ಗದಗ: ಮಹಾರಾಷ್ಟ್ರ ಸಿ.ಎಮ್ ಉದ್ಧವ್ ಠಾಕ್ರೆ ಟ್ವಿಟ್‍ಗೆ ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್ ಟಕ್ಕರ್ ಕೊಟ್ಟಿದ್ದಾರೆ.
ನಗರದ ಸಂಸದ ಶಿವಕುಮಾರ ಉದಾಸಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ಧವ್ ಠಾಕ್ರೆ ಅವರೊಬ್ಬ ಉದ್ಭವ ಠಾಕ್ರೆ. ಉದ್ದವ್ ಠಾಕ್ರೆ ಉದ್ದಟತನ ಟ್ವಿಟ್ ಮಾಡಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ಆಗಭಾರದು, ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು, ಅಭಿವೃದ್ಧಿಯಿಂದ ಕುಂಠಿತ ಆಗಬೇಕು ಎಂಬ ದುರುದ್ದೇಶ MES ನದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ದಾಂಧಲೆ ಎಬ್ಬಿಸುವ ಹುನ್ನಾರಕ್ಕೆ MES ಕೈ ಹಾಕಿದೆ. ನಿಸ್ಸಂದೇಹವಾಗಿ ಹೇಳಬಹುದು ಇದು MES ಕುತಂತ್ರ. ಈ ಕುತಂತ್ರಕ್ಕೆ ಉದ್ದವ್ ಠಾಕ್ರೆ ಬೆಂಬಲವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Advertisement
Advertisement
ಬೆಳಗಾವಿ ಅಧಿವೇಶನ ಹಾಳುಮಾಡಬೇಕು, ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬಾರದು, ಸದಾ ಗಲಬೆಯಿಂದ ಕೂಡಿರಬೇಕು ಎಂಬ ಉದ್ದೇಶ ಮರಾಠಿ ಪುಂಡರದ್ದಾಗಿದೆ. ಉದ್ಧವ್ ಠಾಕ್ರೆ ಟ್ವಿಟ್ ಖಂಡನೀಯ. ಕರ್ನಾಟಕ ನೆರೆಹೊರೆಯ ರಾಜ್ಯದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸದಾ ಉತ್ಸುಕತೆ ಇರುತ್ತೆ. ಕರ್ನಾಟಕದ ಆ ಉತ್ಸುಕತೆ ಮಹಾರಾಷ್ಟ್ರಕ್ಕೆ ಅದು ಬೇಕಾಗಿಲ್ಲ. ಇದನ್ನೂ ಓದಿ: ಮಹಿಳೆಯರಿಗೆ ವೀಡಿಯೋ ಕಾಲ್ ಮಾಡಿ ಅಸಭ್ಯ ವರ್ತನೆ – CPI ಅಮಾನತು
Advertisement
बंगळुरूमधील छत्रपती शिवाजी महाराजांच्या पुतळ्याचे विटंबना प्रकरण अतिशय निंदनीय आहे. छत्रपती शिवाजी महाराज सगळ्या देशाचे दैवत आहेत. त्यांचा अवमान तर दूर, कणभर अनादरही खपवून घेणार नाही, अशा शब्दांत मुख्यमंत्री उद्धव बाळासाहेब ठाकरे यांनी या घटनेबाबत निषेध व्यक्त केला आहे.
— CMO Maharashtra (@CMOMaharashtra) December 18, 2021
Advertisement
ತಮ್ಮ ಜನಪ್ರತಿಯತೆ ಕಡಿಮೆ ಆದಾಗ, ತಮ್ಮ ಆಡಳಿತ ವಿರುದ್ಧ ಅಲೆ ಎದ್ದಾಗ ಇಂತಹ ಹುನ್ನಾರಕ್ಕೆ ಕೈ ಹಾಕ್ತಾರೆ ಎಂದು ಕಿಡಿಕಾರಿದ್ರು. MES ಮಾಡಿದ್ದು ಖಂಡಿತವಾಗಿ ದುರುದ್ದೇಶ ಬಿಟ್ರೆ ಬೇರೆನು ಇಲ್ಲಾ. ಠಾಕ್ರೆ ಇತರನಾದ ಹೇಳಿಕೆ ಕೈಬಿಡಬೇಕು. ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಬೇಕು. ಶಾಂತಿ ಪ್ರೀಯರನ್ನು ಕೆರಳಿಸಬೇಡಿ ಎಂದು MES ಹಾಗೂ ಮಹಾರಾಷ್ಟ್ರ ಸಿ.ಎಮ್‍ಗೆ ಎಚ್ಚರಿಕೆ ನೀಡಿದ್ದಾರೆ.