– ಅಧಿಕಾರ ವಹಿಸಿಕೊಂಡ 3 ದಿನದಲ್ಲೇ ಸ್ಪಷ್ಟ ಸಂದೇಶ
ಬೆಂಗಳೂರು: ಸಿಸಿಬಿ ಪೊಲೀಸರು ಮೆಜೆಸ್ಟಿಕ್, ಚಿಕ್ಕಪೇಟೆ, ಬಳೇಪೇಟೆಯಲ್ಲಿ ಅಕ್ರಮ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ.
ಅಕ್ರಮ ಜೂಜು ಅಡ್ಡೆಗಳ ಮೇಲೆ ರೈಡ್ ಮಾಡಿದ ಪೊಲೀಸರು ದಾಳಿ ಮಾಡಿದ ಸ್ಥಳದಲ್ಲಿ 38 ಲಕ್ಷ ರೂ. ನಗದು, ಹಣ ಲೆಕ್ಕ ಮಾಡುವ ಮಷಿನ್‍ಗಳು ಮತ್ತು 26 ಕ್ಲಬ್‍ನ ಮಾಲೀಕರು ಸೇರಿದಂತೆ 150ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಮಹಾಲಕ್ಷ್ಮೀ ಸ್ಪೋರ್ಟ್ಸ್ ಅಂಡ್ ಕ್ಲಬ್, ಕಲ್ಚರಲ್, ಬ್ಲೂಸ್ ಕ್ಲಬ್ ಗಳಲ್ಲಿ ಅಕ್ರಮವಾಗಿ ವಿವಿಧ ರೀತಿಯ ಜೂಜಾಟ ನಡೆಯುತ್ತಿತ್ತು.
Advertisement
Advertisement
ಕಳೆದ ಮೂರು ದಿನಗಳ ಹಿಂದೆಯಷ್ಟೇ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಲೋಕ್ ಕುಮಾರ್ ಸೂಚನೆ ಮೇರೆಗೆ ಈ ದಾಳಿ ನಡೆಸಲಾಗಿದೆ. ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಭಾನುವಾರ ತಡರಾತ್ರಿವರೆಗೂ ಈ ದಾಳಿ ಮುಂದುವರೆದಿದ್ದು, ಈ ಮೂಲಕ ಸಿಸಿಬಿ ಪೊಲೀಸರು ಅಕ್ರಮ ಚಟುವಟಿಗೆ ಮಾಡುವರಿಗೆ ಇನ್ನು ಉಳಿಗಾಲವಿಲ್ಲ ಅನ್ನೋ ಸಂದೇಶವನ್ನು ರವಾನೆ ಮಾಡಿದ್ದಾರೆ.
Advertisement
ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿಯಾಗಿದ್ದು, 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿಂದೆ ರೌಡಿಗಳಿಗೆ ಸಿಂಹ ಸ್ವಪ್ನರಾಗಿದ್ದ ಹಾಲಿ ಉತ್ತರ ವಲಯದ ಐಜಿಪಿಯಾಗಿರುವ ಅಲೋಕ್ ಕುಮಾರ್ ಸಿಸಿಬಿ ಎಡಿಜಿಪಿ ಹುದ್ದೆಗೆ ವರ್ಗವಾಗಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv