ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಸಿಬಿಐ ಜವಾಬ್ದಾರಿ: ಮೋದಿ

Public TV
1 Min Read
Modi

ನವದೆಹಲಿ: ಭ್ರಷ್ಟಾಚಾರ (Corruption) ಅರ್ಹತೆಗೆ ದೊಡ್ಡ ಶತ್ರು. ಇದು ಸ್ವಜನಪಕ್ಷಪಾತವನ್ನು ಪ್ರೇರೇಪಿಸುತ್ತದೆ. ರಾಷ್ಟ್ರದ ಶಕ್ತಿಯನ್ನು ಕುಗ್ಗಿಸಿ, ಅಭಿವೃದ್ಧಿಯನ್ನು ಅಡ್ಡಿಪಡಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರೀಯ ತನಿಖಾ ದಳದ (CBI) ವಜ್ರ ಮಹೋತ್ಸವ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು ಸಂಸ್ಥೆಯ ಮುಖ್ಯ ಜವಾಬ್ದಾರಿಯಾಗಿದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಹುಡುಗಿಯರೇ.. ನಾನು ನಿಮ್ಮನ್ನ ಕಡೆಗಣಿಸಿಲ್ಲ – ನಾಗಾಲ್ಯಾಂಡ್ ಸಚಿವರು ಹೀಗ್ಯಾಕಂದ್ರು?

Narendra Modi CBI

ಭ್ರಷ್ಟಾಚಾರವು ಸಾಮಾನ್ಯ ಅಪರಾಧವಲ್ಲ. ಅದು ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಇದು ಅನೇಕ ಇತರ ಅಪರಾಧಗಳನ್ನು ಹುಟ್ಟುಹಾಕುತ್ತದೆ. ಭ್ರಷ್ಟಾಚಾರವು ನ್ಯಾಯ ಮತ್ತು ಪ್ರಜಾಪ್ರಭುತ್ವದ ಹಾದಿಯಲ್ಲಿ ದೊಡ್ಡ ಅಡಚಣೆಯಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವು ಪ್ರಜಾಪ್ರಭುತ್ವವನ್ನು ಅಡ್ಡಿಪಡಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಆರು ದಶಕಗಳಲ್ಲಿ ಸಂಸ್ಥೆ (ಸಿಬಿಐ) ಹಲವು ಸಾಧನೆಗಳನ್ನು ಮಾಡಿದೆ. ಕೆಲ ನಗರಗಳು, ಹೊಸ ಕಚೇರಿಗಳಲ್ಲಿ ಟ್ವಿಟ್ಟರ್ ಹ್ಯಾಂಡಲ್ ಅಥವಾ ಇತರ ಸೌಲಭ್ಯಗಳನ್ನು ಪ್ರಾರಂಭಿಸಲಾಗಿದೆ. ಇದು ಸಿಬಿಐ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಿಬಿಐ ತನ್ನ ಕೆಲಸ ಮತ್ತು ಕೌಶಲ್ಯದ ಮೂಲಕ ದೇಶದ ಸಾಮಾನ್ಯ ನಾಗರಿಕರಲ್ಲಿ ನಂಬಿಕೆ ಹುಟ್ಟುಹಾಕಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಉದ್ಯಮಗಳ ಸಮಿತಿಗೆ ಚುನಾವಣೆ – ಅತಿ ಹೆಚ್ಚು ಮತಗಳನ್ನು ಪಡೆದ ಸಂಸದ ನಾಸೀರ್ ಹುಸೇನ್

ಸಿಬಿಐ ಸತ್ಯ ಮತ್ತು ನ್ಯಾಯಪರತೆಯ ಬ್ರ್ಯಾಂಡ್‌ನಂತಿದೆ. ಆದ್ದರಿಂದಲೇ ಭೇದಿಸಲಾಗದ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಕೂಗು ಕೇಳುತ್ತಿರುತ್ತದೆ. ಎಲ್ಲರ ಬಾಯಲ್ಲೂ ಸಿಬಿಐ ಹೆಸರು ಇದೆ. ಆ ಮೂಲಕ ಸಿಬಿಐ ಸಾಮಾನ್ಯ ಜನರ ವಿಶ್ವಾಸವನ್ನೂ ಗಳಿಸಿದೆ ಎಂದು ಮೋದಿ ಶ್ಲಾಘಿಸಿದ್ದಾರೆ.

Share This Article