ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ಚಿತ್ರಗಳ (Child pornography) ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ (CBI) ‘ಮೇಘ ಚಕ್ರ’ (Megha Chakra) ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಶನಿವಾರ ಸಿಬಿಐ ದೇಶಾದ್ಯಂತ ಕರ್ನಾಟಕ ಸೇರಿದಂತೆ 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 56 ಸ್ಥಳಗಳಲ್ಲಿ ಶೋಧ ನಡೆಸಿದೆ.
ಕರ್ನಾಟಕದ ರಾಮನಗರ, ಕೋಲಾರದಲ್ಲಿ ಈ ದಾಳಿ ನಡೆದಿದೆ. ಇಂಟರ್‌ಪೋಲ್ ಸಿಂಗಾಪುರ ಮತ್ತು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ. ಕಳೆದ ವರ್ಷ ‘ಆಪರೇಷನ್ ಕಾರ್ಬನ್’ ಹೆಸರಿನಲ್ಲಿ ವಿಶ್ವಾದ್ಯಂತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾರ್ಯಾಚರಣೆ ನಡೆಸಲಾಗಿತ್ತು. ಈ ಕಾರ್ಯಾಚರಣೆ ವೇಳೆ ಹಲವು ಮಾಹಿತಿಗಳ ಸಿಕ್ಕಿದ ಆಧಾರದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಪಿಎಫ್‌ಐ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ – ಪ್ರಕರಣ ದಾಖಲು
ಅಪ್ರಾಪ್ತರ ಲೈಂಗಿಕ ಚಟುವಟಿಕೆಗಳ ಆಡಿಯೋ ಹಾಗೂ ವೀಡಿಯೋಗಳನ್ನು ಪ್ರಸಾರ ಮಾಡಲು ಪೆಡ್ಲರ್‌ಗಳು ಕ್ಲೌಡ್ ಸ್ಟೋರೇಜ್ ಅನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಇದರ ವಿರುದ್ಧದ ಕಾರ್ಯಾಚರಣೆಗೆ ‘ಮೇಘ ಚಕ್ರ’ ಎಂದು ಹೆಸರಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ – 60 ಮಹಿಳೆಯರು ಸೇರಿ 700ಕ್ಕೂ ಹೆಚ್ಚು ಮಂದಿ ಅರೆಸ್ಟ್
ಫಸ್ಟ್ ಏಜೆನ್ಸಿ ಎಂಬ ಸಂಸ್ಥೆ ದೇಶಾದ್ಯಂತ ಮಕ್ಕಳ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡುವ ಪೆಡ್ಲರ್‌ಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.