಯಾಸಿನೊ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಸಿಸಿಬಿ ಅಧಿಕಾರಿಗೆ ಗಮನಕ್ಕೆ ಬಂದಿತ್ತು. ಎಸಿಪಿ ಪಿ.ಟಿ.ಸುಬ್ರಮಣ್ಯ ಅವರು ತಂಡ ರಚಿಸಿ ಗುರುವಾರ ಸಂಜೆ 7 ಗಂಟೆಗೆ ಕ್ಲಬ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಕ್ಯಾಸಿನೊ ಆಡಲು ಬಂದಿದ್ದ 40 ಜನರನ್ನು, 29 ಲಕ್ಷ ರೂ. ನಗದು ಹಾಗೂ ಜೂಜಾಡಲು ಆನ್‍ಲೈನ್ ಮೂಲಕ ಪಾವತಿ ಮಾಡಿದ್ದ 8.60 ಲಕ್ಷ ರೂ. ಸೇರಿದಂತೆ ಒಟ್ಟು 37.41 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ಈ ಕುರಿತು ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv