-ಮೀಟರ್ ಬಡ್ಡಿಗೆ ಹಣ ಕೊಟ್ಟು ಆಸ್ತಿ ಕಬಳಿಸುತ್ತಿದ್ದ ಓರ್ವ ಅರೆಸ್ಟ್
ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ಹಾಗೂ ಮೀಟರ್ ಬಡ್ಡಿ ಪ್ರತ್ಯೇಕ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐದು ಜನ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂದಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಗುಡ್ಡೆ ಮಂಜ, ಗಣೇಶ್, ಗೋಪಾಲನ್ ಹಾಗೂ ವಿಧ್ಯಾದರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ದೇಶ, ವಿದೇಶದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪಂದ್ಯಗಳಿಂದ ಹಿಡಿದು ರಣಜಿ ಪಂದ್ಯಗಳು ನಡೆಯುವಾಗಲೂ ಬೆಟ್ಟಿಂಗ್ ದಂಧೆಯನ್ನು ನಡೆಸುತ್ತಿದ್ದರು. ಅಷ್ಟೇ ಅಲ್ಲದೆ ಬೆಟ್ ಪ್ಲೇ, ಲೈನ್ ಸೇರಿದಂತೆ ಹಲವು ಆಪ್ ಗಳ ಮೂಲಕ ಬಾಲ್ ಟೂ ಬಾಲ್ ಬೆಟ್ಟಿಂಗ್ ಆಡುತ್ತಿದ್ದರು.
Advertisement
ಆರೋಪಿಗಳ ಮೇಲೆ ಕಳೆದ ಮೂರು ತಿಂಗಳಿಂದ ನೀಗಾ ಇಡಲಾಗಿತ್ತು. ಬಳಿಕ ಅವರನ್ನು ಬಂಧಿಸಲಾಗಿದೆ. ಆರೋಪಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಮೀಟರ್ ಬಡ್ಡಿ ಆರೋಪಿ ಅರೆಸ್ಟ್:
ಮೀಟರ್ ಬಡ್ಡಿ ಹೆಸರಲ್ಲಿ ಅಮಾಯಕರ ಜಮೀನುಗಳನ್ನ ಕಬಳಿಸುತ್ತಿದ್ದ ಆನೇಕಲ್ ಕೃಷ್ಣ ಎಂಬವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕಳೆದ ಹತ್ತು ವರ್ಷದಿಂದ ಪ್ರಜಾ ವಿಮೋಚನೆ ಎಂಬ ಚಳುವಳಿಯ ಅಧ್ಯಕ್ಷನಾಗಿ ಕೆಲಸ ಮಾಡಿಕೊಂಡಿದ್ದ. ಮೀಟರ್ ಬಡ್ಡಿಯನ್ನು ದಂಧೆಯಾಗಿಸಿಕೊಂಡು ಸಾಲ ಪಡೆದವರಿಂದ ಖಾಲಿ ಬಾಂಡ್‍ಗಳ ಮೇಲೆ ಸಹಿ ಹಾಕಿಸಿಕೊಳ್ಳುತ್ತಿದ್ದ.
Advertisement
ಆರು ತಿಂಗಳಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಸಾಲ ಪಡೆದವರ ಆಸ್ತಿಯನ್ನು ಕೃಷ್ಣ ಕಬಳಿಸುತ್ತಿದ್ದ. ಈತನಿಂದ ಅನೇಕರು ಶೋಷಣೆಗೆ ಹಾಗೂ ವಂಚನೆಗೆ ಒಳಗಾಗಿದ್ದಾರೆ. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿರುವ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv